ಸೋರುತಿಹುದು ಸರ್ಕಾರಿ ಶಾಲೆಯ ಮೇಲ್ಛಾವಣಿ; ಮಕ್ಕಳು ಮತ್ತು ಶಿಕ್ಷಕರ ಪರದಾಟ ಕೇಳುವರಿಲ್ಲ

TV9 Web
| Updated By: ವಿವೇಕ ಬಿರಾದಾರ

Updated on: Jul 13, 2022 | 5:22 PM

ಯಾದಗಿರಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಯಾದಗಿರಿ ತಾಲೂಕಿನ ಬಾಚವಾರದ ಸರ್ಕಾರಿ ಶಾಲೆಯ ಕೊಠಡಿಯಲ್ಲಿ ನೀರು ಸೋರುತ್ತಿದೆ.

ಯಾದಗಿರಿ: ಯಾದಗಿರಿ (Yadgir) ಜಿಲ್ಲೆಯಲ್ಲಿ ಮಳೆಯ (Rain) ಆರ್ಭಟ ಮುಂದುವರೆದಿದ್ದು, ಯಾದಗಿರಿ ತಾಲೂಕಿನ ಬಾಚವಾರದ ಸರ್ಕಾರಿ ಶಾಲೆಯ (Government School) ಕೊಠಡಿಯಲ್ಲಿ ನೀರು ಸೋರುತ್ತಿದೆ. ಈ ಸಂಬಂಧ 1ರಿಂದ 3ನೇ ತರಗತಿ ಮಕ್ಕಳಿಗೆ ತಾತ್ಕಾಲಿಕ ರಜೆ ನೀಡಲಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಶಾಲೆಯ ಮೂರು ಕೋಣೆಗಳು ಸೋರುತ್ತಿವೆ. ನಿರಂತರ ಮಳೆಯಿಂದ ಶಾಲಾ ಕಟ್ಟಡ ಶಿಥಿಲಗೊಂಡಿದೆ. ನೂತನ ಕಟ್ಟಡ ನಿರ್ಮಾಣ ಮಾಡಲು ಹಾಗೂ ತಾತ್ಕಾಲಿಕವಾಗಿ ಸೋರದಂತೆ ಅಗತ್ಯ ಕ್ರಮವಹಿಸಲು ಗ್ರಾಮಸ್ಥರ ಆಗ್ರಹಿಸುತ್ತಿದ್ದಾರೆ.