ಡಿ. 21ರಂದು ವಿಶ್ವ ಧ್ಯಾನ ದಿನ: ವಿಶ್ವಸಂಸ್ಥೆಯಲ್ಲಿ ಇದರ ಮಹತ್ವ ಬಿಚ್ಚಿಡಲಿರುವ ಶ್ರೀ ಶ್ರೀ ಗುರುದೇವ್ ರವಿಶಂಕರ್

|

Updated on: Dec 18, 2024 | 6:04 PM

ವಿಶ್ವ ಧ್ಯಾನದ ದಿನದಂದು ವಿಶ್ವ ಸಂಸ್ಥೆಯಲ್ಲಿ ರವಿಶಂಕರ್ ಗುರೂಜಿ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. 21 ಡಿಸೆಂಬರ್ 2024, ಭಾರತೀಯ ಸಮಯ ಸಂಜೆ 8.00 ಗಂಟೆಗೆ ಅನೇಕ ಜನರು, "ವರ್ಲ್ಡ್ ಮೆಡಿಟೇಟ್ಸ್ ವಿತ್ ಗುರುದೇವ್" ನಲ್ಲಿ ಭಾಗವಹಿಸಲಿದ್ದು, ವಿಶ್ವ ಧ್ಯಾನದ ದಿನ ಏಕೆ ಮುಖ್ಯ? ಇದರಿಂದಾಗುವ ಪ್ರಯೋಗಳೇನು ಎನ್ನುವುದನ್ನು ತಿಳಿಸಿಕೊಡಲಿದ್ದಾರೆ.

ಡಿ. 21ರಂದು ವಿಶ್ವ ಧ್ಯಾನ ದಿನ: ವಿಶ್ವಸಂಸ್ಥೆಯಲ್ಲಿ ಇದರ ಮಹತ್ವ ಬಿಚ್ಚಿಡಲಿರುವ ಶ್ರೀ ಶ್ರೀ ಗುರುದೇವ್ ರವಿಶಂಕರ್
Ravi Shankar Guruji
Follow us on

ಬೆಂಗಳೂರು, (ಡಿಸೆಂಬರ್ 18): ಜಾಗತಿಕ ಆಧ್ಯಾತ್ಮಿಕ ಗುರುಗಳಾದ, ಮಾನವತಾವಾದಿಗಳಾದ ಗುರುದೇವ್ ಶ್ರೀ ಶ್ರೀ ರವಿಶಂಕರರು ಡಿಸೆಂಬರ್ 21, ಶನಿವಾರ ಜಾಗತಿಕ ಧ್ಯಾನವನ್ನು ನಡೆಸಿಕೊಡಲಿದ್ದಾರೆ. ಇದರ ನಂತರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಡಿಸೆಂಬರ್ 21 ರಂದು “ವಿಶ್ವ ಧ್ಯಾನ ದಿನ”ವನ್ನು ಘೋಷಿಸಿ, ಇದನ್ನು ಸರ್ವಾನುಮತದಿಂದ ಅನುಮೋದಿಸಲಾಗುವುದು. ಈ ಐತಿಹಾಸಿಕ ಘಟನೆಯು, ಇನ್ನು ಮುಂದೆ ಪ್ರತಿ ವರ್ಷದ ನಡೆಯಲಿರುವ ಜಾಗತಿಕ ಧ್ಯಾನದ ಆಚರಣೆಯ ಉತ್ಸವಕ್ಕೆ ನಾಂದಿಯಾಗಲಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿವರ್ತನಕಾರಕವಾದ ಲಾಭಗಳನ್ನು ಬೀರುವ ಮತ್ತು ಶಾಂತಿ ಹಾಗೂ ಐಕ್ಯತೆಯನ್ನು ಪೋಷಿಸುವ ಧ್ಯಾನದದಿಂದ ಆಗುವ ಪ್ರಯೋಜನಗಳನ್ನು ಗುರುತಿಸಿದಂತಾಗುತ್ತದೆ.

ನ್ಯೂಯಾರ್ಕ್ ನ ವಿಶ್ವ ಸಂಸ್ಥೆಯ ‘ಪರ್ಮನೆಂಟ್ ಮಿಷನ್ ಆಫ್ ಇಂಡಿಯಾ’ ಡಿಸೆಂಬರ್ 21 ರಂದು ವಿಶ್ವ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಪ್ರಥಮ ವಿಶ್ವ ಧ್ಯಾನದ ದಿನದ ಆಚರಣೆಗೆ ಸಿದ್ಧವಾಗುತ್ತಿದೆ. ಈ ಮಹತ್ವಪೂರ್ಣ ದಿನದಂದು ಗುರುದೇವ್ ಶ್ರೀ ಶ್ರೀ ರವಿಶಂಕರರು ವಿಶ್ವ ಸಂಸ್ಥೆಯಲ್ಲಿ ಮುಖ್ಯ ಭಾಷಣವನ್ನು ನೀಡಲಿದ್ದಾರೆ. ಈ ಪ್ರಮುಖವಾದ ದಿನವನ್ನು “ವಿಶ್ವ ಶಾಂತಿ ಹಾಗೂ ಸಾಮರಸ್ಯಕ್ಕಾಗಿ ಧ್ಯಾನ” ಎಂದು ಕರೆಯಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡುತ್ತಾ ಗುರುದೇವ್ ಶ್ರೀ ಶ್ರೀ ರವಿಶಂಕರರು, “ವಿಶ್ವ ಸಂಸ್ಥೆಯು, ಧ್ಯಾನವನ್ನು ಗುರುತಿಸಿ ಒಂದು ಮಹತ್ತರವಾದ ಹೆಜ್ಜೆಯನ್ನಿಟ್ಟಿದೆ. ಧ್ಯಾನವು ಆತ್ಮವನ್ನು ಪೋಷಿಸುತ್ತದೆ, ಮನಸ್ಸನ್ನು ಪ್ರಶಾಂತಗೊಳಿಸುತ್ತದೆ, ಆಧುನಿಕತೆಯ ಸವಾಲುಗಳಿಗೆ ಪರಿಹಾರವನ್ನು ನೀಡುತ್ತದೆ.” ಎಂದರು.

ವಿಶ್ವ ಧ್ಯಾನ ದಿನದ ಪ್ರಮುಖಾಂಶಗಳು:

  • ವಿಶ್ವಸಂಸ್ಥೆಯಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರರಿಂದ ಪ್ರಧಾನ ಭಾಷಣ :
    ಒತ್ತಡ ಮತ್ತು ಸಂಘರ್ಷಗಳ ನಿವಾರಣೆಯಲ್ಲಿ ಪ್ರಖ್ಯಾತಿಯಾಗಿರುವ ಗುರುದೇವರು, ಜಾಗತಿಕ ಗಣ್ಯರನ್ನು, ವಿಶ್ವಸಂಸ್ಥೆಯ ಹಿರಿಯ ನಾಯಕರನ್ನು, ರಾಯಭಾರಿಗಳನ್ನು , ಅಂತಾರಾಷ್ಟ್ರೀಯ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿ, ಶಾಂತಿ ಹಾಗೂ ಐಕ್ಯತೆಯ ಪೋಷಣೆಯಲ್ಲಿ ಧ್ಯಾನದ ಮುಖ್ಯ ಪಾತ್ರವನ್ನು ವಿವರಿಸಲಿದ್ದಾರೆ.
  • ಜಾಗತಿಕ ನೇರ ಪ್ರಸಾರ: ಡಿಸೆಂಬರ್ 21ರಂದು ಗುರುದೇವರು ವಿಶ್ವ ಧ್ಯಾನ ದಿನ ಅಂಗವಾಗಿ, ಧ್ಯಾನವನ್ನು ಮಾರ್ಗದರ್ಶಿಸಲಿದ್ದಾರೆ. ಇದು ಜಾಗತಿನಾದ್ಯಂತ ನೇರ ಪ್ರಸಾರಗೊಳಲಿದೆ. ಅಂದು ಧನುರ್ಮಾಸದ ಈ ಪುಣ್ಯಕಾಲವು, ಸ್ವಾಧ್ಯಾಯ ಮತ್ತು ಪುನಶ್ಚೇತನಕ್ಕೆ ಶುಭ ಸಮಯ ಎಂದು ಪರಿಗಣಿಸಲಾಗಿದೆ.

ಸಂದರ್ಭ : “ಗುರುದೇವರೊಡನೆ ಜಗತ್ತು ಧ್ಯಾನ ಮಾಡಲಿದೆ”
ಕಾಲ : ಶನಿವಾರ, ಡಿಸೆಂಬರ್ 21,2024.
ಸಮಯ: ಭಾರತೀಯ ಕಾಲಮಾನ 8.00 ಸಂಜೆ IST
ಸ್ಥಳ : ಡಿಸೆಂಬರ್ 21, “ಗುರುದೇವರೊಂದಿಗೆ ವಿಶ್ವ ಧ್ಯಾನ ದಿನ”
http://wolf.me/world-meditation-day

ವಿಶ್ವ ಧ್ಯಾನದ ದಿನ ಏಕೆ ಮುಖ್ಯ?

ಹೆಚ್ಚುತ್ತಿರುವ ಒತ್ತಡ, ಹಿಂಸಾಚಾರ, ಸಮಾಜದಲ್ಲಿ ವಿಶ್ವಾಸದ ಕೊರತೆ, ಇವು ಕೆಲವು ಆಧುನಿಕ ಜಗತ್ತಿನ ಸವಾಲುಗಳಾಗಿವೆ. ಧ್ಯಾನವು, ಆಧುನಿಕತೆಯ ಸವಾಲುಗಳನ್ನು ಎದುರಿಸಲು ಬೇಕಾದ ಸಾಮರ್ಥ್ಯವನ್ನು ನೀಡುವುದೆಂದು ಸಾಬೀತಾತಾಗಿದೆ. ಈ ನಿಟ್ಟಿನಲ್ಲಿ ವಿಶ್ವ ಧ್ಯಾನದ ದಿನವನ್ನು ವಿಶ್ವಸಂಸ್ಥೆಯು ಸರ್ವಾನಮತದಿಂದ ಒಪ್ಪಿರುವುದು ಮಹತ್ತರ ಹೆಜ್ಜೆಯಾಗಿದೆ.

ಗುರುದೇವರು, ಕಳೆದ 43 ವರ್ಷಗಳಿಂದ ಧ್ಯಾನದ ಲಾಭಗಳನ್ನು 180 ದೇಶಗಳಲ್ಲಿ ಪಸರಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸುದೃಢತೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಬೆಳೆಸಲು ಧ್ಯಾನವೇ ಅತ್ಯುತ್ತಮವಾದ ದಾರಿಯೆಂದು ತೊರಿಸಿಕೊಟ್ಟಿದ್ದಾರೆ.

ಧ್ಯಾನಕ್ಕೆ ಪರಿವರ್ತಿಸುವ ಶಕ್ತಿಯಿದೆ ಎಂದು ಗುರುದೇವರ ವಿಶ್ವಾಸವು, ಜಗತ್ತಿನಾದ್ಯಂತ ಅವರ ಶಾಂತಿ-ಸ್ಥಾಪನೆಯ ಕಾರ್ಯಗಳಲ್ಲಿ ಸ್ಪಷ್ಟವಾಗಿ ತೋರುತ್ತದೆ. ಗುರುದೇವರು ಶ್ರೀಲಂಕಾ, ಇರಾಕ್, ವೆನೆಜುವೆಲಾ ಮತ್ತು ಕೊಲಂಬಿಯಾದಂತಹ ಸಂಘರ್ಷ-ಪೀಡಿತ ಪ್ರದೇಶಗಳಲ್ಲಿ ಶಾಂತಿ ಮಾತುಕತೆಗಳಲ್ಲಿ ಮಧ್ಯಸ್ಥಿಕೆ ವಹಿಸಿದ್ದಾರೆ ಮತ್ತು ಪ್ರಗತಿ ಸಾಧಿಸಿದ್ದಾರೆ. ಅವರು FARC ಮತ್ತು ಕೊಲಂಬಿಯಾ ಸರ್ಕಾರದ ನಡುವಿನ 52 ವರ್ಷಗಳ ದೀರ್ಘಕಾಲದ ಸಂಘರ್ಷವನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಭಾರತದಲ್ಲಿ, 500 ವರ್ಷಗಳಷ್ಟು ಹಳೆಯದಾದ ಬಾಬರಿ ಮಸೀದಿ-ರಾಮಮಂದಿರ ಸಂಘರ್ಷದ ಮಧ್ಯಸ್ಥಿಕೆಯಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ವೈವಿಧ್ಯಮಯ ಸಮುದಾಯಗಳ ನಡುವೆ ಸಂಧಾನ ಮಾತುಕತೆಯನ್ನು ಬೆಳೆಸುವ ಅವರ ವಿಧಾನವು, ಸಮಾಜದಲ್ಲಿ ಒಡಕು ಇರುವಾಗ ಹೇಗೆ ಧ್ಯಾನವು ಸ್ಪಷ್ಟತೆ, ಸಹಾನುಭೂತಿಗಳನ್ನು ಬೆಳೆಸುತ್ತದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಧ್ಯಾನವು ಮನಸ್ಸನ್ನು ಶಾಂತಗೊಳಿಸುವುದು ಮಾತ್ರವಲ್ಲದೆ ಉನ್ನತ ದೃಷ್ಟಿಕೋನವನ್ನು ಒದಗಿಸುತ್ತದೆ, ಇದು ಬೇರುಬಿಟ್ಟಿರುವ ಭೇದಗಳನ್ನು ಮೀರಿ, ಶಾಶ್ವತವಾದ ಶಾಂತಿಯ ಕಡೆಗೆ ಕೆಲಸ ಮಾಡಲು ನಾಯಕರು ಮತ್ತು ಸಮುದಾಯಗಳಿಗೆ ಸಬಲರನ್ನಾಗಿಸುತ್ತದೆ.” ಎಂದು ಗುರುದೇವರು ಒತ್ತಿಹೇಳುತ್ತಾರೆ.

ಜಾಗತಿಕ ರಾಜಕೀಯ ಸಂಘರ್ಷಗಳಿರಲಿ, ವೈಯಕ್ತಿಕ ಬಿಕ್ಕಟ್ಟುಗಳಿರಲಿ, ಧ್ಯಾನವು ರಾಷ್ಟ್ರೀಯತೆ, ಸಂಸ್ಕೃತಿ ಮತ್ತು ನಂಬಿಕೆಯ ಗಡಿಗಳನ್ನು ಮೀರಿದ ಸಾರ್ವತ್ರಿಕ ಪರಿಹಾರವನ್ನು ನೀಡುತ್ತದೆ. ಬಾಹ್ಯ ಚಟುವಟಿಕೆಯೊಂದಿಗೆ ಆಂತರಿಕ ಶಾಂತಿಯನ್ನು ಸಂಯೋಜಿಸುವ ಮೂಲಕ, ಇದು ಜಾಗತಿಕ ಶಾಂತಿ-ಸ್ಥಾಪನೆಯ ಪ್ರಯತ್ನಗಳಿಗೆ ಮೂಲಾಧಾರವಾಗಿ ಕಾರ್ಯನಿರ್ವಹಿಸುತ್ತದೆ.

Published On - 5:59 pm, Wed, 18 December 24