ಬಿಜೆಪಿಯೊಂದಿಗಿನ ಮೈತ್ರಿಗೆ ಜೆಡಿಎಸ್​​ ಶಾಸಕರು ಅಸಮಾಧಾನ: ನಿನ್ನೆ ಸಭೆಗೆ ಶರಣಗೌಡ ಕಂದಕೂರ್​ ಗೈರಾಗಿದ್ದೇಕೆ?

ಲೋಕಸಭೆ ಚುನಾವಣೆಯಲ್ಲಿ ಒಗ್ಗಾಟಾಗಿ ಕಾಂಗ್ರೆಸ್ ವಿರುದ್ಧ ಶಕ್ತಿ ಪ್ರದರ್ಶನ ಮಾಡಬೇಕು ಅಂತ ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಮೈತ್ರಿ ಆಗುವ ಮುನ್ನವೇ ಜೆಡಿಎಸ್ ನ ಕೆಲಸ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಠಕಲ್‌ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ನಿನ್ನೆ ಬೆಂಗಳೂರಿನಲ್ಲಿ ನಡೆದ ಸಭೆಗೆ ಗೈರಾಗಿದ್ದರು.

ಬಿಜೆಪಿಯೊಂದಿಗಿನ ಮೈತ್ರಿಗೆ ಜೆಡಿಎಸ್​​ ಶಾಸಕರು ಅಸಮಾಧಾನ: ನಿನ್ನೆ ಸಭೆಗೆ ಶರಣಗೌಡ ಕಂದಕೂರ್​ ಗೈರಾಗಿದ್ದೇಕೆ?
ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್
Follow us
ಅಮೀನ್​ ಸಾಬ್​
| Updated By: ಗಂಗಾಧರ​ ಬ. ಸಾಬೋಜಿ

Updated on: Nov 08, 2023 | 6:10 PM

ಯಾದಗಿರಿ, ನವೆಂಬರ್​​ 8: ಲೋಕಸಭೆ ಚುನಾವಣೆಯಲ್ಲಿ ಒಗ್ಗಾಟಾಗಿ ಕಾಂಗ್ರೆಸ್ ವಿರುದ್ಧ ಶಕ್ತಿ ಪ್ರದರ್ಶನ ಮಾಡಬೇಕು ಅಂತ ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಮೈತ್ರಿ ಆಗುವ ಮುನ್ನವೇ ಜೆಡಿಎಸ್​ನ ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಮೈತ್ರಿ ಪಕ್ಕ ಆಗ್ತಾಯಿದ್ದ ಹಾಗೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ (Sharanagouda Kandakur) ಪಕ್ಷದಿಂದ್ಲೇ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಜೆಡಿಎಸ್ ವರಿಷ್ಠರು ಕರೆದ ಒಂದು ಸಭೆಗೂ ಹಾಜರಾಗದೆ ತಮ್ಮಲ್ಲಿರುವ ಸಮಧಾನ ಎಷ್ಟಿದೆ ಅಂತ ತೋರಿಸಿಕೊಟ್ಟಿದ್ದಾರೆ.

ಜೆಡಿಎಸ್ ಸಭೆಗೆ ಶಾಸಕ ಶರಣಗೌಡ ಕಂದಕೂರ್ ಗೈರು

ಯಾದಗಿರಿ ಜಿಲ್ಲೆಯ ಗುರುಮಠಕಲ್‌ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ನಿನ್ನೆ ಬೆಂಗಳೂರಿನಲ್ಲಿ ನಡೆದ ಸಭೆಗೆ ಗೈರಾಗಿದ್ದರು. ಸಭೆಗೆ ಗೈರಾಗುವ ಮೂಲಕ ಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ಅಸಮಧಾನ ಹೊರ ಹಾಕಿದ್ದರು. ನಿನ್ನೆ ಬೆಂಗಳೂರಿನಲ್ಲಿ ಇದ್ದರು ಸಹ ಸಭೆಗೆ ಗೈರಾಗಿದ್ದರು. ಸಭೆಗೆ ಆಹ್ವಾನವಿದ್ದರು ಸಹ ಬೇರೆ ಕೆಲಸ ಇತ್ತು‌ ಹೇಳುವ ಮೂಲಕ ಪಕ್ಷದಿಂದ ಅಂತರ ಕಾಯ್ದಯಕೊಳ್ಳುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಕಾಂಗ್ರೆಸ್​ನ 45 ಶಾಸಕರು: ಹೆಚ್​ಡಿ ಕುಮಾರಸ್ವಾಮಿ

ಈ ಬಾರಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​ನ ಕೇವಲ 19 ಜನ ಮಾತ್ರ ಗೆದ್ದು ಶಾಸಕರಾಗಿದ್ದಾರೆ. ಪಕ್ಷ ಇಷ್ಟು ಹೀನಾಯವಾಗಿ ಸೋಲುವುದ್ದಕ್ಕೆ ಕಾರಣ ಕಾಂಗ್ರೆಸ್ ತಂತ್ರಗಾರಿ ಹಾಗೂ ಗ್ಯಾರಂಟಿಗಳ ಎಫೆಕ್ಟ್. ಕಾಂಗ್ರೆಸ್​ನಿಂದಾಗಿ ಕೇವಲ 19 ಸ್ಥಾನದಲ್ಲಿ ಗೆಲವು ಸಾಧಿಸಿದ್ದಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮಣಿಸಲು ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಆದರೆ ಈ ಮೈತ್ರಿಯಿಂದ ಶಾಸಕ ಶರಣಗೌಡ ಕಂದಕೂರ್ ಅಸಮಧಾನವಾಗಿದ್ದಾರೆ.

ಪರೋಕ್ಷವಾಗಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಮೇಲಿನ ವೈಯಕ್ತಿಕ ದ್ವೇಷಕ್ಕಾಗಿ ಮೈತ್ರಿ ಮಾಡಿಕೊಂಡಿದ್ದಾರೆ ಮುಂದೆ ಪಕ್ಷದ ಭವಿಷ್ಯ ಇನ್ನೊಂದರ ಬಗ್ಗೆ ಯೋಚನೆ ಮಾಡಿಲ್ಲ ಅಂತ ಸಾಕಷ್ಟು ಬಾರಿ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಇದೆ ಕಾರಣಕ್ಕೆ ನಾಯಕರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಅಂತ ಹೇಳಲಾಗುತ್ತಿದೆ.

ಮೈತ್ರಿಗೂ ಮುನ್ನ ಶಾಸಕರನ್ನ ಕೇಳದ್ದಕ್ಕೆ ಸಿಟ್ಟಾದ್ರ ಶರಣಗೌಡ

ಬಿಜೆಪಿ ಜೊತೆ ಜೆಡಿಎಸ್ ಪಕ್ಷದ ನಾಯಕರು ಮೈತ್ರಿ‌ ಮಾತುಕತೆಗೂ ಮುನ್ನ ಪಕ್ಷದ ಶಾಸಕರ ಸಭೆ ಕರೆದು ಅಭಿಪ್ರಾಯ ಸಂಗ್ರಹ ಮಾಡಬೇಕಿತ್ತು ಅಂತ ಖುದ್ದು ಶರಣಗೌಡ ಸಾಕಷ್ಟು ಬಾರಿ ಆಪ್ ದಿ ರಿಕಾರ್ಡ್ ಆಗಿ ಹೇಳಿದ್ದಾರೆ. ಮೈತ್ರಿ ಮಾತುಕತೆಗೂ ನಮ್ಮ ಗಮನಕ್ಕೆ ತರಬೇಕಿತ್ತು ಮೈತ್ರಿ ಬಗ್ಗೆ ಶಾಸಕರ ಸಲಹೆ ಪಡೆಯಬೇಕಿತ್ತು ಎನ್ನೋದು ಶರಣಗೌಡ ಮಾತಾಗಿದೆ. ಮೈತ್ರಿ ಬಗ್ಗೆ ಶಾಸಕರು ಏನ್ ಹೇಳ್ತಾಯಿದ್ರು ಅಂತ ಕೇಳಬೇಕಿತ್ತು. ಈ ಮೈತ್ರಿ ಕೇವಲ ಲೋಕಸಭೆಗೋ ಅಥವ ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಗೂ ನಾ ಅಂತ ಸ್ಪಷ್ಟ ಪಡಿಸುವ ಕೆಲಸ ಮಾಡಬೇಕಿತ್ತು ಅಂತ ಶರಣಗೌಡ ಹೇಳಿದ್ದು ಹಳೆದಾಗಿದೆ. ಇದೆ ಇಂತಹ ಅನೇಕ ಕಾರಣಗಳಿಂದ ಶರಣಗೌಡ ಸಿಟ್ಟಾಗಿದ್ದಾರೆ ಅಂತ ಹೇಳಲಾಗುತ್ತಿದೆ.

ಕಾಂಗ್ರೆಸ್​ಗೆ ಕಾಲಿಡೋಕೆ ರೆಡಿಯಾದ್ರ ಶರಣಗೌಡ

ಜೆಡಿಎಸ್​ನಿಂದ ಸಾಕಷ್ಟು ಅಂತರ ಕಾಯ್ದುಕೊಂಡಿರುವ ಶರಣಗೌಡ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಚರ್ಚೆ ಕೂಡ ಜೋರಾಗಿದೆ. ಇದೆ ಕಾರಣಕ್ಕೆ ಜೆಡಿಎಸ್​ನಿಂದ ಅಂತರ ಕಾಯ್ದುಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ. ಜೆಡಿಎಸ್​ನ ಯಾವುದೇ ಸಭೆಗೆ ಹಾಜರಾಗದೆ ನಾನಾ ಕಾರಣಗಳನ್ನ ಹೇಳ್ತಾಯಿರೋದ್ದಕ್ಕೂ ಇದಕ್ಕೆ ಅಂತ ಹೇಳಲಾಗುತ್ತಿದೆ.

ಇದನ್ನೂ ಓದಿ: ಡಿಕೆ ಬ್ರದರ್ಸ್ ಆಪರೇಷನ್ ಹಸ್ತಕ್ಕೆ ಹೆಚ್​ಡಿಕೆ ಕೌಂಟರ್: ಇಲ್ಲಿದೆ ಜೆಡಿಎಸ್​ ರೆಸಾರ್ಟ್​ ರಾಜಕೀಯದ ಇನ್​​ಸೈಡ್​ ಮಾಹಿತಿ

ಸಾಲದ್ದಕ್ಕೆ ಕಾಂಗ್ರೆಸ್​ನ ಸಚಿವರ ಕೈಯಿಂದ ತಮ್ಮ ಶಾಸಕರ ಕಾರ್ಯಾಲಯವನ್ನ ಉದ್ಘಾಟನೆ ಕೂಡ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರು, ಪರಿಷತ್ ಸದಸ್ಯರಿಗೂ ಕಚೇರಿಗೆ ಉದ್ಘಾಟನೆ ಕರೆದಿದ್ದರು. ಆದರೆ ಜೆಡಿಎಸ್ ನ ಯಾವೊಬ್ಬ ಲೀಡರ್ ಬಂದಿರಲಿಲ್ಲ. ಕಾಂಗ್ರೆಸ್ ಸಚಿವ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರ ಪ್ರತಿಯೊಂದು ಕಾರ್ಯಕ್ರಮಗಳನ್ನ ಭಾಗವಹಿಸುತ್ತಿದ್ದಾರೆ.

ಜೆಡಿಎಸ್ ಪಕ್ಷದ ನಾಯಕರ ನಡೆ ಹಾಗೂ ಮೈತ್ರಿಯಿಂದ ಅಸಮಾಧಾನ ಆಗಿರುವ ಶಾಸಕ ಶರಣಗೌಡ ಕಾಂಗ್ರೆಸ್ ಸೇರ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಪ್ರತಿ ಬಾರಿಯೂ ಕಾಂಗ್ರೆಸ್ ಸೇರ್ತಿರಾ ಅಂತ ಕೇಳಿದ್ರೆ ಸೇರೋದಿಲ್ಲ ಅಂತ ಯಾವಾಗಲೂ ಹೇಳಿಲ್ಲ. ಆದರೆ ಅವರು ಕರೆದಿಲ್ಲ ಅವರಿಗೆ ನಮ್ಮ ಅವಶ್ಯಕತೆ ಇಲ್ಲ ಅಂತ ಸಾಪ್ಟ್ ಮಾತಾಡಿ ಕಾಂಗ್ರೆಸ್ ಆಹ್ವಾನಕ್ಕೆ ಕಾಯುತ್ತಿದ್ದಾರಾ ಅಂತ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗಾಯಗೊಂಡವರನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್​ಗೆ ಬೆಂಕಿ
ಗಾಯಗೊಂಡವರನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್​ಗೆ ಬೆಂಕಿ
ಕೋಪ ತಾಪ... ಬ್ಯಾಟ್ ಎಸೆದು ಆಕ್ರೋಶ ಹೊರಹಾಕಿದ ಹಾರ್ದಿಕ್ ಪಾಂಡ್ಯ
ಕೋಪ ತಾಪ... ಬ್ಯಾಟ್ ಎಸೆದು ಆಕ್ರೋಶ ಹೊರಹಾಕಿದ ಹಾರ್ದಿಕ್ ಪಾಂಡ್ಯ
169 ಮಂದಿ ಪ್ರಯಾಣಿಕರಿದ್ದ ವಿಮಾನದಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ
169 ಮಂದಿ ಪ್ರಯಾಣಿಕರಿದ್ದ ವಿಮಾನದಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ
ಅಂಕೋಲಾ: ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 1 ಕೋಟಿ ರೂ. ಪತ್ತೆ
ಅಂಕೋಲಾ: ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 1 ಕೋಟಿ ರೂ. ಪತ್ತೆ
ಮಹಾಕುಂಭ ಮೇಳದಲ್ಲಿ ಕಾಲ್ತುಳಿತ, ಹಲವು ಮಂದಿಗೆ ಗಂಭೀರ ಗಾಯ
ಮಹಾಕುಂಭ ಮೇಳದಲ್ಲಿ ಕಾಲ್ತುಳಿತ, ಹಲವು ಮಂದಿಗೆ ಗಂಭೀರ ಗಾಯ
ಸೋಲು ಗೆಲುವಿನ ರಹಸ್ಯ, ಸದಾ ಗೆಲುವಿಗೆ ಏನು ಮಾಡಬೇಕು, ವಿಡಿಯೋ ನೋಡಿ
ಸೋಲು ಗೆಲುವಿನ ರಹಸ್ಯ, ಸದಾ ಗೆಲುವಿಗೆ ಏನು ಮಾಡಬೇಕು, ವಿಡಿಯೋ ನೋಡಿ
ಮೌನಿ ಅಮಾವಾಸ್ಯೆ ಈ ದಿನ ಗ್ರಹಗಳ ಸಂಚಾರ ಮತ್ತು ರಾಶಿ ಭವಿಷ್ಯ ತಿಳಿಯಿರಿ
ಮೌನಿ ಅಮಾವಾಸ್ಯೆ ಈ ದಿನ ಗ್ರಹಗಳ ಸಂಚಾರ ಮತ್ತು ರಾಶಿ ಭವಿಷ್ಯ ತಿಳಿಯಿರಿ
ರೈಲಿನಡಿ ಸಿಲುಕುತ್ತಿದ್ದ ವೃದ್ಧರನ್ನು ರಕ್ಷಿಸಿದ ಬಂಗಾಳದ ಕಾನ್‌ಸ್ಟೆಬಲ್
ರೈಲಿನಡಿ ಸಿಲುಕುತ್ತಿದ್ದ ವೃದ್ಧರನ್ನು ರಕ್ಷಿಸಿದ ಬಂಗಾಳದ ಕಾನ್‌ಸ್ಟೆಬಲ್
ಬಾಡಿಗೆ ಮನೆಯಲ್ಲಿದ್ದೇನೆ, ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
ಬಾಡಿಗೆ ಮನೆಯಲ್ಲಿದ್ದೇನೆ, ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗುವುದು ಯಾಕೆ?
ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗುವುದು ಯಾಕೆ?