ಕಳೆದ ಬಾರಿಯಂತೆ ಈ ಬಾರಿ ಕೂಡ ಬಿಳಿ ಬಂಗಾರ ಹತ್ತಿಗೆ ಭರ್ಜರಿಯಾದ ಬೆಲೆಯೇನೂ ಇದೆ. ಆದ್ರೆ ಜಿಲ್ಲೆಯ ರೈತರು ಮಾತ್ರ ಮೋಸದ ಬಲೆಗೆ ಬಿದ್ದು ನಕಲಿ ಬೀಜಗಳನ್ನ ಬಿತ್ತನೆ ಮಾಡಿ (duplicate cotton seeds) ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ರೈತರ ನೆರವಿಗೆ ನಿಲ್ಲಬೇಕಾಗಿದೆ. ಆ ಜಿಲ್ಲೆಯ ರೈತರು ಮಾರುಕಟ್ಟೆಯಲ್ಲಿ ಒಳ್ಳೆಯ ಬಿತ್ತನೆ ಬೀಜ ಬಂದಿದೆ ಅಂತ ಖರೀದಿ ಮಾಡಿ ಬಿತ್ತನೆ ಮಾಡಿದ್ರು. ಹೊಸ ಕಂಪನಿಯ ಬೀಜಗಳು ಒಳ್ಳೆಯ ಫಲಸು ಬರುತ್ತೆ ಅಂತ ಅಂದುಕೊಂಡು ಸಾವಿರಾರು ರೂ. ಖರ್ಚು ಸಹ ಮಾಡಿದ್ರು.. ಆದ್ರೆ ಬೆಳೆ ಬೆಳೆದು ನಾಲ್ಕು ತಿಂಗಳ ಬಳಿಕ ಬೀಜದ ಅಸಲಿ ಕಹಾನಿ ಬಯಲಾಗಿದೆ.. ರೈತರು (Cotton growers) ನಂಬಿ ಖರೀದಿ ಮಾಡಿದ ಬೀಜ ನಕಲಿ ಅಂತ ಗೊತ್ತಾಗಿದ್ದು ಈಗ ಕಂಗಾಲಾಗುವಂತೆ ಮಾಡಿದೆ.
ನಕಲಿ ಬೀಜ ಮೋಸದ ಜಾಲಕ್ಕೆ ಬಿದ್ದ ಅನ್ನದಾತರು ಸಾವಿರಾರು ರೂಪಾಯಿ ಖರ್ಚು ಮಾಡಿ ಬೀಜ ಖರೀದಿ ಮಾಡಿ ಬಿತ್ತನೆ ಮಾಡಿದ್ರು ಫಲಸು ಬಂದಿಲ್ಲ. ಮನುಷ್ಯನೆತ್ತರಕ್ಕೆ ಗಿಡ ಬೆಳೆದ್ರು ಹೂವು ಕಾಯಿ ಬಿಡಲಿಲ್ಲ. ಯಸ್ ಈ ದೃಶ್ಯಗಳು ಕಂಡು ಬಂದಿರುವುದು ಯಾದಗಿರಿ (Yadgir) ಜಿಲ್ಲೆಯ ಶಹಾಪುರ (shahapur) ತಾಲೂಕಿನಲ್ಲಿ. ಹೌದು ಈ ಬಾರಿ ಹತ್ತಿ ಬೆಳೆಗೆ ಭರ್ಜರಿಯಾದ ಬೆಲೆಯಿದೆ. ಕಳೆದ ಬಾರಿಯೂ ಬಿಳಿ ಬಂಗಾರ ಹತ್ತಿಗೆ ಭರ್ಜರಿಯಾಗಿ ಬೆಲೆ ಸಿಕ್ಕ ಕಾರಣಕ್ಕೆ ಈ ಬಾರಿಯೂ ರೈತರು ಹೆಚ್ಚಾಗಿ ಹತ್ತಿ ಬೆಳೆಯನ್ನ ಬೆಳೆದಿದ್ದಾರೆ.
ಆದ್ರೆ ಯಾದಗಿರಿ ಜಿಲ್ಲೆಯ ಕೆಲ ರೈತರು ನಕಲಿ ಬೀಜ ಜಾಲಕ್ಕೆ ಬಿದ್ದು ಕಂಗಲಾಗಿದ್ದಾರೆ.. ಅದಕ್ಕೆ ಉದಾಹರಣೆ ಅಂದ್ರೆ ಶಹಾಪುರ ತಾಲೂಕಿನ ಬೆವಿನಹಳ್ಳಿ ಗ್ರಾಮದ ರೈತರು. ಈ ಬೆವಿನಹಳ್ಳಿ ಗ್ರಾಮದ ಬಹುತೇಕ ರೈತರು ಈ ಬಾರಿ ಹತ್ತಿಯನ್ನೇ ಬಿತ್ತನೆ ಮಾಡಿದ್ದಾರೆ. ಬೆಳೆ ಕೂಡ ಚೆನ್ನಾಗಿ ಬಂದಿದ್ದು ಭರ್ಜರಿಯಾದ ಇಳುವರಿ ಸಿಗುತ್ತೆ ಅಂತ ರೈತರು ಅಂದುಕೊಂಡಿದ್ರು. ಆದ್ರೆ ಆಗಿದೆಲ್ಲ ಉಲ್ಟಾ. ಕಾರಣ ಅಂದ್ರೆ ರೈತರು ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿದ್ದು ನಕಲಿ ಬೀಜವನ್ನ.
ಕಳೆದ ನಾಲ್ಕು ವರ್ಷಗಳಿಂದ ಮಾರುಕಟ್ಟೆಯಲ್ಲಿ ಬಂದಿದ್ದ ತಳಿಯ ಬೀಜಗಳಿಂದ ಭರ್ಜರಿಯಾಗಿ ಇಳುವರಿ ಬರುತ್ತೆ ಅಂತ ನೂರಾರು ರೈತರು ತುಳಿಸಿ ಕಂಪನಿಯ ಅಕೀರಾ ಎಂಬ ತಳಿಯ ಹತ್ತಿ ಬೀಜವನ್ನ ಸಾವಿರಾರು ರೂ. ಖರ್ಚು ಮಾಡಿ ರೈತರು ಖರೀದಿ ಮಾಡಿಕೊಂಡು ಬಂದು ಬಿತ್ತನೆಯನ್ನ ಮಾಡಿದ್ರು.. ಬಿತ್ತನೆ ಮಾಡಿದ ಬಳಿಕ ಸಾಕಷ್ಟು ಹಣವನ್ನ ಖರ್ಚು ಮಾಡಿ ಗೊಬ್ಬರ ಹಾಗೂ ಕಿಟನಾಶಕವನ್ನ ಸಿಂಪಡಣೆ ಕೂಡ ಮಾಡಿದ್ದರು.
ಇಷ್ಟೆಲ್ಲ ಖರ್ಚು ಮಾಡಿದ ರೈತರಿಗೆ ಒಳ್ಳೆಯ ಫಲಸು ಬರುತ್ತೆ ಅಂದು ಕೊಂಡಿದ್ರು. ರೈತರು ಅಂದುಕೊಂಡಿದ್ದಕ್ಕಿಂತ ಎತ್ತರವಾಗಿ ಬೆಳೆ ಕೂಡ ಬೆಳೆದು ನಿಂತಿತ್ತು. ಆದ್ರೆ ಈಗ ನಾಲ್ಕು ತಿಂಗಳ ಹಿಂದೆ ಬಿತ್ತನೆ ಮಾಡಿದ ನಕಲಿ ಬೀಜಗಳ ಅಸಲಿ ಕಹಾನಿ ಗೊತ್ತಾಗಿದೆ ಎನ್ನುತ್ತಾರೆ ಮೋಸಕ್ಕೆ ಒಳಗಾದ ರೈತ ಮಲ್ಲಿಕಾರ್ಜುನ್.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ: ಜೂನ್ 1ಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ರಿಂದ ಗರ್ಭಗುಡಿಗೆ ಶಂಕುಸ್ಥಾಪನೆ
ನ್ನು ಜಿಲ್ಲೆಯಲ್ಲಿ ಈ ಬೆವಿನಹಳ್ಳಿ ಗ್ರಾಮದ ರೈತರು ಮಾತ್ರವೇ ಈ ಅಕೀರಾ ಕಂಪನಿಯ ಬೀಜವನ್ನ ಬಿತ್ತನೆ ಮಾಡಿ ಮೋಸ ಹೋಗಿಲ್ಲ ಬದಲಿಗೆ ಈ ರೀತಿಯ ಸಾಕಷ್ಟು ಗ್ರಾಮಗಳಲ್ಲಿ ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ ನಾಲ್ಕು ವರ್ಷಗಳಿಂದ ಈ ಅಕೀರಾ ಕಂಪನಿಯ ಬೀಜವನ್ನ ರೈತರು ಬಿತ್ತನೆ ಮಾಡಿ ಭರ್ಜರಿಯಾಗಿ ಫಸಲು ಕೂಡ ಪಡೆದುಕೊಂಡಿದ್ದಾರೆ.
ಆದ್ರೆ ಈ ಬಾರಿ ಕಂಪನಿಯಿಂದ ಮೋಸ ಆಗಿದಿಯೇ ಅಥವಾ ಕಂಪನಿ ಹೆಸರನ್ನ ಬಳಸಿಕೊಂಡು ಮೋಸಗಾರರು ಮಾರುಕಟ್ಟೆಯಲ್ಲಿ ನಕಲಿ ಬೀಜವನ್ನ ಮಾರಾಟ ಮಾಡಿದ್ದಾರೋ ಎನ್ನೋದು ತಿಳಿಯದಂತಾಗಿದೆ.
ಆದ್ರೆ ಜಿಲ್ಲೆಯಲ್ಲಿ ಸುಮಾರು ನೂರಾರು ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಇದೇ ಕಂಪನಿಯ ಬೀಜವನ್ನ ಬಿತ್ತನೆ ಮಾಡಿ ಮೋಸ ಹೋಗಿದ್ದಾರೆ. ಯಾವ ಅಂಗಡಿಯಲ್ಲಿ ಖರೀದಿ ಮಾಡಿಕೊಂಡು ಬಂದಿದ್ದಾರೋ ಆ ಅಂಗಡಿಯವರು ರೈತರಿಗೆ ಉತ್ತರಿಸುತ್ತಿಲ್ಲ. ಕಂಪನಿಯಿಂದ ಹೇಗೆ ಬಂದಿದೆಯೋ ನಾವು ಅದೇ ರೀತಿಯಾಗಿ ಮಾರಾಟ ಮಾಡಿದ್ದೇವೆ ಅಂತಾ ಜಾರಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಅಡಿಪಾಯಕ್ಕೆ ಬೆಂಗಳೂರಿನಿಂದ ಕಲ್ಲುಗಳ ರವಾನೆ, ಹನುಮನ ನಾಡಿನಿಂದ ರಾಮನೆಡೆಗೆ ಹೊರಟ ಲಾರಿಗಳು
ನಾಲ್ಕು ತಿಂಗಳವರೆಗೆ ಬೆಳೆ ಚೆನ್ನಾಗಿ ಬಂದಿದೆ, ಆದ್ರೆ ಹೂವು ಬಿಟ್ಟು ಕಾಯಿ ಕಟ್ಟುವ ಸಮಯದಲ್ಲಿ ಬೀಜದ ನಿಜ ಗುಣ ಬಯಲಾಗಿದೆ. ಮನುಷ್ಯನೆತ್ತರ ಬೆಳೆದಿರುವ ಈ ಹತ್ತಿ ಗಿಡಗಳಲ್ಲಿ ಹುಡುಕಿದರೂ ಕಾಯಿ ಸಿಗ್ತಾಯಿಲ್ಲ. ಇನ್ನು ಗಿಡಕ್ಕೆ ಒಂದೆರಡು ಕಾಯಿಗಳು ಸಿಕ್ಕರೂ ಸಹ ಕಾಯಿ ಒಡೆಯುವುದ್ದಕ್ಕೂ ಮುನ್ನವೆ ಒಣಗಿ ಹೋಗುತ್ತಿದೆ. ಸಾವಿರಾರು ರೂ. ಖರ್ಚು ಮಾಡಿ ರೈತರು ಜಮೀನು ಲೀಸ್ ಗೆ ಪಡೆದಿದ್ದಾರೆ.
ಆದ್ರೆ ಈಗ ಬೆಳೆ ಕಳೆದುಕೊಂಡಿದ್ದರಿಂದ ಎಕರೆಗೆ ಒಂದರಿಂದ 1.5 ಲಕ್ಷ ನಷ್ಟವನ್ನ ರೈತರು ಅನುಭವಿಸುತ್ತಿದ್ದಾರೆ. ಈ ಬಗ್ಗೆ ರೈತರು ಕೃಷಿ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ಕೂಡ ನೀಡಿದ್ದಾರೆ. ಹೀಗಾಗಿ ಕೂಡಲೇ ಮೋಸದ ಬಲೆಗೆ ಬಿದ್ದ ರೈತರಿಗೆ ಪರಿಹಾರವನ್ನ ನೀಡಬೇಕು ಜೊತೆಗೆ ಮೋಸ ಮಾಡಿದ ತುಳಸಿ ಕಂಪನಿ ವಿರುದ್ಧ ಕ್ರಮಕೈಗೊಳ್ಳಬೇಕು ಅಂತಾ ಆಗ್ರಹಿಸುತ್ತಿದ್ದಾರೆ.
ಒಟ್ನಲ್ಲಿ ಕಳೆದ ಬಾರಿಯಂತೆ ಈ ಬಾರಿ ಕೂಡ ಬಿಳಿ ಬಂಗಾರ ಹತ್ತಿಗೆ ಭರ್ಜರಿಯಾದ ಬೆಲೆಯೇನೂ ಇದೆ. ಆದ್ರೆ ಜಿಲ್ಲೆಯ ರೈತರು ಮಾತ್ರ ಮೋಸದ ಬಲೆಗೆ ಬಿದ್ದು ನಕಲಿ ಬೀಜಗಳನ್ನ ಬಿತ್ತನೆ ಮಾಡಿ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ರೈತರ ನೆರವಿಗೆ ನಿಲ್ಲಬೇಕಾಗಿದೆ. (ವರದಿ: ಅಮೀನ್ ಹೊಸುರ್, ಟಿವಿ 9, ಯಾದಗಿರಿ)
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.