ಯಾದಗಿರಿಯಲ್ಲಿ ಎಗ್ಗಿಲ್ಲದೇ ನಡೀತಿದೆ ಮತಾಂತರ; ಬಡ ಹಿಂದೂ ಕುಟುಂಬಗಳೇ ಇವರ ಟಾರ್ಗೆಟ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 25, 2024 | 3:25 PM

ಯಾದಗಿರಿ ಜಿಲ್ಲೆಯಲ್ಲಿ ಮತಾಂತರದ ಕೂಗು ಹೆಚ್ಚಾಗಿ ಕೇಳಿಬರುತ್ತಿದೆ. ಮನೆ ಮನೆಗೆ ತೆರಳಿ ಧರ್ಮ ಪ್ರಚಾರ ಮಾಡಿ, ಬಲೆಗೆ ಬಿದ್ದವರನ್ನ ತಮ್ಮ ಧರ್ಮಕ್ಕೆ ಮತಾಂತರ ಮಾಡಿಕೊಳ್ಳುತ್ತಿರುವ ಆರೋಪಗಳು ಬೆಳಕಿಗೆ ಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆಯಷ್ಟೇ ಗುಂಪು ಕಟ್ಟಿಕೊಂಡು ಹೋಗಿ ಮತಾಂತರಕ್ಕೆ ಯತ್ನಿಸಿರುವ ಘಟನೆ ನಡೆದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಯಾದಗಿರಿಯಲ್ಲಿ ಎಗ್ಗಿಲ್ಲದೇ ನಡೀತಿದೆ ಮತಾಂತರ; ಬಡ ಹಿಂದೂ ಕುಟುಂಬಗಳೇ ಇವರ ಟಾರ್ಗೆಟ್
ಯಾದಗಿರಿಯಲ್ಲಿ ಎಗ್ಗಿಲ್ಲದೇ ನಡೀತಿದೆ ಮತಾಂತರ
Follow us on

ಯಾದಗಿರಿ, ಆ.25: ಯಾದಗಿರಿ(Yadgiri) ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಹಿಂದೂ ಧರ್ಮದವರನ್ನೇ ಟಾರ್ಗೆಟ್ ಮಾಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿಸುವ ಕೆಲಸ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕ್ರಿಶ್ಚಿಯನ್ ಮಿಷನರಿಗಳು ಹಿಂದೂಗಳ ಮನೆ ಮನೆಗೆ ಹೋಗಿ ತಮ್ಮ ಧರ್ಮ ಹಾಗೂ ಧರ್ಮ ಗುರು ಯೇಸ್ ಕ್ರಿಸ್ತನ ಬಗ್ಗೆ ಪ್ರಚಾರ ನಡೆಸುತ್ತಿದ್ದಾರೆ. ಅದರಲ್ಲೂ ಹಿಂದೂ ಧರ್ಮದಲ್ಲಿರುವ ದಲಿತರು, ಆರ್ಥಿಕವಾಗಿ ತೀರ ಬಡತನದಲ್ಲಿರುವ ಕುಟುಂಬಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇದಕ್ಕೆ ತಾಜಾ ಉದಾಹರಣೆಯಾಗಿ ನಿನ್ನೆ(ಆ.24) ಯಾದಗಿರಿ ನಗರದ ಹೊರ ಭಾಗದಲ್ಲಿರುವ ಗಿರಿ‌ನಗರ ಬಡಾವಣೆಗೆ ಚರ್ಚ್​ನ ಫಾಸ್ಟರ್ ಸೇರಿದಂತೆ ಆರೇಳು ಜನರ ಟೀಮ್‌ ಸಂಜೆ ವೇಳೆ ಎಂಟ್ರಿ ಕೊಟ್ಟಿದ್ದೆ. ಈ ಬಡಾವಣೆಯಲ್ಲಿ ಬರಿ ಬುಡುಗ ಜಂಗಮ ಸಮುದಾಯದ ಜನರೇ ವಾಸವಾಗಿದ್ದಾರೆ. ಇದೆ ಸಮುದಾಯದ ಜನರ ವಾಸಕ್ಕಾಗಿಯೇ ಸರ್ಕಾರ ಜಾಗ ಮಂಜೂರು ಮಾಡಿ ಮನೆಗಳನ್ನ ಕಟ್ಟಿಕೊಡುತ್ತಿದೆ. ಈ ಹಿನ್ನಲೆ ಈಗಾಗಲೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿರುವ ಮನೆಗೆ ಹೋಗಿ ಯೇಸುನ ಹೆಸರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಈ ಬಡಾವಣೆಯಲ್ಲಿ ಒಂದೆ ಒಂದು ಕ್ರಿಶ್ಚಿಯನ್ ಸಮುದಾಯದ ಮನೆಗಳು ಇರಲಿಲ್ಲ. ಆರಂಭದಲ್ಲಿ ಮೂರು ಕುಟುಂಬಗಳನ್ನ ಕನ್ವರ್ಟ್ ಮಾಡಲಾಗಿದೆ. ಈಗ ಬರೋಬ್ಬರಿ 30 ಕುಟುಂಬಗಳನ್ನ ಮತಾಂತರ ಮಾಡಲಾಗಿದೆ.‌ ನಿನ್ನೆ ಪ್ರಾರ್ಥನೆ ಮಾಡಿದ‌ ಬಳಿಕ ಉಳಿದ ಜನರಿಗೆ ಧರ್ಮಕ್ಕೆ ಬರುವಂತೆ ಆಹ್ವಾನ ನೀರುವ ಆರೋಪ ಕೂಡ ಕೇಳಿದೆ‌‌ ಬಂದಿದೆ.

ಇದನ್ನೂ ಓದಿ:ಹಿಂದೂ ಮನೆಗಳಿಗೆ ತೆರಳಿ ಮತಾಂತರಕ್ಕೆ ಯತ್ನ; ಇಬ್ಬರು ಮಹಿಳೆಯರನ್ನ ಪೊಲೀಸರಿಗೆ ಒಪ್ಪಿಸಿದ ಜನ

ಬಡಾವಣೆಯಲ್ಲಿರುವ ಆಂಜನೇಯ ದೇವಸ್ಥಾನದ ಕಟ್ಟೆಯ ಮೇಲೆ‌ ಚಪ್ಪಲಿ ಹಾಕಿಕೊಂಡು ಕ್ರಿಶ್ಚಿಯನ್ ಧರ್ಮದ ಬಗ್ಗೆ ಪ್ರಚಾರ ಮಾಡುತ್ತಿದ್ದರಂತೆ. ಕೂಡಲೇ ಬುಡುಗ ಜಂಗಮ ಸಮುದಾಯದ ಜನ ಇದ್ದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಈ ಬಡಾವಣೆಯಲ್ಲಿ ಅತೀ ಹೆಚ್ಚು ಬಡವರೇ ಇರುವ ಕಾರಣಕ್ಕೆ ಬಡವರಿಗೆ ಆಸ್ತಿ, ನಿವೇಶನ ಹಾಗೂ ಹಣದ ಆಸೆ ತೋರಿಸಿ ತಮ್ಮ‌ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯ ಮಾಡುತ್ತಿದ್ದಾರಂತೆ. ಇನ್ನು ಹಿಂದೂ ದೇವರು ಹಾಗೂ ಧರ್ಮದ ಬಗ್ಗೆ ಹಿಯಾಳಿಸಿ ಮಾತಾಡಿದ್ದಾರಂತೆ.

ಮುಂದೆ‌ ಇಡೀ ಜಗತ್ತಿಗೆ ಯೇಸು ಕ್ರಿಸ್ತ ಒಬ್ಬನೇ ದೇವರು, ಎಲ್ಲರೂ ಕ್ರಿಶ್ಚಿಯನ್ ಧರ್ಮಕ್ಕೆ ಸೇರುತ್ತಾರೆ. ನೀವ್ಯಾಕೆ‌ ಇನ್ನು ಹಿಂದು ಧರ್ಮದಲ್ಲಿದ್ದಿರಾ ಎಂದು ಜನರಿಗೆ ಒತ್ತಡ ಹೇರುವ ಕೆಲಸ ಮಾಡಿದ್ದಾರಂತೆ. ಇದ್ದಕ್ಕೆ ವಿರೋಧಿಸಿದ ಜನ, ಕೂಡಲೇ ಯಾದಗಿರಿ ನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ‌ಸ್ಥಳಕ್ಕೆ ಬಂದ‌ ಪೊಲೀಸರು ಕ್ರಿಶ್ಚಿಯನ್ ಧರ್ಮದ ಫಾಸ್ಟರ್ ಸೇರಿದಂತೆ ತಂಡಕ್ಕೆ ವಿಚಾರಣೆ ನಡೆಸಿದ್ದಾರೆ. ಬಳಿಕ ಕ್ರಿಶ್ಚಿಯನ್ ಸಮುದಾಯದ ಫಾಸ್ಟರ್​ನಿಂದ‌ ಮುಚ್ಚಳಿಕೆ‌ ಬರೆಸಿಕೊಂಡು ಕಳುಹಿಸಿದ್ದಾರೆ.

ಇವತ್ತು ಮೂವತ್ತು ಮನೆಗಳು ಮತಾಂತರಗೊಂಡಿವೆ, ನಾಳೆ ಇಡೀ ಬಡಾವಣೆ ಮತಾಂತರ ಆಗುವ ಆತಂಕ ಜನರಲ್ಲಿ ಕಾಡುತ್ತಿದೆ. ಇನ್ನು ಕಳೆದ ಸೋಮವಾರ ಯಾದಗಿರಿ ನಗರದ ಲಕ್ಷ್ಮಿ ಬಡಾವಣೆಯಲ್ಲಿ ಇಬ್ಬರು ಕ್ರಿಶ್ಚಿಯನ್ ಮಹಿಳೆಯರು ಹಿಂದೂ ಧರ್ಮದ ಮನೆ ಮನೆಗೆ ಹೋಗಿ ಕರ ಪತ್ರ ಹಂಚುವ ಕೆಲಸ ಮಾಡಿದ್ದಾರೆ. ಹಿಂದೂ ಧರ್ಮದ ಬಗ್ಗೆ ಹಿಯಾಳಿಸಿ ಮಾತಾಡಿ ಬಳಿಕ ಧರ್ಮಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.

ಭಜರಂಗದಳದಿಂದ ಎಚ್ಚರಿಕೆ

ಈ ಕುರಿತು ದೂರು ಕೊಟ್ಟರೂ ಪೊಲೀಸರು ದೂರು ಸ್ವೀಕಾರ ಮಾಡುತ್ತಿಲ್ಲ. ಬದಲಿಕೆ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸುತ್ತಿದ್ದಾರೆ.‌ ಇದರ ವಿರುದ್ಧ ಉಗ್ರವಾದ ಹೋರಾಟ ಮಾಡ್ತೆವೆ, ಏನಾದರೂ ಆದರೆ ಜಿಲ್ಲಾಡಳಿತ ಹಾಗೂ ಪೊಲೀಸರೇ ಹೊಣೆಗಾರರಾಗಬೇಕಾಗುತ್ತೆ ಎಂದು ಭಜರಂಗದದಳ ಕಾರ್ಯಕರ್ತರು ಎಚ್ಚರಿಕೆ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಯಾದಗಿರಿ ನಗರದಲ್ಲಿ‌ ಕೆಲ ವರ್ಷಗಳಿಂದ ಕ್ರಿಶ್ಚಿಯನ್ ಮಿಷನರಿಗಳು ಯಾರಿಗೂ ಗೊತ್ತಾಗದ ಹಾಗೆ ಕೆಲಸ ಮಾಡುತ್ತಿರುವ ಅನುಮಾನಗಳು ಕಾಡುತ್ತಿವೆ. ಹೀಗಾಗಿ ಪೊಲೀಸರು ಇದರ ಮೇಲೆ ಸೂಕ್ಷ್ಮವಾಗಿ ಗಮನ ಇಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ