ಯಾದಗಿರಿ: ಯಾದಗಿರಿ (Yadgir) ನಗರಸಭೆ ಪಕ್ಕದಲ್ಲಿರುವ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ (Government Urdu Primary School) ಕೊಠಡಿಯಲ್ಲಿ ಅವಧಿ ಮುಗಿದ ಮಾತ್ರೆಗಳು (Expired Medicines) ಪತ್ತೆಯಾಗಿವೆ. ಶಾಲೆಯಲ್ಲಿ ಮಕ್ಕಳು ಓಡಾಡುವ ಜಾಗದಲ್ಲಿ 2015ರಲ್ಲೇ ಅವಧಿ ಮುಕ್ತಾಯಗೊಂಡ ಮಾತ್ರೆಗಳು 4-5 ಕಾಟನ್ ಬಾಕ್ಸ್ಗಳಲ್ಲಿ ಪತ್ತೆಯಾಗಿವೆ. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ಕೈಕೊಳ್ಳುವುದಾಗಿ ಯಾದಗಿರಿ ಡಿಡಿಪಿಐ (DDPI) ಶಾಂತಗೌಡ ಬಿರಾದಾರ ಹೇಳಿದ್ದಾರೆ.