ಯಾದಗಿರಿ: ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ. ರಾಜಕೀಯ ಪಕ್ಷಗಳು ಈಗಾಗಲೇ ನಾನಾ ತಯಾರಿಯಲ್ಲಿ ತೊಡಗಿಕೊಂಡಿವೆ. ಇದರ ನಡುವೆ ಕೊಡೇಕಲ್ ಕಾಲಜ್ಞಾನ ಬಸವಣ್ಣನ(Kalagnani Basavanna) ಭವಿಷ್ಯದ ನುಡಿ ಹೊರ ಬಿದ್ದಿದ್ದು ಪಕ್ಷಾಂತರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷಾಂತರ, ಕುದುರೆ ವ್ಯಾಪಾರಕ್ಕೆ ಒಳಗಾಗುವವರಿಗೆ ಅಧಿಕಾರದ ಯೋಗವಿಲ್ಲ ಎಂದು ಕಾಲಜ್ಞಾನಿ ಕೊಡೇಕಲ್ ಬಸವಣ್ಣ ಭವಿಷ್ಯ ನುಡಿದಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಕಾಲಜ್ಞಾನಿ ಬಸವಣ್ಣನ ದೇವಸ್ಥಾನವಿದೆ. ಇಲ್ಲಿ ಪ್ರತಿ ವರ್ಷ ಶಿವರಾತ್ರಿ ಹಬ್ಬದ ದಿನ ಕಾಲಜ್ಞಾನಿ ಬಸವಣ್ಣನವರ ವಚನಗಳನ್ನ ನುಡಿಯಲಾಗುತ್ತೆ. ನಿನ್ನೆ ನಡೆದ ಶಿವರಾತ್ರಿ ಹಬ್ಬದ ಭವಿಷ್ಯನುಡಿಯಲ್ಲಿ ಬಸವಣ್ಣ ಪಕ್ಷಾಂತರಿಗಳಿಗೆ ಎಚ್ಚರಿಕೆ ನೀಡಿದೆ. 2023ರ ಚುನಾವಣೆಯಲ್ಲಿ ಪಕ್ಷಾಂತರ, ಕುದುರೆ ವ್ಯಾಪಾರಕ್ಕೆ ಒಳಗಾಗುವವರಿಗೆ ಅಧಿಕಾರದ ಯೋಗವಿಲ್ಲ. ಜನರೇ ತಕ್ಕ ಶಾಸ್ತಿ ಮಾಡುತ್ತಾರೆ. ನುಡಿದಂತೆ ನಡೆಯುವರಿಗೆ ಮತ್ತೆ ಅಧಿಕಾರದ ಗದ್ದುಗೆ ಸಿಗುತ್ತೆ ಎಂದು ಭವಿಷ್ಯ ನುಡಿದಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರೆ ಎಂದು ಭವಿಷ್ಯ ನುಡಿದ ಬಸವರಾಜ ದೇವರು
ಪುಣ್ಯ ಸ್ತ್ರೀಯಳ ಒಲುಮೆ ಬಣ್ಣ ಭಜನೆ ಅಲ್ಲ. ತನ್ನ ಪುರುಷನೆ ತನಗೆ ಗತಿ ಎಂದು ಇದ್ದರೆ ಮನ್ನಣೆ ಉಂಟು ಶಿವನಲ್ಲಿ ಎಂಬ ಶಿವರಾತ್ರಿ ನುಡಿಯನ್ನು ನುಡಿಯಲಾಗಿದ್ದು ಇದನ್ನು ಹಲವು ಅರ್ಥದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ. ಪಕ್ಷಾಂತರ, ಕುದುರೆ ವ್ಯಾಪಾರ ಮಾಡುವ ಪಕ್ಷದವರಿಗೆ ಶಾಸಕರಿಗೆ ಅಧಿಕಾರ ಯೋಗವಿಲ್ಲ. ಬಣ್ಣದ ಮಾತನಾಡುವರಿಗೆ ಈ ಬಾರಿ ಚುನಾವಣೆಯಲ್ಲಿ ಗೆಲುವು ಕಷ್ಟ. ನುಡಿದಂತೆ ನಡೆದುಕೊಳ್ಳುವರು ಜನರ ನಂಬಿಕೆ ಇಟ್ಟುಕೊಂಡವರಿಗೆ ಅಧಿಕಾರ ಗದ್ದುಗೆ ಎಂದು ವಿಶ್ಲೇಷಣೆ ಮಾಡಲಾಗಿದೆ. ಈ ಹಿಂದೆ ಕೂಡ ಶಿವರಾತ್ರಿ ನುಡಿ ಭವಿಷ್ಯ ನಿಜವಾಗಿದೆ. ಹೀಗಾಗಿ ಈ ಬಾರಿ ಕೂಡ ಇದು ನಿಜವಾಗಲಿದೆ ಎಂದು ವಿಶ್ಲೇಷಕ ಬಸವರಾಜ ಭದ್ರಗೋಳ ತಿಳಿಸಿದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:10 am, Sun, 19 February 23