ಯಾದಗಿರಿಯಲ್ಲಿ ಕೊರೊನಾ ಲಸಿಕೆ ಹಾಕಿಸಲು ಅಧಿಕಾರಿಗಳಿಂದ ಮಾಸ್ಟರ್ ಪ್ಲಾನ್

| Updated By: sandhya thejappa

Updated on: Aug 28, 2021 | 12:30 PM

ಕೆಲ ಭಾಗದ ಜನರು ಮಾತ್ರ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಯಾದಗಿರಿಯಲ್ಲಿ ಕೊರೊನಾ ಲಸಿಕೆ ಹಾಕಿಸಲು ಅಧಿಕಾರಿಗಳಿಂದ ಮಾಸ್ಟರ್ ಪ್ಲಾನ್
ಅಂಗಡಿಗಳ ಬಾಗಿಲನ್ನು ಮುಚ್ಚಿಸಿದ ಅಧಿಕಾರಿಗಳು
Follow us on

ಯಾದಗಿರಿ: ರಾಜ್ಯದಲ್ಲಿ ಕೊರೊನಾ (Coronavirus) ಮೂರನೇ ಅಲೆ ಆತಂಕ ಶುರುವಾಗಿದೆ. ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಲಸಿಕೆ (Vaccine) ಒಂದೇ ಅಸ್ತ್ರವಾಗಿದೆ. ಈಗಾಗಲೇ ಎರಡು ಬಾರಿ ಲಾಕ್​ಡೌನ್​ ಮಾಡಿ ರಾಜ್ಯದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಹೀಗಾಗಿ ಕೊರೊನಾ ಮೂರನೇ ಅಲೆಯನ್ನು ಆರಂಭಿಕ ಹಂತದಲ್ಲಿ ನಿಯಂತ್ರಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹಾಗೇ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇದರ ಜೊತೆಗೆ ಪ್ರತಿಯೊಬ್ಬರು ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಇದು ಅನಿವಾರ್ಯವಾಗಿದೆ.

ಆದರೆ ಕೆಲ ಭಾಗದ ಜನರು ಮಾತ್ರ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಲಸಿಕೆ ಹಾಕಿಸಿಕೊಂಡರೆ ಅಡ್ಡ ಪಡಿಣಾಮ ಬೀರುತ್ತದೆ ಎಂದು ನಂಬಿರುವ ಜನರಿಗೆ ಲಸಿಕೆ ಹಾಕಿಸುವುದು ದೊಡ್ಡ ಸವಾಲಾಗಿದೆ.

ಹೀಗಾಗಿ ಯಾದಗಿರಿಯಲ್ಲಿ ಕೊರೊನಾ ಲಸಿಕೆ ಹಾಕಿಸಲು ಅಧಿಕಾರಿಗಳು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳದೆ ಇದ್ದವರ ಅಂಗಡಿಗಳನ್ನ ಅಧಿಕಾರಿಗಳು ಮುಚ್ಚಲು ಮುಂದಾಗಿದ್ದಾರೆ. ಲಸಿಕೆ ಹಾಕಿಸಿಕೊಂಡ ಮೇಲೆಯೇ ಅಂಗಡಿ ತೆರೆಯುವಂತೆ ಸೂಚನೆ ನೀಡಿದ್ದಾರೆ. ಲಸಿಕೆ ನಿರಾಕರಿಸಿದ್ದವರಿಗೆ ಅಧಿಕಾರಿಗಳು ತಕ್ಕ ಪಾಠ ಕಲಿಸಿದ್ದು, ಈ ಘಟನೆ ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ನಡೆದಿದೆ. ಅಂಗಡಿ ಮಾಲೀಕರು ಹಾಗೂ ಕುಟುಂಬಸ್ಥರು ಲಸಿಕೆ ಹಾಕಿಸಿಕೊಂಡ ನಂತರ ಅಂಗಡಿಗಳನ್ನು ತೆರೆಯಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ.

ಇದನ್ನೂ ಓದಿ

ಮೈಸೂರು ಗ್ಯಾಂಗ್​ ರೇಪ್​ ಪ್ರಕರಣ ಭೇದಿಸಲು 5 ಜಿಲ್ಲೆಗಳ 26 ಕ್ರೈಂ ಎಕ್ಸ್​​ಪರ್ಟ್​ಗಳು ಫೀಲ್ಡ್​​ಗೆ ಇಳಿದಿದ್ದರು! ವಿವರ ಇಲ್ಲಿದೆ

ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ಜಲಾಶಯ ನೀರು! ಇದು ಇಂದು ನಿನ್ನೆಯ ಕಥೆಯಲ್ಲ

(Authorities are struggling to vaccinate to Yadgir people)