ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನಾ ಸ್ಥಳಕ್ಕೆ ಬಂದ ಲಕ್ಷ್ಮಿ ಹೆಬ್ಬಾಳ್ಕರ್ ಪೊಲೀಸರ ಮೇಲೆ ರೇಗಿದ್ದು ಯಾಕೆ?
ತಮ್ಮನ್ನು ಭೇಟಿಯಾಗಲು ಬಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ನೋಡಿ ಅಂಗನವಾಡಿ ತಾವು ಪ್ರತಿಭಟನೆ ನಡೆಸುತ್ತಿದ್ದೇವೆ ಅನ್ನೋದನ್ನೇ ಮರೆತು ಅವರೊಂದಿಗೆ ಕೈಕುಲುಕಲು ಮತ್ತು ಸೆಲ್ಫೀ ತೆಗೆದುಕೊಳ್ಳಲು ಮುಂದಾದರು. ಪ್ರತಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ನಡೆಸುತ್ತಾರೆ, ಆದರೆ ಪ್ರತಿಬಾರಿ ಅವರಿಗೆ ನಿರಾಶೆ ಎದುರಾಗುತ್ತಿರುವುದು ದುರಂತ.
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿಯ ಸುವರ್ಣಸೌಧ ಬಳಿಯಿರುವ ಕೊಂಡಸಕೊಪ್ಪದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಹೋದಾಗ ಪೊಲೀಸರ ಮೇಲೆ ರೇಗಿದ ಘಟನೆ ನಡೆಯಿತು. ಪೊಲೀಸರು ಸಚಿವೆಯನ್ನು ಅಲೆಮಾರಿ ಜನಾಂಗ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಕರೆದೊಯ್ಯಲು ಮುಂದಾದಾಗ ತಾಳ್ಮೆ ಕಳೆದುಕೊಂಡ ಲಕ್ಷ್ಮಿ ಹೆಬ್ಬಾಳ್ಕರ್ ಅಲ್ಲಿಗ್ಯಾಕೆ ತನ್ನನ್ನು ಕರೆದೊಯ್ಯುತ್ತಿರೋದು? ಸಂಬಂಧಪಟ್ಟ ಸಚಿವರು ಅಲ್ಲಿಗೆ ಹೋಗುತ್ತಾರೆ, ತನ್ನ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ತಾನು ಬಂದಿರೋದು ಎಂದು ಅವರು ಕೋಪದಲ್ಲಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ಹೋರಾಟ; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಣ್ಣ ಬಯಲಾಗಿದೆ: ಬಸನಗೌಡ ಯತ್ನಾಳ್