ಹಗೆ ಸಾಧಿಸಲು ಪಂಪ್ಸೆಟ್ ಕಳ್ಳತನ ಕೇಸು: ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಯತ್ನಿಸಿದ ಯುವಕ, ಚಿಂತಾಜನಕ ಸ್ಥಿತಿ
ಕಳ್ಳತನ ಕೇಸ್ ವಿಷಯ ತಿಳಿದ ಯುವಕ, ಮರ್ಯಾದೆಗೆ ಹೆದರಿ ಹೊಲದಲ್ಲಿಯೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮಗನ ವಿರುದ್ಧ ಗುರುತರವಾದ ಯಾವುದೇ ಕಳ್ಳತನ ಆರೋಪವಿಲ್ಲ. ದೂರುದಾರರು ವೈಯಕ್ತಿಕ ದ್ವೇಷ ಸಾಧಿಸಲು ಮಗನ ಮೇಲೆ ಸುಳ್ಳು ಕಳ್ಳತನದ ಆರೋಪ ಮಾಡಿದ್ದಾರೆ. ನಮ್ಮದೇ ಸಾಕಷ್ಟು ಜಮೀನಿದೆ ಎಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ ಸಾಬಣ್ಣನ ತಂದೆ ಚಂದ್ರಪ್ಪ ಸಿದ್ದಪ್ಪನವರ ಅಳಲು ತೋಡಿಕೊಂಡಿದ್ದಾರೆ.
ಯಾದಗಿರಿ, ಆಗಸ್ಟ್ 31: ಮರ್ಯಾದೆಗೆ ಹೆದರಿದ ಯುವಕನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ (Suicide Attempt) ಘಟನೆ ನಡೆದಿದೆ. ಯಾದಗಿರಿ ತಾಲೂಕಿನ ಮುಷ್ಟೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮುಷ್ಟೂರ ಗ್ರಾಮದ ಸಾಬಣ್ಣ ಸಿದ್ದಪ್ಪನವರ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಯುವಕನ ಸ್ಥಿತಿ ಚಿಂತಾಜನಕಗೊಂಡಿದ್ದು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಂಪ್ಸೆಟ್, ಮೋಟಾರ್ ಕಳ್ಳತನವಾದ ಬಗ್ಗೆ (Pumpset theft case) ಮುಷ್ಟೂರ ಗ್ರಾಮದ ಹಲವರು ಯಾದಗಿರಿ (Yadagiri) ಗ್ರಾಮೀಣ ಪೊಲೀಸ್ ಠಾಣೆಗೆ ಹೋಗಿ, ದೂರು ನೀಡಿದ್ದರು.
ಗ್ರಾಮೀಣ ಠಾಣೆ ಪೊಲೀಸರು ಗ್ರಾಮಸ್ಥರ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿ ತನಿಖೆಗೆ ಮುಂದಾಗಿದ್ದರು. ಮುಷ್ಟೂರ ಗ್ರಾಮದ ಯುವಕ ಸಾಬಣ್ಣ ಮನೆಗೆ ತೆರಳಿ ಮನೆಯಲ್ಲಿ ಶೋಧ ನಡೆಸಿದ್ದರು. 2 ಹಳೇ ಸ್ಟಾರ್ಟರ್, 4 ಬಂಡಲ್ ಸರ್ವಿಸ್ ವೈಯರ್, ಕಬ್ಬಿಣದ ಸಾಮಾನು ವಶಕ್ಕೆ ಪಡೆದಿದ್ದರು. ವಸ್ತುಗಳನ್ನ ವಶಕ್ಕೆ ಪಡೆದು ಯುವಕ ಸಾಬಣ್ಣನಿಗೆ ಠಾಣೆಗೆ ಬರುವಂತೆ ಮನೆಯವರಿಗೆ ಹೇಳಿ ಹೋಗಿದ್ದರು ಯಾದಗರಿ ಗ್ರಾಮೀಣ ಠಾಣೆ ಪೊಲೀಸ್ರು.
ಇತ್ತ ವಿಷಯ ತಿಳಿದ ಯುವಕ, ಮರ್ಯಾದೆಗೆ ಹೆದರಿ ಹೊಲದಲ್ಲಿಯೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮಗನ ವಿರುದ್ಧ ಗುರುತರವಾದ ಯಾವುದೇ ಕಳ್ಳತನ ಆರೋಪವಿಲ್ಲ. ದೂರುದಾರರು ಹಾಗೂ ನಮ್ಮ ಕುಟುಂಬದ ನಡುವೆ ವೈಯಕ್ತಿಕ ದ್ವೇಷ ಇತ್ತು. ಆ ವೈಯಕ್ತಿಕ ದ್ವೇಷದ ಹಗೆ ಸಾಧಿಸಲು ಮಗನ ಮೇಲೆ ಸುಳ್ಳು ಕಳ್ಳತನದ ಆರೋಪ ಮಾಡಲಾಗಿದೆ.
ಇದನ್ನೂ ಓದಿ: ಲಿಂಗಸುಗೂರು ಪುರಸಭೆಯಲ್ಲಿ ಲ್ಯಾಂಡ್ ಮಾಫಿಯಾ -ಸಿಗ್ನೇಚರ್ ಇಲ್ಲದೆಯೇ ವೈಟ್ನರ್ ಹಚ್ಚಿ ದಾಖಲೆ ಸೃಷ್ಟಿ!
ನಮ್ಮದೇ ಸಾಕಷ್ಟು ಜಮೀನಿದೆ. ನಮ್ಮ ಮಗ ಯಾಕೆ ಕಳ್ಳತನ ಮಾಡಲು ಹೋಗುತ್ತಾನೆ? ನಮ್ಮದು ಒಕ್ಕಲುತನದ ಕುಟುಂಬ. ನಮ್ಮ ಹೊಲಕ್ಕೆ ಉಪಯೋಗಿಸುವ ವಸ್ತುಗಳನ್ನ ತೆಗೆದುಕೊಂಡು ಹೋಗಿದ್ದಾರೆ. ಮನೆಯಲ್ಲಿಟ್ಟಿದ್ದ ಮೋಟಾರ್, ಸರ್ವಿಸ್ ವೈಯರ್ ಗಳನ್ನು ಪೊಲೀಸ್ರು ತೆಗೆದುಕೊಂಡು ಹೋಗಿದ್ದಾರೆ ಎಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ ಸಾಬಣ್ಣನ ತಂದೆ ಚಂದ್ರಪ್ಪ ಸಿದ್ದಪ್ಪನವರ ಅಳಲು ತೋಡಿಕೊಂಡಿದ್ದಾರೆ.
ಯಾದಗಿರಿ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ