ಸ್ವಿಜರ್ಲ್ಯಾಂಡ್ನಲ್ಲಿ ದಯಾಮರಣ ಬಯಸುವವರಿಗೆ ಮಶೀನ್ ತಯಾರಾಗಿದ್ದು ಒಂದು ನಿಮಿಷದೊಳಗೆ ನೋವಿಲ್ಲದೆ ಪ್ರಾಣ ತೆಗೆಯುತ್ತದೆ!
ಸಾಯಲು ಬಯಸುವ ವ್ಯಕ್ತಿ ಈ ಪೆಟ್ಟಿಗೆಯಲ್ಲಿ ಹೋಗಿ ಮಲಗಿದರೆ ಒಂದು ನಿಮಿಷದೊಳಗೆ, ಯಾವುದೇ ನೋವು ಯಾತನೆ ಹಿಂಸೆಯಿಲ್ಲದೆ ಸತ್ತು ಬಿಡುತ್ತಾನೆ.
ದಯಾಮರಣ (euthanasia) ಅಂದರೇನು ನಮಗೆ ಗೊತ್ತಿದೆ. ಆದರೆ ಭಾರತವೂ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಇದಕ್ಕೆ ಕಾನೂನಿನ ಅನುಮತಿಯಿಲ್ಲ. ನಮ್ಮ ದೇಶದಲ್ಲಿ ದಯಾಮರಣ ಬಯಸುವವರು ಅನೇಕ ಕಾನೂನು ಪ್ರಕ್ರಿಯೆಗಳನ್ನು ದಾಟಿ ಅಂತಿಮವಾಗಿ ರಾಷ್ಟ್ರಪತಿಗಳ ಸಮ್ಮತಿ ಪಡೆಯಬೇಕಾಗುತ್ತದೆ. ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ರಾಷ್ಟ್ರಪತಿಗಳ ಎದುರು ದಯಾಮರಣ ಕೋರಿರುವ ಸಾವಿರಾರು ಅರ್ಜಿಗಳಿವೆ. ಸಾಮಾನ್ಯವಾಗಿ ಅವರು ಅದಕ್ಕೆ ಅನುಮೋದನೆ ನೀಡುವುದಿಲ್ಲ. ಬದುಕಿನಲ್ಲಿ ಎಲ್ಲ ರೀತಿಯಿಂದ ಬೇಸತ್ತವರು, ವಾಸಿಯಾಗದ ಕಾಯಿಲೆಗಳಿಂದ ಬಳಲುತ್ತಿರುವವರು, ದಿಕ್ಕಿಲ್ಲದವರು, ಬದುಕಿನಲ್ಲಿ ಎಲ್ಲರನ್ನು, ಎಲ್ಲವನ್ನು ಕಳೆದುಕೊಂಡು ಹತಾಷೆಯಲ್ಲಿರುವವರು ತಮಗೆ ಸಾಯಲು ಅನುಮತಿ ನೀಡಬೇಕೆಂದು ಸರ್ಕಾರವನ್ನು ಕೋರುವುದೇ ದಯಾಮರಣ.
ಸ್ವಿಜರ್ಲ್ಯಾಂಡ್ ದೇಶದಲ್ಲಿ ಒಂದು ಕಂಪನಿಯು ಆತ್ಮಹತ್ಯೆ ಮಾಡಿಕೊಳ್ಳಬಯಸುವವರಿಗೆ ಶವಪೆಟ್ಟಿಗೆಯ ಹಾಗೆ ಕಾಣುವ ಒಂದು ಕ್ಯಾಪ್ಸೂಲ್ ಅನ್ನು ವಿನ್ಯಾಸಗೊಳಿಸಿದೆ. ಸಾಯಲು ಬಯಸುವ ವ್ಯಕ್ತಿ ಈ ಪೆಟ್ಟಿಗೆಯಲ್ಲಿ ಹೋಗಿ ಮಲಗಿದರೆ ಒಂದು ನಿಮಿಷದೊಳಗೆ, ಯಾವುದೇ ನೋವು ಯಾತನೆ ಹಿಂಸೆಯಿಲ್ಲದೆ ಸತ್ತು ಬಿಡುತ್ತಾನೆ.
ಇದರ ತಯಾರಕರು ಹೇಳುವ ಪ್ರಕಾರ ಈ ಕ್ಯಾಪ್ಸೂಲ್ ಸ್ವಿಜರ್ಲ್ಯಾಂಡ್ನಲ್ಲಿ ಕಾನೂನಿನ ಪರಾಮರ್ಶೆಗೆ ಒಳಗಾಗಿ ಬಳಸಲು ಅನುಮತಿ ಪಡೆದುಕೊಂಡಿದೆಯಂತೆ. ದೇಹದಲ್ಲಿ ಆಮ್ಲಜನಕ ಮತ್ತು ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಈ ಮಶೀನು ಮಾನವನ ಪ್ರಾಣವನ್ನು ತೆಗೆಯುತ್ತದಂತೆ.
ತಯಾಕರಿಂದ ಸ್ಯಾಕ್ರೊ ಸೂಸೈಡ್ ಅಂತ ನಾಮಕರಣಗೊಂಡಿರುವ ಮಶೀನಲ್ಲಿ ಒಂದು ಬಟನ್ ಇದೆ. ಸಾಯಲು ಬಯಸುವ ವ್ಯಕ್ತಿ ಅದರೊಳಗೆ ಮಲಗಿ ಆ ಬಟನ್ ಒತ್ತಿದರೆ ಸಾಕು. ಆಕ್ಸಿಜನ್ ಮತ್ತು ಇಂಗಾಲದ ಡೈ ಆಕ್ಸೈಡ್ ಕ್ರಮೇಣ ಕಡಿಮೆಯಾಗುತ್ತಾ ಹೋಗಿ 60 ಸೆಕೆಂಡ್ಗಳೊಳಗೆ ಅವನು/ಅವಳು ಸತ್ತು ಬಿಡುತ್ತಾರೆ.
ಕೈ ಕಾಲುಗಳನ್ನು ಅಲುಗಾಡಿಸಲೂ ಸಾಧ್ಯವಾಗದ ಸ್ಥಿತಿಯ ಜನರು ಕ್ಯಾಪ್ಸೂಲ್ನೊಳಗೆ ಪ್ರವೇಶಿಸಿ ಒಮ್ಮೆ ಕಣ್ಣು ಮಿಟುಕಿಸಿದರೂ ಮಶೀನ್ ಆನ್ ಆಗುತ್ತದೆ. ವ್ಯಕ್ತಿ ಸತ್ತ ನಂತರ ಪೆಟ್ಟಿಗಿಗೆ ಅಟ್ಯಾಚ್ ಆಗಿರುವ ಮಶೀನನ್ನು ಬೇರ್ಪಡಿಸಿದರೆ, ಕೆಳಗಿನ ಭಾಗ ಶವಪೆಟ್ಟಿಗೆಯಾಗಿ ಪರಿವರ್ತನೆಗೊಳ್ಳುತ್ತದೆ.
ಸ್ವಿಜರ್ಲ್ಯಾಂಡ್ನಲ್ಲಿ ಮುಂದಿನ ವರ್ಷದಿಂದ ಸ್ಯಾಕ್ರೊ ಸೂಸೈಡ್ ಮಶೀನಿನ ಬಳಕೆ ಆರಂಭವಾಗಲಿದೆ ಎಂದು ಅದನ್ನು ತಯಾರಿಸಿರುವ ಸಂಸ್ಥೆ ಹೇಳಿದೆ.
ಇದನ್ನೂ ಓದಿ:
Madhya Pradesh: ಮದುವೆ ಮನೆಯಲ್ಲಿ ಗುಂಡಿನ ದಾಳಿ; ಒಬ್ಬ ಸಾವು, ಮೂವರ ಬಂಧನ