ಯಾದಗಿರಿ: ಗಂಡ ಹೆಂಡತಿ ಸಂಬಂಧಕ್ಕೆ ಅದರದ್ದೇ ಆದ ಗೌರವ, ಪ್ರಾಶಸ್ತ್ಯ ಇದೆ. ಜಗಳವಾಡಬಹುದು, ಕಿತ್ತಾಡಬಹುದು. ಆದರೆ ಅಂತಿಮವಾಗಿ ಸುಖ, ದುಃಖವನ್ನು ಸಮಾನವಾಗಿ ಸ್ವೀಕರಿಸಿ ಜೀವನ ಸಾಗಿಸುತ್ತಾರೆ. ಇನ್ನೊಬ್ಬರಿಗೆ ಮಾದರಿಯಾಗುವಂತೆ ಬದುಕುತ್ತಾರೆ. ಇಬ್ಬರಲ್ಲಿ ಒಬ್ಬರಿಗೆ ಏನಾದರೂ ಸಹಿಸುವ ಶಕ್ತಿ ಗಂಡ- ಹೆಂಡತಿಗೆ ಇರುವುದಿಲ್ಲ. ಇದಕ್ಕೆ ಉದಾಹರಣೆಯಾಗಿ ಯಾದಗಿರಿಯಲ್ಲೊಂದು ಘಟನೆ ನಡೆದಿದೆ. ಮದುವೆಯಾದ (Marriage) ದಿನದಿಂದ ಒಟ್ಟಿಗೆ ಜೀವನ ಸಾಗಿಸುತ್ತಿದ್ದ ದಂಪತಿ ಸಾವಿನ ಪಯಣವನ್ನೂ ಒಟ್ಟಿಗೆ ಮುಂದುವರೆಸಿದ್ದಾರೆ. ಯಾದಗಿರಿ ತಾಲೂಕಿನ ಮೊಟ್ನಳ್ಳಿ ಗ್ರಾಮದಲ್ಲಿ ಪತಿ ಧೂಳಪ್ಪ ಕೆಂಪೆನೊರ್ ಮತ್ತು ಪತ್ನಿ ಕಾಶಮ್ಮ ಒಂದೇ ದಿನ ಮೃತಪಟ್ಟಿದ್ದಾರೆ.
ಮೊಟ್ನಳ್ಳಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ಧೂಳಪ್ಪ ಕೆಂಪೆನೊರ್ ಸಾವನ್ನಪ್ಪಿದ ಅರ್ಧಗಂಟೆಯಲ್ಲಿ ಧೂಳಪ್ಪ ಕೆಂಪೆನೊರ್ ಪತ್ನಿ ಕಾಶಮ್ಮ ಕೂಡ ಮೃತಪಟ್ಟಿದ್ದಾರೆ. ಆ ಮೂಲಕ ಸಾವಿನಲ್ಲೂ ಈ ಜೋಡಿ ಒಂದಾಗಿದೆ. ನಿನ್ನೆ ನಡೆದ ಘಟನೆ ಇದಾಗಿದ್ದು, ಇಬ್ಬರು ದಂಪತಿಗಳ ಅಂತ್ಯಕ್ರಿಯೆಯನ್ನು ಇಂದು (ಡಿಸೆಂಬರ್ 24) ಕುಟುಂಬಸ್ಥರು ನೆರವೆರಿಸಿದ್ದಾರೆ.
ಕೋಲಾರ:ಮೀಟರ್ ಬಡ್ಡಿಗೆ ಬೇಸತ್ತು ನಿದ್ದೆ ಮಾತ್ರೆ ಸೇವಿಸಿ ಮಹಿಳೆ ಆತ್ಮಹತ್ಯೆ
ಮೀಟರ್ ಬಡ್ಡಿಗೆ ಬೇಸತ್ತು ನಿದ್ದೆ ಮಾತ್ರೆ ಸೇವಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಅತ್ತಗಿರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀದೇವಮ್ಮ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿಟ್ಟಿರುವ ಲಕ್ಷ್ಮೀದೇವಮ್ಮ ವಿಡಿಯೋದಲ್ಲಿ ಮೂವರ ವಿರುದ್ಧ ಆರೋಪ ಮಾಡಿದ್ದಾರೆ.
ಕೋಲಾರದಲ್ಲಿ ಮೀಟರ್ ಬಡ್ಡಿಕೋರರ ಕಿರುಕುಳ ತಾಳಲಾಗದೆ ನಿದ್ರೆ ಮಾತ್ರೆ ಸೇವಿಸಿ ಲಕ್ಷ್ಮೀದೇವಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದು ಸಾವಿಗೂ ಮುನ್ನ ವಿಡಿಯೋ ಮಾಡಿದ್ದಾರೆ. ಮೃತ ಲಕ್ಷ್ಮೀದೇವಮ್ಮ ಬಂಗಾರಪೇಟೆ ಹಾಗೂ ಹುಲಿಬೆಲೆ ಗ್ರಾಮದ ಕೆಲವರ ಬಳಿ ಸಾಲ ಪಡೆದಿದ್ದರು. ಸಾಲ ತೀರಿಸದಿದ್ದಕ್ಕೆ ಮನಬಂದಂತೆ ಬಡ್ಡಿ ಹಣ ಕೇಳುತ್ತಿದ್ದರು. ಹಣ ಕೊಡದೇ ಇದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಿದ್ದಾರೆ ಎಂದು ಲಕ್ಷ್ಮೀದೇವಮ್ಮ ಆರೋಪ ಮಾಡಿದ್ದಾರೆ.
ಲಕ್ಷ್ಮೀದೇವಮ್ಮ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಸಂಬಂಧಿಕರು ಮಹಿಳೆಯನ್ನು ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಸದ್ಯ ಘಟನೆ ಸಂಬಂಧ ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ವಿಡಿಯೋ ಆಧರಿಸಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:
Crime News: ಮಗನ ಹುಟ್ಟುಹಬ್ಬ ಆಚರಿಸುವಾಗ ಆಕಸ್ಮಿಕವಾಗಿ ಗುಂಡು ಹಾರಿ ತಾಯಿ ಸಾವು
ಕುಟುಂಬದವರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾದ ಸಲಿಂಗಿ ಜೋಡಿ; ಹೈದರಾಬಾದ್ನಲ್ಲಿ ನಡೆದ ಮದುವೆ ಫೋಟೋಗಳು ವೈರಲ್
Published On - 1:45 pm, Fri, 24 December 21