ಅಯೋಧ್ಯೆ ರಾಮಮಂದಿರ ಅಡಿಪಾಯಕ್ಕೆ ಬೆಂಗಳೂರಿನಿಂದ ಕಲ್ಲುಗಳ ರವಾನೆ, ಹನುಮನ ನಾಡಿನಿಂದ ರಾಮನೆಡೆಗೆ ಹೊರಟ ಲಾರಿಗಳು

ಸ್ವಾಮಿ ವಿವೇಕಾನಂದ ಸೇವಾ ಸಮಿತಿ ಮತ್ತು ಹನುಮಾನ್ ಗ್ರಾನೈಟ್ಸ್ ನಿಂದ ಒಟ್ಟು 10 ಸಾವಿರ ಕಲ್ಲುಗಳನ್ನ ರಾಮಮಂದಿರ ನಿರ್ಮಾಣದ ಅಡಿಪಾಯಕ್ಕೆ ಕಳಿಸಲಾಗುತ್ತಿದೆ. ಇಂದು ಬಿಜೆಪಿ ನಾಯಕರು, ಸ್ವಾಮೀಜಿಗಳು ಮತ್ತು ಸಚಿವರಿಂದ ಕಲ್ಲುಗಳ ರವಾನೆಗೆ ಚಾಲನೆ ಸಿಕ್ಕಿದೆ.

ಅಯೋಧ್ಯೆ ರಾಮಮಂದಿರ ಅಡಿಪಾಯಕ್ಕೆ ಬೆಂಗಳೂರಿನಿಂದ ಕಲ್ಲುಗಳ ರವಾನೆ, ಹನುಮನ ನಾಡಿನಿಂದ ರಾಮನೆಡೆಗೆ ಹೊರಟ ಲಾರಿಗಳು
ಅಯೋಧ್ಯೆ ರಾಮಮಂದಿರ ಅಡಿಪಾಯಕ್ಕೆ ಬೆಂಗಳೂರಿನಿಂದ ಕಲ್ಲುಗಳ ರವಾನೆ

ದೇವನಹಳ್ಳಿ: ಐತಿಹಾಸಿಕ ಅಯೋಧ್ಯೆ ರಾಮಮಂದಿರ ಅಡಿಪಾಯಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಗ್ರಾನೈಟ್ ಕಲ್ಲುಗಳನ್ನು ರವಾನಿಸಲಾಗುತ್ತಿದೆ. ದೇವನಹಳ್ಳಿ ತಾಲೂಕಿನ ಸಾದಹಳ್ಳಿಯಿಂದ ಕಲ್ಲುಗಳನ್ನ ಹೊತ್ತ ಲಾರಿಗಳಿಗೆ ಇಂದು ಚಾಲನೆ ನೀಡಲಾಗಿದೆ. ಇಂದು ಐದು ಲಾರಿಗಳಲ್ಲಿ ಅಡಿಪಾಯದ ಕಲ್ಲುಗಳನ್ನು ರವಾನಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದ ಸೇವಾ ಸಮಿತಿ ಮತ್ತು ಹನುಮಾನ್ ಗ್ರಾನೈಟ್ಸ್ ನಿಂದ ಒಟ್ಟು 10 ಸಾವಿರ ಕಲ್ಲುಗಳನ್ನ ರಾಮಮಂದಿರ ನಿರ್ಮಾಣದ ಅಡಿಪಾಯಕ್ಕೆ ಕಳಿಸಲಾಗುತ್ತಿದೆ.

ಇಂದು ಬಿಜೆಪಿ ನಾಯಕರು, ಸ್ವಾಮೀಜಿಗಳು ಮತ್ತು ಸಚಿವರಿಂದ ಕಲ್ಲುಗಳ ರವಾನೆಗೆ ಚಾಲನೆ ಸಿಕ್ಕಿದೆ. ಅಡಿಪಾಯಕ್ಕೆ ಬೇಕಾಗುವ ಕಲ್ಲನ್ನ ಸಾದಹಳ್ಳಿಯಲ್ಲೇ ಸಿದ್ದಪಡಿಸಿ ಹನುಮನ ನಾಡಿನಿಂದ ರಾಮನೆಡೆಗೆ ಅನ್ನೂ ಘೋಷಣೆಯೊಂದಿಗೆ ಕಲ್ಲುಗಳನ್ನು ಕಳಿಸಲಾಗುತ್ತಿದೆ. ಈಗಾಗಲೆ ಕಲ್ಲುಗಳು ಡ್ಯಾಮೇಜ್ ಆಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಲಾರಿಗಳಲ್ಲಿ ಜೋಡಿಸಿ 11:30 ರ ಸುಮಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಗೇಟ್ ನಿಂದ ಚಾಲನೆ ನೀಡಲಾಗಿದೆ.

ಈ ವೇಳೆ ದೇವನಹಳ್ಳಿ ಬಳಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಮಮಂದಿರ ಹೋರಾಟದಲ್ಲಿ ಹಲವರು ಭಾಗವಹಿಸಿದ್ರು. ಶತಮಾನಗಳ ಕಾಲ ಹೋರಾಟ ನಡೆಸಲಾಯ್ತು. ನಮಗೆಲ್ಲರಿಗೂ ಅವಮಾನ ಮಾಡ್ತಿದ್ದ ಆ ಕಟ್ಟಡವನ್ನು ತೆಗೆಯಲಾಯ್ತು. ಅಲ್ಲಿ ಭವ್ಯ ರಾಮಮಂದಿರ ಆಗುವ ಸಂಕಲ್ಪ ಎಲ್ಲರದ್ದಾಗಿತ್ತು. ಬಿಜೆಪಿ ಬಂದ ಮೇಲೆ ರಾಮಮಂದಿರ ನಿರ್ಮಾಣ ಆಗುವ ನಿರೀಕ್ಷೆ ಇತ್ತು. ಕೋರ್ಟಿಗೆ ಬೇಕಾದ ಎಲ್ಲ ದಾಖಲೆ ಒದಗಿಸಲಾಯಿತು. ಸುಪ್ರೀಂ ಕೋರ್ಟ್ ಸಹ ಈಗ ರಾಮಮಂದಿರದ ಪರ ನಿಂತಿದೆ. ಸಾಕಷ್ಟು ‌ಜನ ದೇಣಿಗೆ ಕೊಟ್ಟಿದ್ದಾರೆ. ಈಗ ಪ್ರಧಾನಿಗಳು ರಾಮಮಂದಿರಕ್ಕೆ ಅಡಿಗಲ್ಲು ಹಾಕಿದ್ದಾರೆ. ನಮ್ಮ ಸಾದಹಳ್ಳಿಯ ಬಂಡೆ ರಾಮಮಂದಿರದ ನಿರ್ಮಾಣಕ್ಕೆ ಹೋಗುತ್ತಿರುವುದು ಹೆಮ್ಮೆಯ ವಿಚಾರ. ಇಡೀ ದೇಗುಲಕ್ಕೆ ಅಡಿಪಾಯವಾಗಿ ಕರ್ನಾಟಕ ಈ ಕಲ್ಲಿನ ರೂಪದಲ್ಲಿ ಇರುತ್ತೆ. ಇದು ಉತ್ತರ ಭಾರತದ ದಕ್ಷಿಣ ಭಾರತದ ಜತೆಗಿನ ಭಾವೈಕ್ಯದ ಸಂಕೇತ. ಆದಷ್ಟು ಬೇಗ ಮಂದಿರ ನಿರ್ಮಾಣ ಆಗಲಿದೆ ಎಂದು ರಾಮಮಂದಿರ ಕಲ್ಲು ರವಾನೆಗೆ ಚಾಲನೆ ನೀಡಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ‌ ಹೇಳಿಕೆ ನೀಡಿದ್ರು.

ayodhya stones

ಅಯೋಧ್ಯೆ ರಾಮಮಂದಿರ ಅಡಿಪಾಯಕ್ಕೆ ಬೆಂಗಳೂರಿನಿಂದ ಕಲ್ಲುಗಳ ರವಾನೆ

ಇದನ್ನೂ ಓದಿ: ರಾಮಮಂದಿರ ಭೂಮಿ ಪೂಜೆ ಮೊದಲ ವಾರ್ಷಿಕೋತ್ಸದ ಅಂಗವಾಗಿ ಅಯೋಧ್ಯೆಯಲ್ಲಿ ವಿಶೇಷ ಕಾರ್ಯಕ್ರಮಗಳು

Click on your DTH Provider to Add TV9 Kannada