ಕೋಡಿಹಳ್ಳಿ ಚಂದ್ರಶೇಖರ್ ಮಾಡೋದೆಲ್ಲ ಕೇವಲ ಸ್ವಾರ್ಥಕ್ಕೆ, ಸಾರಿಗೆ ನೌಕರರ ಪರ ಮುಷ್ಕರವನ್ನು ನಿಲ್ಲಿಸಬೇಕು: ಸುಭಾಷ ಐಕೂರ

|

Updated on: Apr 08, 2021 | 11:30 PM

ಸಾರಿಗೆ ನಿಗಮದ ನೌಕರರ ಒಕ್ಕೂಟದ ಗೌರವಾಧ್ಯಕ್ಷರ ಸೋಗಿನಲ್ಲಿ ಅವರು ಸಾರಿಗೆ ಸಿಬ್ಬಂದಿಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಾರಿಗೆ ಮುಷ್ಕರದಿಂದ ಜನರಿಗೆ ತೊಂದರೆಯಾಗುತ್ತಿದೆ. ಬಸ್ಸುಗಳಿಲ್ಲದೆ ಜನ ಪರದಾಡುತ್ತಿದ್ದಾರೆ ಎಂದು ಸುಭಾಷ್ ಐಕೂರ ಹೇಳಿದ್ದಾರೆ

ಕೋಡಿಹಳ್ಳಿ ಚಂದ್ರಶೇಖರ್ ಮಾಡೋದೆಲ್ಲ ಕೇವಲ ಸ್ವಾರ್ಥಕ್ಕೆ, ಸಾರಿಗೆ ನೌಕರರ ಪರ ಮುಷ್ಕರವನ್ನು ನಿಲ್ಲಿಸಬೇಕು: ಸುಭಾಷ ಐಕೂರ
ಸುಭಾಷ ಐಕೂರ್
Follow us on

ಸಾರಿಗೆ ನಿಗಮದ ನೌಕರರ ಒಕ್ಕೂಟದ ಗೌರವಾಧ್ಯಕ್ಷರಾಗಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರು ನೌಕರರ ಪರವಾಗಿ ಎರಡು ದಿನಗಳಿಂದ ಧ್ವನಿಯೆತ್ತಿ ಸರ್ಕಾರ ಮತ್ತು ಸಾರಿಗೆ ಸಚಿವರ ಧೋರಣೆಯನ್ನು ಪ್ರಶ್ನಿಸುತ್ತಿದ್ದರೂ ಇತರ ಕೆಲ ಸಂಘಟನೆಗಳು ಅವರ ವರಸೆ ಮತ್ತು ನಿಲುವುಗಳಿಂದ ಪ್ರಭಾವಿತರಾಗಿಲ್ಲ. ರೈತ ಸಂಘ, ಹಸಿರು ಸೇನೆ ರಾಜ್ಯ ಸಂಚಾಲಕರಾಗಿರುವ ಸುಭಾಷ್ ಐಕೂರ ಅವರು ಕೋಡಿಹಳ್ಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾದಗಿರಿಯಲ್ಲಿ ಗುರುವಾರದಂದು ಮಾತಾಡಿರುವ ಸುಭಾಷ್ ಐಕೂರ, ಚಂದ್ರಶೇಖರ್​ ಲಾಭವಿಲ್ಲದೆ ಯಾವುದೇ ಕೆಲಸ ಮಾಡಲ್ಲ, ಅವರೇನೆ ಮಾಡಿದರೂ ಅದರಲ್ಲಿ ಸ್ವಾರ್ಥ ಆಡಗಿರುತ್ತದೆ, ರೈತ ಸಂಘದ ಅಧ್ಯಕ್ಷರಾಗಿರುವ ಅವರು ಮೊದಲು ಈ ಸಂಘಟನೆಗೆ ಜೀವ ತುಂಬಲಿ, ರೈತರು ಎದುರಿಸುತ್ತಿರುವ ಸಮಸ್ಯೆಗಳ ಕಡೆ ಹಮನ ಹರಿಸಲಿ ಮತ್ತು ಅವುಗಳನ್ನು ಬಗೆಹರಿಸುವ ಪ್ರಯತ್ನ ಮಾಡಲಿ, ಅದನ್ನು ಬಿಟ್ಟು ಅವರು ಸಾರಿಗೆ ನೌಕರರ ಪರವಾಗಿ ಹೋರಾಟಕ್ಕಿಳಿದಿರುವುದು ಯಾರನ್ನು ಮೆಚ್ಚಿಸಲು ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಸಾರಿಗೆ ನಿಗಮದ ನೌಕರರ ಒಕ್ಕೂಟದ ಗೌರವಾಧ್ಯಕ್ಷರ ಸೋಗಿನಲ್ಲಿ ಅವರು ಸಾರಿಗೆ ಸಿಬ್ಬಂದಿಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಾರಿಗೆ ಮುಷ್ಕರದಿಂದ ಜನರಿಗೆ ತೊಂದರೆಯಾಗುತ್ತಿದೆ. ಬಸ್ಸುಗಳಿಲ್ಲದೆ ಜನ ಪರದಾಡುತ್ತಿದ್ದಾರೆ. ಸಾರಿಗೆ ಸಿಬ್ಬಂದಿ ಮುಷ್ಕರಕ್ಕೆ ರೈತ ಸಂಘದ ಬೆಂಬಲವಿದೆ. ಆದರೆ ಕೋಡಿಹಳ್ಳಿ ಮುಂದಾಳತ್ವ ವಹಿಸಿದ್ದು ಕೇವಲ ತಮ್ಮ ಸ್ವಂತದ ಲಾಭಕ್ಕಾಗಿ ಎಂದು ಸುಭಾಷ್ ಐಗೂರು ಹೇಳಿದ್ದಾರೆ.

ಮೆಜೆಸ್ಟಿಕ್​ನಲ್ಲಿ ನಿಂತ ಖಾಸಗಿ ಬಸ್​ಗಳು

ಇದು ಹಬ್ಬಗಳ ಸೀಸನ್, ಯುಗಾದಿ ಮತ್ತು ರಂಜಾನ್ ಹಬ್ಬಗಳು ಹತ್ತಿರದಲ್ಲೇ ಇವೆ, ಹಬ್ಬಗಳೆಂದ ಮೇಲೆ ಜನರ ಓಡಾಟ ಇದ್ದೇ ಇರುತ್ತದೆ. ಆದರೆ ಸಾರಿಗೆ ವ್ಯವಸ್ಥೆಯಿಲ್ಲದೆ ಜನ ಕಂಗೆಟ್ಟಿದ್ದಾರೆ. ಇಂತಹ ಸಮಯದಲ್ಲಿ ಮುಷ್ಕರ ನಡೆಸೋದು ಸರಿಯೇ? ಕೋಡಿಹಳ್ಳಿಯವರಿಗೆ ಇದು ಅರ್ಥವಾಗುತ್ತಿಲ್ಲವೇ? ಎಂದು ಐಕೂರ್ ಪ್ರಶ್ನಿಸಿದ್ದಾರೆ.

ಸಾರಿಗೆ ನೌಕರರ ಮುಷ್ಕರ ವಿಚಾರದಲ್ಲಿ ಕೋಡಿಹಳ್ಳಿ ಮೂಗು ತೂರಿಸುವ ಕೆಲಸ ಮಾಡುತ್ತಿರುವ ಅವರು ಅದನ್ನು ಕೂಡಲೇ ನಿಲ್ಲಿಸಬೇಕು ಎಂದು ಐಕೂರ್ ಆಗ್ರಹಿಸಿದ್ದಾರೆ.

ಏತನ್ಮಧ್ಯೆ, ಬೆಂಗಳೂರಿನಲ್ಲಿ ಇಂದು ಹೇಳಿಕೆಯೊಂದನ್ನು ನೀಡಿದ ಕೋಡಿಹಳ್ಳಿ ಚಂದ್ರಶೇಖರ್ ದರ ನಿಗದಿ ವಿಚಾರ ಪರ್ಯಾಯವಾಗಿ ಮಾಡುತ್ತಿದ್ದಾರೆ, ಸಾರಿಗೆ ನೌಕರರ ದಿಕ್ಕು ಪ್ರಯತ್ನಿಸಲಾಗುತ್ತಿದೆ, ಸರ್ಕಾರ ತನ್ನ ಧೋರಣೆಯನ್ನು ಬದಲಿಸದಿದ್ದರೆ ಹೋರಾಟ ಬೇರೆ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು.

ಸರ್ಕಾರ ಖಾಸಗೀಕರಣದ ಮಾತನ್ನೆತ್ತಿದರೆ ಎರಡನೆ ಹಂತದ ಹೋರಾಟ ಆರಂಭವಾಗಲಿದೆ ಅಂತಲೂ ಅವರು ಹೇಳಿದರು.

‘ಸರ್ಕಾರ ತಾನು ಮಾತುಕತೆಗೆ ಸಿದ್ಧ ಎಂದಿದೆ, ಆದರೆ ನಾವು ಸರ್ಕಾರವನ್ನ ಫ್ರೀಡಂಪಾರ್ಕ್​ಗೆ ಕರೆಯೋದಕ್ಕೆ ಆಗಲ್ಲ.
ಸರ್ಕಾರ ‌ಸಮಯ ನಿಗದಿಗೊಳಸಿ ಮಾತುಕತೆಗೆ ಕರೆದರೆ ನಾವು ಹೋಗಲು ಸಿದ್ಧ,’ ಎಂದು ಚಂದ್ರಶೇಖರ್ ಹೇಳಿದ್ದಾರೆ.

ಇದನ್ನೂ ಓದಿ: KSRTC BMTC Strike: ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧವೇ ಸಿಡಿದೆದ್ದ ಕಂಡಕ್ಟರ್​ ಉಮಾ; ಬೆದರಿಸಿ ಕೆಲಸ ಮಾಡಿಸಿದ್ದಕ್ಕೆ ಕಣ್ಣೀರಿಟ್ಟ ಸಿಬ್ಬಂದಿ ಶ್ರೀಕಾಂತ್​ ರೆಡ್ಡಿ