ಆಸ್ತಿಗಾಗಿ ಹಾಲಿಗೆ ವಿಷ ಬೆರೆಸಿ ಹಸುಗೂಸನ್ನೇ ಕೊಂದ ಮಲತಾಯಿ!

ದಂಪತಿಗೆ ದೀರ್ಘ ಕಾಲದ ದಾಂಪತ್ಯದ ನಂತರೆ, ಐದು ತಿಂಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಇನ್ನು ಆರೋಪಿ ದೇವಮ್ಮಳಿಗೆ ನಾಲ್ಕು ಜನ ಮಕ್ಕಳಾಗಿದ್ದವು. ಹಾಗಾಗಿ ಆಸ್ತಿಯಲ್ಲಿ ಸವತಿ ಶ್ರೀದೇವಿ ಐದು ತಿಂಗಳ ಮಗಳು ಸಂಗೀತಾಗೆ ಪಾಲು ಹೋಗುತ್ತದೆ ಎಂದು ಕೊಲೆ ಮಾಡಿರುವ ಆರೋಪ ಇದೀಗ ಕೇಳಿಬಂದಿದೆ.

ಆಸ್ತಿಗಾಗಿ ಹಾಲಿಗೆ ವಿಷ ಬೆರೆಸಿ ಹಸುಗೂಸನ್ನೇ ಕೊಂದ ಮಲತಾಯಿ!
ವಿಷ ಬೆರೆಸಿ ಹಸುಗೂಸನ್ನೇ ಕೊಂದ ಮಲತಾಯಿ!
Follow us
ಅಮೀನ್​ ಸಾಬ್​
| Updated By: ಸಾಧು ಶ್ರೀನಾಥ್​

Updated on: Sep 01, 2023 | 11:40 AM

ಯಾದಗಿರಿ, ಸೆಪ್ಟೆಂಬರ್​​ 1 : ಆಸ್ತಿಗಾಗಿ ಹಾಲಿಗೆ ವಿಷ ಬೆರೆಸಿ ಐದು ತಿಂಗಳ ಹಸುಗೂಸನ್ನೇ ಮಲತಾಯಿ ಕೊಂದ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಬಬಲಾದ ಗ್ರಾಮದಲ್ಲಿ ( babalada village in vadagera in yadgiri) ಈ ಅಮಾನವೀಯ ಪ್ರಕರಣ ನಡೆದಿದ್ದು, ದೇವಮ್ಮ ಚೆಟ್ಟಿಗೇರಿ ಎಂಬ ಮಲತಾಯಿ ಹಸುಗೂಸಿಗೆ (toddler) ಹಾಲಿನಲ್ಲಿ ವಿಷ ಬೆರೆಸಿ ಸಾಯಿಸಿರುವ ಆರೋಪ ಕೇಳಿಬಂದಿದೆ. ಸಂಗೀತಾ ಚೆಟ್ಟಿಗೇರಿ, ಸಾವನ್ನಪ್ಪಿದ ಐದು ತಿಂಗಳ ಹಸುಗೂಸು. ಮೃತ ಹಸುಗೂಸು ಸಂಗೀತಾಳ ತಾಯಿ ಶ್ರೀದೇವಿ ಎಂಬಾಕೆ ಹಾಲು ಕುಡಿಸುತ್ತಿದ್ದಾಗ ಒತ್ತಾಯ ಮಾಡಿ, ತಾನೇ ಹಾಲುಣಿಸುತ್ತೇನೆ ಅಂತಾ ದೇವಮ್ಮ (step mother) ದುಂಬಾಲು ಬಿದ್ದು ಕರೆದೊಯ್ದಿದ್ದಳು.

ಬಳಿಕ ದೇವಮ್ಮ ಮನೆಯ ರೂಮಿಗೆ ಕರೆದುಕೊಂಡು ಹೋಗಿ ಡೋರ್ ಮುಚ್ಚಿ ಹಾಲಿನ ಬಾಟಲ್ ನಲ್ಲಿ ವಿಷ ಬೆರೆಸಿ ಕೂಸಿಗೆ ಕೂಡಿಸಿದ್ದಾಳೆ. ವಿಷಬೆರೆತ ಹಾಲು ಕುಡಿದ ಮೂರು ಗಂಟೆ ನಂತರ ಬಾಯಲ್ಲಿ ನೊರೆ ಬಂದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಹಸುಗೂಸು ಸಂಗೀತಾ ಸಾವನ್ನಪ್ಪಿದೆ. ಮೊನ್ನೆ ಬುಧವಾರ ಆಗಸ್ಟ್​ 30ರಂದು ಬಬಲಾದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ವಡಗೇರ ಪೊಲೀಸ್ರು ಆರೋಪಿ ದೇವಮ್ಮಳನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿನ್ನೆಲೆ: ಬಬಲಾದ ಗ್ರಾಮದ ಸಿದ್ದಪ್ಪ ಚೆಟ್ಟಿಗೇರಿ ಎಂಬಾತ ಎರಡು ಮದುವೆಯಾಗಿದ್ದ. 11 ವರ್ಷಗಳ ಹಿಂದೆ ಶ್ರೀದೇವಿ ಎಂಬಾಕೆಯನ್ನು ಸಿದ್ದಪ್ಪ ಮದುವೆಯಾಗಿದ್ದ. ದಂಪತಿಗೆ ಮಕ್ಕಳಾಗದ ಹಿನ್ನೆಲೆ 7 ವರ್ಷದ ಹಿಂದೆ ದೇವಮ್ಮಳನ್ನು ಸಿದ್ದಪ್ಪ ಮದುವೆಯಾಗಿದ್ದ. ಅತ್ತ ದೇವಮ್ಮಳನ್ನ ಮದುವೆಯಾದ ನಂತರ ಶ್ರೀದೇವಿ ತನ್ನ ಗಂಡನ ಮನೆ ಬಿಟ್ಟು ಚಾಮನಳ್ಳಿಯ ತವರು ಮನೆಯಲ್ಲಿ ವಾಸವಿದ್ದಳು.

ಹಿರಿಯರ ರಾಜಿ ಸಂಧಾನದ ನಂತರ ಕಳೆದ ಮೂರು ವರ್ಷಗಳ ಹಿಂದೆ ಬಬಲಾದ ಗ್ರಾಮದ ಗಂಡನ ಮನೆಗೆ ವಾಪಸಾಗಿ, ಅಲ್ಲಿಯೇ ವಾಸವಾಗಿದ್ದಳು. ದಂಪತಿಗೆ ದೀರ್ಘ ಕಾಲದ ದಾಂಪತ್ಯದ ನಂತರೆ, ಐದು ತಿಂಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಇನ್ನು ಆರೋಪಿ ದೇವಮ್ಮಳಿಗೆ ನಾಲ್ಕು ಜನ ಮಕ್ಕಳಾಗಿದ್ದವು. ಹಾಗಾಗಿ ಆಸ್ತಿಯಲ್ಲಿ ಸವತಿ ಶ್ರೀದೇವಿ ಐದು ತಿಂಗಳ ಮಗಳು ಸಂಗೀತಾಗೆ ಪಾಲು ಹೋಗುತ್ತದೆ ಎಂದು ಕೊಲೆ ಮಾಡಿರುವ ಆರೋಪ ಇದೀಗ ಕೇಳಿಬಂದಿದೆ.

ಯಾದಗಿರಿ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ