ಇಬ್ಬರು ವ್ಯಕ್ತಿಗಳನ್ನ ಕಿಡ್ನಾಪ್ ಮಾಡಿದ ಅಕ್ರಮ ಮರಳು ದಂಧೆಕೋರರು, ನದಿ ಪಾಲಾಗಬೇಕಿದ್ದವರು ಜಸ್ಟ್ ಮಿಸ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 22, 2023 | 11:27 AM

ರೌಡಿ ಶೀಟರ್ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಆಗಿರುವ ವಿಜಯ ರಾಠೋಡ್,  ಸಚಿವ ಶರಣಬಸಪ್ಪ ದರ್ಶನಾಪುರ ಬೆಂಬಲಿಗ ಎನ್ನಲಾಗುತ್ತಿದೆ. ಇವರು ಇಬ್ಬರನ್ನು ಕಾರಿನ ಡಿಕ್ಕಿಯೊಳಗೆ ಹಾಕಿ ಮಾರಣಾಂತಿಕ ಹಲ್ಲೆ ಮಾಡಿದ್ದು, ಜೀವಂತವಾಗಿ ಕೃಷ್ಣಾ ನದಿಗೆ ಎಸೆಯಲು ಪ್ಲಾನ್ ಮಾಡಿದ್ದರಂತೆ.

ಇಬ್ಬರು ವ್ಯಕ್ತಿಗಳನ್ನ ಕಿಡ್ನಾಪ್ ಮಾಡಿದ ಅಕ್ರಮ ಮರಳು ದಂಧೆಕೋರರು, ನದಿ ಪಾಲಾಗಬೇಕಿದ್ದವರು ಜಸ್ಟ್ ಮಿಸ್
ಯಾದಗಿರಿಯಲ್ಲಿ ಅಕ್ರಮ ಮರಳು ದಂಧೆಕೋರರಿಂದ ಕಿಡ್ನಾಫ್​
Follow us on

ಯಾದಗಿರಿ, ಅ.22: ಅಕ್ರಮ ಮರಳು ದಂಧೆಕೋರರಿಂದ ಸುರಪುರ ತಾಲೂಕಿನ ನಡಿಹಾಳ್ ಗ್ರಾಮದ ನಿವಾಸಿಗಳಾದ ಇಬ್ಬರನ್ನು ಕಿಡ್ನಾಪ್(Kidnap) ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಯಾದಗಿರಿ (Yadgiri) ಜಿಲ್ಲೆಯ ಶಹಾಪುರ ತಾಲೂಕಿನ ವಿಭೂತಳ್ಳಿ ಬಳಿ ನಡೆದಿದೆ. ರಾಜು ಹಾಗೂ ಶರಣಗೌಡ ಹಯ್ಯಾಳ ಎಂಬುವವರನ್ನು ರೌಡಿ ಶೀಟರ್ ವಿಜಯ ರಾಠೋಡ್, ಬಸುರೆಡ್ಡಿ ಹಾಗೂ ಇನ್ನಿತರರು ಸೇರಿ ಕಾರಿನಲ್ಲಿ ಕರೆದುಕೊಂಡು ಹೋಗಿ ರಾಡ್​ನಿಂದ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.

ಜೀವಂತ ಕೃಷ್ಣಾ ನದಿಗೆ ಎಸೆಯಲು ಪ್ಲಾನ್ ಮಾಡಿದ್ರಂತೆ ಕೀಚಕರು

ಇನ್ನು ರೌಡಿ ಶೀಟರ್ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಆಗಿರುವ ವಿಜಯ ರಾಠೋಡ್,  ಸಚಿವ ಶರಣಬಸಪ್ಪ ದರ್ಶನಾಪುರ ಬೆಂಬಲಿಗ ಎನ್ನಲಾಗುತ್ತಿದೆ. ಇವರು ಇಬ್ಬರನ್ನು ಕಾರಿನ ಡಿಕ್ಕಿಯೊಳಗೆ ಹಾಕಿ ಮಾರಣಾಂತಿಕ ಹಲ್ಲೆ ಮಾಡಿದ್ದು, ಜೀವಂತವಾಗಿ ಕೃಷ್ಣಾ ನದಿಗೆ ಎಸೆಯಲು ಪ್ಲಾನ್ ಮಾಡಿದ್ದರಂತೆ. ಇನ್ನು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದ ರಾಜು ಹಾಗೂ ಶರಣಗೌಡ ಇಬ್ಬರು ಕಲ್ಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ನಿನ್ನೆ(ಅ.21) ತಡ ರಾತ್ರಿ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಜಯ ರಾಠೋಡ್, ಬಸುರೆಡ್ಡಿ, ಮಲ್ಲಿಕಾರ್ಜುನ್​ ಸೇರಿದಂತೆ ಏಳು ಜನ ಆರೋಪಿಗಳ ವಿರುದ್ದ ದೂರು ದಾಖಲಾಗಿದೆ.

ಇದನ್ನೂ ಓದಿ:ಪೊಲೀಸ್ ಇಲಾಖೆ ಹೆಸರು ಬಳಸಿಕೊಂಡು ಕಿಡ್ನಾಪ್​; ಐವರು ಆರೋಪಿಗಳು ಅಂದರ್​

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲದ ದೊಡ್ಡ ಫ್ಯಾಕ್ಟರಿ ಕ್ಯಾಂಟೀನ್​ಗಳಿಗೆ ಹಪ್ಪಳ ಕಂಟ್ರಾಕ್ಟ್ ಕೊಡಿಸುತ್ತೇನೆ. ಇದರಿಂದ ಲಕ್ಷ ಲಕ್ಷ ಹಣ ಸಂಪಾದನೆ ಮಾಡಬಹುದೆಂದು ಗಂಗಮ್ಮಬೀದಿಯ ಮಂಜಮ್ಮ ಎಂಬುವವರಿಗೆ ತ್ಯಾಮಗೊಂಡ್ಲುವಿನ ತಿಪ್ಪೇಸ್ವಾಮಿ ವಂಚನೆ ಮಾಡಿದ್ದಾರೆ. ಗ್ಯಾರಂಟಿಗಾಗಿ ಹಣ ಡೆಪಾಸಿಟ್ ಇಡಲು ಪೋನ್ ಪೇ ಮುಖಾಂತರವಾಗಿ 5 ತಿಂಗಳಿಂದ ಹಲವು ಬಾರಿ 9ಲಕ್ಷಕ್ಕೂ ಹೆಚ್ಚು ಹಣ ಪಡೆದಿದ್ದಾರೆ. ಇದೀಗ ಕಾಂಟ್ರಾಕ್ಟ್ ಇಲ್ಲ, ಹಣವೂ ಇಲ್ಲದೆ ಫ್ಯಾಕ್ಟರಿ ಬಳಿ ಕೇಳಿದಾಗ ವಂಚನೆ ಬೆಳಕಿಗೆ ಬಂದಿದೆ. ಈ ಹಿನ್ನಲೆ ಐಪಿಸಿ 406, 420 ರೀತ್ಯಾ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ