ಯಾದಗಿರಿ, ಆಗಸ್ಟ್.04: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಹಿನ್ನೆಲೆ ಯಾದಗಿರಿ ಡಿಹೆಚ್ಒ (Yadgir DHO) ಡಾ.ಪ್ರಭುಲಿಂಗ್ ಮಾನಕರ್ ಅವರನ್ನು ಅಮಾನತು ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಡಳಿತಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇಲಾಖೆ ವಿಚಾರಣೆ ಹಾಗೂ ಕ್ರಿಮಿನಲ್ ಪ್ರಕರಣ ಬಾಕಿ ಇರಿಸಿ ಅಮಾನತು ಜೊತೆಗೆ ವರ್ಗಾವಣೆ ಮಾಡಲಾಗಿದೆ.
ಡಿಎಚ್ಒ ಯಿಂದ ನೇರವಾಗಿ ಕಲಬುರಗಿ ತಾಲೂಕಿನ ಆಳಂದ ಸಾರ್ವಜನಿಕ ತಾಲೂಕು ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ದೂರು ಹಿನ್ನೆಲೆ ಕಳೆದ ಕೆಲ ತಿಂಗಳ ಹಿಂದೆ DHO ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಯಾದಗಿರಿಯ ಕಚೇರಿ, ಮನೆ, ಕಲಬುರಗಿ ಮನೆ ಮೇಲೆ ದಾಳಿ ನಡೆದಿತ್ತು. ಸದ್ಯ ಇದೀಗ ಅಮಾನತು ಮಾಡಲಾಗಿದೆ.
ಇದನ್ನು ಓದಿ: ಅಮಾವಾಸ್ಯೆ ನಡುವೆ ಪತಿಯ ಅಟ್ಟಹಾಸ; ಕುಡಿದ ಮತ್ತಿನಲ್ಲಿ ಪತ್ನಿಯ ಕುತ್ತಿಗೆ ಕಡಿದು ಡ್ಯಾನ್ಸ್ ಮಾಡಿ ವಿಕೃತಿ ಮೆರೆದ ಪತಿ
ಕೇಂದ್ರೀಯ ವಿವಿ ಕುಲಪತಿ, ಕುಲಸಚಿವರ ವಿರುದ್ಧ ಎಫ್ಐಆರ್
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿ ಬಳಿಯಿರುವ ಕೇಂದ್ರಿಯ ವಿಶ್ವವಿದ್ಯಾಲಯ ಕುಲಪತಿ ಮತ್ತು ಕುಲಸಚಿವರ ಮೇಲೆ ಎಫ್ಐಆರ್ ದಾಖಲಾಗಿದೆ. ಕುಲಪತಿ ಬಟ್ಟೂ ಸತ್ಯನಾರಾಯಣ, ಕುಲ ಸಚಿವ ರುದ್ರಗೌಡ ಬಿರಾದಾರ್ ಅವರ ಮೇಲೆ ಎಫ್ಐಆರ್ ದಾಖಲಾಗಿದೆ. ವಿವಿಯ ಸಂಶೋಧನಾ ವಿದ್ಯಾರ್ಥಿ ನಂದಕುಮಾರ್ ಜಾತಿ ನಿಂದನೆ ಅಡಿಯಲ್ಲಿ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ನರೋಣಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.
ಆಗಸ್ಟ್ 1 ರಂದು ವಿವಿಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ಸಲುವಾಗಿ ನಂದಕುಮಾರ್ ವಿವಿಗೆ ಆಗಮಿಸಿದ್ದರು. ಈ ವೇಳೆ ನಂದಕುಮಾರ್ ಅವರನ್ನಿ ವಿವಿಯ ಹೊರಗಡೆ ಗೇಟ್ ಬಳಿಯೇ ತಡೆದು ವಿವಿಯ ಆವರಣದ ಒಳಗಡೆ ಬಿಡದೆ ಸೆಕ್ಯೂರಿಟಿ ತಡೆದಿದ್ದಾರೆ. ವಿವಿಯ ಒಳಗಡೆ ಬಿಡದಂತೆ ಕುಲಪತಿ ಮತ್ತು ಕುಲ ಸಚಿವರು ಹೇಳಿದ್ದಾರೆ ಎಂದ ಸೆಕ್ಯೂರಿಟಿ ತಿಳಿಸಿದ್ದಾರೆ. ಕೀಳು ಜಾತಿಯವನು ಅಂತಾ ನನ್ನ ಒಳಗಡೆ ಬಿಟ್ಟಿಲ್ಲ ಅಂತಾ ಆರೋಪಿಸಿ ನಂದ ಕುಮಾರ್ ದೂರು ನೀಡಿದ್ದಾರೆ. ದೂರಿನಲ್ಲಿ ಈ ಹಿಂದೆಯು ಕೂಡ ನನ್ನನ್ನ ಕೀಳು ಜಾತಿಯವನು ಅಂತಾ ಕಿರುಕುಳ ನೀಡಿದ್ದಾರೆ ಅಂತ ಆರೋಪಿಸಿದ್ದಾರೆ.
ಕಳೆದ ವಾರವಷ್ಟೇ ಸಭೆಯಲ್ಲಿ RSS ಗೀತೆ ಮೊಳಗಿಸಲಾಗಿತ್ತು ಎಂದು ಈ ವಿವಿ ಸುದ್ದಿಯಾಗಿತ್ತು. ಇದೀಗ ಮತ್ತೊಂದು ವಿವಾದ ಮೈ ಮೇಲೆ ಏಳೆದುಕೊಂಡಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ