ನವವಿವಾಹಿತರು ಮಧುಚಂದ್ರಕ್ಕೆ ತೆರಳಲು ಭಾರತದಲ್ಲಿವೆ ನೂರೆಂಟು ರೊಮ್ಯಾಂಟಿಕ್ ಸ್ಥಳಗಳು

ನವವಿವಾಹಿತರು ಮಧುಚಂದ್ರಕ್ಕೆ ತೆರಳಲು ಭಾರತದಲ್ಲಿವೆ ನೂರೆಂಟು ರೊಮ್ಯಾಂಟಿಕ್ ಸ್ಥಳಗಳು

TV9 Web
| Updated By: shivaprasad.hs

Updated on: Dec 12, 2021 | 8:33 AM

ಹಿಮಾಚಲ ಪ್ರದೇಶದ ಶಿಮ್ಲಾ ಮಾತ್ರವಲ್ಲ ಆ ರಾಜ್ಯದಲ್ಲಿರುವ ಅನೇಕ ಸ್ಥಳಗಳು ರೊಮ್ಯಾಂಟಿಕ್ ಆಗಿವೆ. ಪರಿಸರಪ್ರಿಯರಿಗೆ ಇದೇ ರಾಜ್ಯದಲ್ಲಿರುವ ಭಗ್ಸಾ ಜಲಪಾತ (ಮ್ಯಾಕ್ಲಾಯ್ಡ್ ಫಾಲ್ಸ್) ಅತ್ಯುತ್ತಮ ಸ್ಥಳ.

ಮದುವೆ ಅನ್ನೋದು ನಮ್ಮ ಬದುಕಿನ ಒಂದು ಪ್ರಮುಖ ಮತ್ತು ಅಷ್ಟೇ ಸುಂದರವಾದ ಘಟ್ಟ. ಕೆಲವರಿಗೆ ಮದುವೆ ಇಷ್ಟವಾಗದಿರಬಹುದು, ಅದು ಬೇರೆ ವಿಷಯ. ಮದುವೆಯ ಎಲ್ಲ ಸಂಸ್ಕಾರ, ಸಂಪ್ರದಾಯಗಳು ಪೂರ್ಣಗೊಂಡ ನಂತರ ಸಾಮಾನ್ಯವಾಗಿ ನವವಿವಾಹಿತರಿಗೆ ಹನಿಮೂನ್ ಗೆ ಕಳಿಸುವುದು ಎಲ್ಲಾ ಧರ್ಮಗಳಲ್ಲೂ ಕಂಡು ಬರುವ ಪದ್ಧತಿ. ಎಲ್ಲ ದೇಶಗಳಲ್ಲಿ ಮಧುಚಂದ್ರ ಒಂದು ಕಾಮನ್ ಫಿನಾಮೆನನ್. ಹೋಗಲೇಬೇಕು ಅಂತೇನಿಲ್ಲ ಅಥವಾ ಅದು ಕಡ್ಡಾಯವೂ ಅಲ್ಲ. ಅವರವರ ಇಷ್ಟಕ್ಕೆ ಮತ್ತು ಎಲ್ಲಕ್ಕೂ ಮಿಗಿಲಾಗಿ ಆರ್ಥಿಕ ಸ್ಥಿತಿಗತಿಗೆ ಬಿಟ್ಟ ಸಂಗತಿ ಅದು. ಉಳ್ಳವರು ಎಲ್ಲೆಲ್ಲೋ ಹೋಗುತ್ತಾರೆ, ವಿದೇಶಗಳಿಗೂ ಹೋಗುತ್ತಾರೆ. ನಮ್ಮ ದೇಶದ ಬಡ ರೈತ ಕುಟುಂಬಗಳ ಮದುಮಕ್ಕಳಿಗೆ ತಮ್ಮೂರಿನಲ್ಲಿರುವ ಜಮೀನಿಗೆ ಹೋಗಿ ಮರಗಳ ಹಿಂದೆ, ಗುಡಿಸಿನಲ್ಲಿ ಕೂತು ಸರಸವಾಗಿ ಹರಟುವುದೇ ಮಧುಚಂದ್ರ.

ಅಸಲಿಗೆ ಹನಿಮೂನ್ ಮದುವೆ ಮೂಲಕ ಒಂದಾದ ಗಂಡು ಹೆಣ್ಣು ಅವರು ಬೇರೆ ಬೇರೆ ಕುಟುಂಬಗಳಿಂದ ಬಂದವರಾಗಿರುತ್ತಾರಾದ್ದರಿಂದ ಪರಸ್ಪರರನ್ನು ಅರ್ಥಮಾಡಿಕೊಳ್ಳಲು ಎರಡೂ ಕುಟುಂಬಗಳ ಹಿರಿಯರು ಕಲ್ಪಿಸುವ ಆವಕಾಶ.
ಮಧುಚಂದ್ರ ಅಂದಾಕ್ಷಣ ನೆನಪಾಗೋದು ಕುಲು ಮನಾಲಿ, ದಕ್ಷಿಣ ಭಾರತ ಕೊಡೈಕೆನಾಲ್, ಊಟಿ, ಮಡಿಕೇರಿ ಮೊದಲಾದ ಸುಂದರ ರಮಣೀಯ ಸ್ಥಳಗಳು.

ಹಿಮಾಚಲ ಪ್ರದೇಶದ ಶಿಮ್ಲಾ ಮಾತ್ರವಲ್ಲ ಆ ರಾಜ್ಯದಲ್ಲಿರುವ ಅನೇಕ ಸ್ಥಳಗಳು ರೊಮ್ಯಾಂಟಿಕ್ ಆಗಿವೆ. ಪರಿಸರಪ್ರಿಯರಿಗೆ ಇದೇ ರಾಜ್ಯದಲ್ಲಿರುವ ಭಗ್ಸಾ ಜಲಪಾತ (ಮ್ಯಾಕ್ಲಾಯ್ಡ್ ಫಾಲ್ಸ್) ಅತ್ಯುತ್ತಮ ಸ್ಥಳ.

ಸಾಹಸಪ್ರಿಯರಿಗೆ ಹಿಮಾಚದ ಬಿರ್ ಬಿಲ್ಲಿಂಗ್ ಪರ್ವತ ಪ್ರದೇಶ ಸೂಕ್ತ. ಹಾಗೆಯೇ, ಹಿಮಪಾತ, ದೇಹವನ್ನು ನಡುಗು ಹುಟ್ಟುಸುವ ಕುಳಿರ್ಗಾಳಿಯಲ್ಲಿ ಸಂಗಾತಿಯ ಕೈಹಿಡಿದು ಓಡಾಡಬೇಕೆಂದರೆ ಹಿಮಾಲಯದಲ್ಲಿರುವ ರಾಣಿಕೇತ್ ಬಹಳ ರಮಣೀಯ ಸ್ಥಳ.

ಕಾಡು ಮೇಡುಗಳಲ್ಲಿ ಅಲೆದಾಡಬೇಕೆನ್ನುವವರು, ಹಿಮಾಚಲದ ತೀರ್ತನ್ ಕಣಿವೆ ಆರಿಸಿಕೊಳ್ಳುವುದು ಒಳ್ಳೆಯ ಆಪ್ಷನ್. ರಾಜಸ್ತಾನದ ಜೈಪುರಕ್ಕೆ ಹೋದರೆ ಕೋಟೆ ಕೊತ್ತಲುಗಳು ಸಿಗುತ್ತವೆ.

ಹಾಗೆ ನೋಡಿದರೆ, ನಮ್ಮ ರಾಜ್ಯದಲ್ಲಿ ಹನಿಮೂನ್ ಗೆಂದೇ ಹೆಸರಾಗಿರುವ ಅನೇಕ ಸ್ಥಳಗಳಿವೆ.

ಇದನ್ನೂ ಓದಿ: Viral Video: ಬೆಟ್ಟದಿಂದ ಬೈಕ್ ಸಮೇತ ಜಂಪ್ ಮಾಡಿದ ಸವಾರ; ಡೇಂಜರಸ್ ವಿಡಿಯೋ ಹೇಗಿತ್ತು ನೀವೇ ನೋಡಿ