ಎಕ್ಸ್‌-ರೇ ಮಷೀನ್ ಹೆಸರಲ್ಲಿ ವೈದ್ಯರಿಗೆ ಪಂಗನಾಮ.. 20.55 ಲಕ್ಷ ರೂ ಪಡೆದು ಆರೋಪಿಗಳು ಎಸ್ಕೇಪ್

|

Updated on: Jan 06, 2021 | 8:21 AM

ಕ್ಸ್‌-ರೇ ಮಷೀನ್ ಕೊಡಿಸಿ ಲಾಭಾಂಶ ನೀಡುವ ಆಮಿಷ ಒಡ್ಡು ವೈದ್ಯರಿಗೆ ವಂಚಿಸಿದ್ದು ಆರೋಪಿಗಳಾದ ವಿಶ್ವನಾಥ ತೆನಹಳ್ಳಿ, ಪತ್ನಿ ರೂಪಾ ತೆನಹಳ್ಳಿ, ನಾಗರಾಜ ಅಕ್ಕಿ ಎಸ್ಕೇಪ್ ಆಗಿದ್ದಾರೆ.

ಎಕ್ಸ್‌-ರೇ ಮಷೀನ್ ಹೆಸರಲ್ಲಿ ವೈದ್ಯರಿಗೆ ಪಂಗನಾಮ.. 20.55 ಲಕ್ಷ ರೂ ಪಡೆದು ಆರೋಪಿಗಳು ಎಸ್ಕೇಪ್
ವಿಶ್ವನಾಥ ತೆನಹಳ್ಳಿ, ಪತ್ನಿ ರೂಪಾ ತೆನಹಳ್ಳಿ, ನಾಗರಾಜ ಅಕ್ಕಿ
Follow us on

ಬಾಗಲಕೋಟೆ: ಎಕ್ಸ್‌-ರೇ ಮಷೀನ್ ಹೆಸರಲ್ಲಿ ವೈದ್ಯರಿಗೆ ಟೋಪಿ ಹಾಕಿ ವಂಚಕರು ಪರಾರಿಯಾಗಿರುವ ಘಟನೆ ಜಿಲ್ಲೆಯ ಪ್ರತಿಷ್ಠಿತ ವಾಸನದ ಆಸ್ಪತ್ರೆಯಲ್ಲಿ ನಡೆದಿದೆ. ಕ್ಸ್‌-ರೇ ಮಷೀನ್ ಕೊಡಿಸಿ ಲಾಭಾಂಶ ನೀಡುವ ಆಮಿಷ ಒಡ್ಡು ವೈದ್ಯರಿಗೆ ವಂಚಿಸಿದ್ದಾರೆ.

ವಿಶ್ವನಾಥ ತೆನಹಳ್ಳಿ, ಪತ್ನಿ ರೂಪಾ ತೆನಹಳ್ಳಿ, ನಾಗರಾಜ ಅಕ್ಕಿ ವಿರುದ್ಧ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದ್ದು ಮೂವರ ವಿರುದ್ಧ ಬಾಗಲಕೋಟೆ ನಗರ ಠಾಣೆಯಲ್ಲಿ ಬಸವರಾಜ ಹೂಗಾರ ಎಂಬುವವರು ದೂರು ದಾಖಲಿಸಿದ್ದಾರೆ.

ಕ್ಸ್‌-ರೇ ಮಷೀನ್ ಕೊಡಿಸಿ ಲಾಭಾಂಶ ನೀಡುವ ಆಮಿಷ
ಬಾಗಲಕೋಟೆ ನಗರದ ವಾಸನದ ಆಸ್ಪತ್ರೆ ವೈದ್ಯರಿಂದ 20.55 ಲಕ್ಷ ರೂಪಾಯಿ ಹಣ ಪಡೆದು ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆಸ್ಪತ್ರೆಯಲ್ಲಿ ಎಕ್ಸ್‌-ರೇ ಮಷೀನ್ ಹಾಕಿಸಲು ಡೀಲ್ ಮಾಡಲಾಗಿತ್ತು. ವ್ಯವಹಾರದ ಲಾಭಾಂಶದಲ್ಲಿ ಪಾಲು ಕೊಡುವ ಆಮಿಷವೊಡ್ಡಿ ಲಕ್ಷಾಂತರ ರೂ. ಪಡೆದು ವಂಚನೆ ಮಾಡಲಾಗಿದೆಯಂತೆ.

ಆರೋಪಿ ವಿಶ್ವನಾಥ ತೆನಹಳ್ಳಿ ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಅನೇಕ ವೈದ್ಯರನ್ನು ಪರಿಚಯ ಮಾಡಿಕೊಂಡಿದ್ದ. ವೈದ್ಯರ ಪರಿಚಯದ ಬಳಿಕ ವಿವಿಧ ಕಡೆ ದುಡ್ಡು ಪಡೆದು ಎಸ್ಕೇಪ್ ಆಗಿದ್ದಾನೆ. ಆರೋಪಿಗಳು ಅಂದಾಜು ಎರಡು ಕೋಟಿಯಷ್ಟು ಹಣ ಪಡೆದು ವಂಚಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ವಾಸನದ ಆಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್ ಬಸವರಾಜ ಹೂಗಾರ ಬಾಗಲಕೋಟೆ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದು ಮೂವರು ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಬೆಂಗಳೂರಲ್ಲಿ IMA ಅಕ್ರಮದ ಮಾದರಿಯಲ್ಲೇ ಮತ್ತೊಂದು ಬಹುಕೋಟಿ ವಂಚನೆ ಬಯಲಿಗೆ!