ಬೈಕ್​ ಅಪಘಾತದಲ್ಲಿ ಗಾಯಗೊಂಡಿದ್ದ ವೃದ್ಧನನ್ನ ಆಸ್ಪತ್ರೆಗೆ ಸೇರಿಸಲು ಸಹಾಯ: ಮಾನವೀಯತೆ ಮೆರೆದ ಶಾಸಕ ರಾಜುಗೌಡ

|

Updated on: Apr 23, 2023 | 3:10 PM

ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಓರ್ವ ವೃದ್ಧನನ್ನ ಆಸ್ಪತ್ರೆಗೆ ಸೇರಿಸುವ ಮೂಲಕ ಸುರಪುರ ಬಿಜೆಪಿ ಶಾಸಕ ಹಾಗೂ ಅಭ್ಯರ್ಥಿ ರಾಜುಗೌಡ ಮಾನವೀಯತೆ ಮೆರೆದಿದ್ದಾರೆ.

ಬೈಕ್​ ಅಪಘಾತದಲ್ಲಿ ಗಾಯಗೊಂಡಿದ್ದ ವೃದ್ಧನನ್ನ ಆಸ್ಪತ್ರೆಗೆ ಸೇರಿಸಲು ಸಹಾಯ: ಮಾನವೀಯತೆ ಮೆರೆದ ಶಾಸಕ ರಾಜುಗೌಡ
ಗಾಯಗೊಂಡಿದ್ದ ವೃದ್ಧನನ್ನ ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿದ ರಾಜುಗೌಡ
Follow us on

ಯಾದಗಿರಿ: ಬೈಕ್ ಅಪಘಾತದಲ್ಲಿ (Accident) ಗಾಯಗೊಂಡಿದ್ದ ಓರ್ವ ವೃದ್ಧನನ್ನ ಆಸ್ಪತ್ರೆಗೆ ಸೇರಿಸುವ ಮೂಲಕ ಸುರಪುರ ಬಿಜೆಪಿ ಶಾಸಕ ಹಾಗೂ ಅಭ್ಯರ್ಥಿ ರಾಜುಗೌಡ ಮಾನವೀಯತೆ ಮೆರೆದಿದ್ದಾರೆ. ಪ್ರಚಾರದ ಭರಾಟೆಯಲ್ಲಿಯೂ ಶಾಸಕರು ಸಹಾಯ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸುರಪುರ ತಾಲೂಕಿನ ಕವಡಿಮಟ್ಟಿ ಗ್ರಾಮದ ಸಮೀಪದಲ್ಲಿ ಎರಡು ಬೈಕ್​ಗಳ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ವೃದ್ಧನ ಕಾಲಿಗೆ ಪೆಟ್ಟಾಗಿದ್ದು, ನರಳಾಡುತ್ತಿದ್ದರು. ಇದೇ ವೇಳೆ ಪ್ರಚಾರಾರ್ಥವಾಗಿ ಸುರಪುರ ಪಟ್ಟಣಕ್ಕೆ ರಾಜುಗೌಡ ತೆರಳುತ್ತಿದ್ದು, ರಸ್ತೆ ಮಧ್ಯೆ ಅಪಘಾತವಾಗಿ ನರಳುತ್ತಿದ್ದ ವೃದ್ಧನನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಸದ್ಯ ರಾಜುಗೌಡರ ಕಾರ್ಯಕ್ಕೆ ಬೆಂಗಲಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾನವೀಯತೆ ಮೆರೆದ ಶಾಸಕ ಪುಟ್ಟರಂಗಶೆಟ್ಟಿ

ಚಾಮರಾಜನಗರ: ಅಪಘಾತದಲ್ಲಿ ಗಾಯಗೊಂಡಿದ್ದ ಸವಾರನನ್ನು ಶಾಸಕ ಪುಟ್ಟರಂಗಶೆಟ್ಟಿ ಅವರು ತನ್ನ ಕಾರಿನಲ್ಲೇ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ಇತ್ತೀಚೆಗೆ ನಡೆದಿತ್ತು. ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ನರೀಪುರ ಬಳಿ ಕಾರು ಹಾಗು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ. ಮೃತನನ್ನು ಚಾಮರಾಜನಗರ ತಾಲ್ಲೂಕಿನ ಉಮ್ಮತ್ತೂರು ಗ್ರಾಮದ ಮಹದೇವಸ್ವಾಮಿ ಎಂದು ಗುರುತಿಸಲಾಗಿತ್ತು.

ಇದನ್ನೂ ಓದಿ: ಯಾದಗಿರಿ; ಸುಫಾರಿ ಪಡೆದು ಕೊಲೆಗೆ ಹೊಂಚು ಹಾಕಿದ್ದ ಕ್ಯಾಬ್ ಡ್ರೈವರ್; ಲಾಡ್ಜ್ ಪರಿಶೀಲನೆ ವೇಳೆ ಯುವಕ ಅಂದರ್

ಕಾರು ಗುದ್ದಿದ ರಭಸಕ್ಕೆ ಬೈಕ್ ಸವಾರನ ದೇಹ ಕಾರಿನ ಮೇಲ್ಭಾಗಕ್ಕೆ ಹಾರಿ ಕೆಳಗೆ ಬಿದ್ದಿತ್ತು. ಘಟನೆಯಲ್ಲಿ ಬೈಕ್​ ಹಿಂಬದಿ ಕುಳಿತಿದ್ದ ಸವಾರ ಗಾಯಗೊಂಡಿದ್ದ. ಈ ವೇಳೆ ಅದೇ ರಸ್ತೆ ಮೂಲಕ ಹೋಗುತ್ತಿದ್ದ ಶಾಸಕ ಪುಟ್ಟರಂಗಶೆಟ್ಟಿ, ಗಾಯಾಳುವನ್ನು ತಮ್ಮ ಕಾರಿನಲ್ಲಿ ಕೊಂಡೊಯ್ದು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದರು. ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಚಾಕುವಿನಿಂದ ಇರಿದು ಮಾನಸಿಕ ಅಸ್ವಸ್ಥ ಮಗನಿಂದ ತಂದೆಯ ಕೊಲೆ

ಕಾರವಾರ: ಚಾಕುವಿನಿಂದ ಇರಿದು ಮಾನಸಿಕ ಅಸ್ವಸ್ಥ ಮಗನಿಂದ ತಂದೆಯ ಕೊಲೆ ಮಾಡಿರುವಂತಹ ದಾರುಣ ಘಟನೆ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ತೊಪ್ಪಲಕೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಪುತ್ರ ಭರತ್ ಮೇಸ್ತಾನಿಂದ ತಂದೆ ಪಾಂಡುರಂಗ ಮೇಸ್ತಾ(62) ಹತ್ಯೆ. ಆರೋಪಿ ಭರತ್​ ಮಾನಸಿಕ ಅಸ್ವಸ್ಥನಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ. ನಿತ್ಯ ತಂದೆ ಪಾಂಡುರಂಗ, ಪುತ್ರ ಭರತ್​​ ನಡುವೆ ಜಗಳವಾಗುತ್ತಿತ್ತು. ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ಹಿಂದೂ ಯುವಕನ ಬರ್ಬರ ಹತ್ಯೆ, ನಾಲ್ವರು ಹಂತಕರು ಅಂದರ್

ಕೊಲೆಗೆ ಸುಪಾರಿ ಕೊಟ್ಟವ ಹಾಗೂ ಪಡೆದ ಯುವಕರಿಬ್ಬರು ಅರೆಸ್ಟ್​​

ಯಾದಗಿರಿ: ಕೊಲೆಗೆ ಸುಪಾರಿ ಕೊಟ್ಟವನು ಹಾಗೂ ಸುಪಾರಿ ಪಡೆದವನು ಇಬ್ಬರಿರು ಯುವಕರನ್ನ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ನಗರದ ಲಾಡ್ಜ್‌‌ ಒಂದರಲ್ಲೇ ಇದ್ದು ಕೊಲೆಗೆ ಹೊಂಚು ಹಾಕಿದ್ದ. ಪವನ್ ಕುಮಾರ್ ಕೊಲೆಗೆ ಸುಪಾರಿ ಪಡೆದಿದ್ದ ಯುವಕ. ನಾನ್ಯಾ ನಾಯ್ಕ್ ಕೊಲೆಗೆ ಸುಪಾರಿ ನೀಡಿದ್ದ ವ್ಯಕ್ತಿ. ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ನಾನ್ಯಾ ನಾಯ್ಕ್ ಯುವಕನಿಗೆ ಕೊಲೆ ಸುಪಾರಿ‌ ನೀಡಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.