ಯಾದಗಿರಿ: ಹಣದ ಕಲೆಕ್ಷನ್ ವಿಚಾರಕ್ಕೆ ಮಂಗಳಮುಖಿಯರ ನಡುವೆ ಗಲಾಟೆ ನಡೆದಿರುವ ಘಟನೆ ಯಾದಗಿರಿಯ ಮಾತಾ ಮಾಣಿಕೇಶ್ವರಿ ನಗರದಲ್ಲಿ ರಾತ್ರಿ ನಡೆದಿದೆ. ಗಲಾಟೆಯಲ್ಲಿ ಮೂವರು ಮಂಗಳಮುಖಿಯರಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾರಮಾರಿಯಲ್ಲಿ ಮನೆಯ ಕಿಟಕಿಯ ಗ್ಲಾಸ್ಗಳು ಪುಡಿ ಪುಡಿಯಾಗಿವೆ. ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಮಂಜುಳಾ ಗ್ಯಾಂಗ್ನಿಂದ ಮಾಯಾ ಗ್ಯಾಂಗ್ ವಿರುದ್ಧ ಆರೋಪ ಕೇಳಿಬಂದಿದೆ. ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೀನಿಗೆ ಬಲೆ ಹಾಕಲು ತೆರಳಿದ್ದ ವ್ಯಕ್ತಿ ಸಾವು
ನೆಲಮಂಗಲ: ಮೀನಿಗೆ ಬಲೆ ಹಾಕಲು ತೆರಳಿದ್ದಾಗ ಕಟ್ಟೆಯಲ್ಲಿ ಮುಳುಗಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಶ್ಯಾಮಭಟ್ಟರಪಾಳ್ಯ ತಾವರೆಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಹೆಸರಘಟ್ಟ ಗ್ರಾಮದ ಶೆಟ್ಟಾಳಪ್ಪ (50) ಮೃತ ದುರ್ದೈವಿ. ಸಂಜೆಯೇ ಅಗ್ನಿಶಾಮಕ ಹಾಗೂ ಪೊಲೀಸರಿಗೆ ತಿಳಿಸಿದರೂ ಮನವಿಗೆ ಸ್ಪಂದಿಸಲಿಲ್ಲ ಎಂಬ ಅರೋಪ ಕೇಳಿಬಂದಿದೆ. ಶವ ಮೇಲೆ ಬಂದಾಗ ನೋಡುವ ಎಂದಿರುವ ಇಲಾಖೆ ವಿರುದ್ಧ ಕುಟುಂಬಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಗಲಾಟೆ ಇಬ್ಬರ ಕೊಲೆಯಲ್ಲಿ ಅಂತ್ಯ
ಮೈಸೂರು: ಸ್ನೇಹಿತರ ನಡುವಿನ ಗಲಾಟೆ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ. ಮೈಸೂರು ನಗರದ ಬೋಗಾದಿ ಬಳಿ ರವಿ ಮತ್ತು ಬಸವ ಎಂಬುವವರ ಹತ್ಯೆ ನಡೆದಿದೆ. ಸ್ನೇಹಿತರ ಜೊತೆ ಬಂದು ಗಾರೆ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಸ್ನೇಹಿತರ ನಡುವೆ ಗಲಾಟೆಯಾಗಿದೆ. ಹಾರೆ, ಗುದ್ದಲಿಯಿಂದ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅದ್ಯ ಸ್ಥಳಕ್ಕೆ ಸರಸ್ವತಿಪುರಂ ಠಾಣೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ
ನವವಿವಾಹಿತರು ಮಧುಚಂದ್ರಕ್ಕೆ ತೆರಳಲು ಭಾರತದಲ್ಲಿವೆ ನೂರೆಂಟು ರೊಮ್ಯಾಂಟಿಕ್ ಸ್ಥಳಗಳು
ನಾವು ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ ಎಂದು ಎಚ್ಚರಿಕೆ ಕೊಟ್ಟ ವಿದ್ಯಾರ್ಥಿನಿ, ವಿಡಿಯೋ ವೈರಲ್