ಯಾದಗಿರಿಯಲ್ಲಿ ಅಂಗನವಾಡಿ ಮೇಲ್ಛಾವಣಿ ಪ್ಲಾಸ್ಟರ್​ ಕುಸಿದು ಮೂವರು ಮಕ್ಕಳಿಗೆ ಗಾಯ

ಅಂಗನವಾಡಿ ಮೇಲ್ಛಾವಣಿ ಪ್ಲಾಸ್ಟರ್​ ಕುಸಿತವಾಗಿ ಮೂವರು ಮಕ್ಕಳು ಗಾಯಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ‌ ಪೊಲೀಸ್ ಠಾಣಾ ವ್ಯಾಪ್ತಿಯ ಮರಕಲ್ ಗ್ರಾಮದಲ್ಲಿ ನಡೆದಿದೆ.

ಯಾದಗಿರಿಯಲ್ಲಿ ಅಂಗನವಾಡಿ ಮೇಲ್ಛಾವಣಿ ಪ್ಲಾಸ್ಟರ್​ ಕುಸಿದು ಮೂವರು ಮಕ್ಕಳಿಗೆ ಗಾಯ
ಮೇಲ್ಛಾವಣಿ ಪ್ಲಾಸ್ಟರ್​ ಕುಸಿತ
Updated By: ವಿವೇಕ ಬಿರಾದಾರ

Updated on: Aug 11, 2023 | 10:01 AM

ಯಾದಗಿರಿ: ಅಂಗನವಾಡಿ (Anganwadi) ಮೇಲ್ಛಾವಣಿ ಪ್ಲಾಸ್ಟರ್​ ಕುಸಿತವಾಗಿ ಮೂವರು ಮಕ್ಕಳು (Children) ಗಾಯಗೊಂಡಿರುವ ಘಟನೆ ಜಿಲ್ಲೆಯ ಶಹಾಪುರ‌ (Shahapur) ಪೊಲೀಸ್ ಠಾಣಾ ವ್ಯಾಪ್ತಿಯ ಮರಕಲ್ ಗ್ರಾಮದಲ್ಲಿ ನಡೆದಿದೆ. 10 ತಿಂಗಳ ಮಗು ಕೀರ್ತಿ ಸೇರಿದಂತೆ ಮೂವರು ಮಕ್ಕಳಿಗೆ ಗಾಯವಾಗಿದೆ. ಗಾಯಾಳು ಕೀರ್ತಿಗೆ ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಅವರು ಇಂದ್ರಧನುಷ್​​ 5.O ಲಸಿಕೆಗೆ ಚಾಲನೆ ನೀಡಿದ್ದರು. ಮರಕಲ್ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇಂದ್ರಧನುಷ್ ಲಸಿಕೆ ಹಾಕುತ್ತಿದ್ದು, ಮಕ್ಕಳ ಮತ್ತು ಪೋಷಕರು ಬಂದಿದ್ದಾರೆ.

ಕೇಂದ್ರದಲ್ಲಿ ಇಂದ್ರಧನುಷ್ ಲಸಿಕೆ ಹಾಕುತ್ತಿರುವಾಗಲೇ ಕುಸಿದ ಮೇಲ್ಛಾವಣಿಯ ಪ್ಲಾಸ್ಟರ್ 10 ತಿಂಗಳ ಮಗು ಕೀರ್ತಿ ಸೇರಿ ಮೂವರ ತಲೆ ಮೇಲೆ ಬಿದ್ದಿದೆ. ಇನ್ನು ಅಲ್ಲಿಯೇ ಇದ್ದ ಇತರ ಆರು ಮಕ್ಕಳು ಹಾಗೂ ಪೋಷಕರು ಪಾರಾಗಿದ್ದಾರೆ.

ಕಳಪೆ ಕಟ್ಟಡ ನಿರ್ಮಾಣವೇ ಘಟನೆಗೆ ಕಾರಣ ಅಂತಾ ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗದಗ ಜಿಲ್ಲೆಯಲ್ಲಿ ಮದ್ರಾಸ್ ಐ ರೋಗ ಉಲ್ಬಣ

ಗದಗ: ಜಿಲ್ಲೆಯಲ್ಲಿ ಮದ್ರಾಸ್ ಐ ಅಥವಾ ರೆಡ್ ಐ ಸಾಂಕ್ರಾಮಿಕ ರೋಗ ಉಲ್ಬಣಗೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ (ಜಿಮ್ಸ್) ನಲ್ಲಿ ಆಡಳಿತ ಮಂಡಳಿ ಪ್ರತ್ಯೇಕ ಕ್ಲಿನಿಕ್ ಆರಂಭ ಮಾಡಿದೆ. ಜಿಲ್ಲೆಯಲ್ಲಿ ಒಂದು ವಾರದಲ್ಲಿ 1760 ಕ್ಕೂ ಹೆಚ್ಚು ಮದ್ರಾಸ್ ಐ ಪ್ರಕರಣಗಳು ಪತ್ತೆಯಾಗಿವೆ.

ಮದ್ರಾಸ್ ಐ ರೋಗಿಗಳಿಗೆ ಪ್ರತ್ಯೇಕ ವೈದ್ಯರನ್ನು ನೇಮಕ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ನಿತ್ಯ 80 ರಿಂದ 100 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಇದನ್ನೂ ಓದಿ: ತಾಂಡಾ ಗ್ರಾಮಕ್ಕೆ ತೆರಳಿ ಮಕ್ಕಳಿಗೆ ಕನ್ನಡ ಪಾಠ ಮಾಡಿದ ಯಾದಗಿರಿ ಜಿಲ್ಲಾಧಿಕಾರಿ ಮೇಡಂ!

ಮದ್ರಾಸ್ ಐ ಸಾಂಕ್ರಾಮಿಕ ರೋಗ ವೇಗವಾಗಿ ಹರಡುತ್ತೆ. ಮಕ್ಕಳು, ಮಹಿಳೆಯರು, ಹಿರಿಯರು ಸೇರಿದಂತೆ ಎಲ್ಲ ವಯೋಮಾನದವರಿಗೆ ಬರುತ್ತದೆ. ಮದ್ರಾಸ್‌ ಐ ಬಂದ್ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ವೈದ್ಯರ ಸಲಹೆ ಇಲ್ಲದೆ ಯಾವುದೇ ರೀತಿಯಾದ ಔಷಧಿ ಉಪಯೋಗಿಸಬೇಡಿ. ನಿರ್ಲಕ್ಷಿಸಿದರೇ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಜಿಮ್ಸ್ ವೈದ್ಯರು ಎಚ್ಚರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ