AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ಆಚರಿಸುತ್ತಲೇ ಕಣ್ಣೀರಿಡುವ ಬಂಜಾರ ಯುವತಿಯರು: ಯಾದಗಿರಿಯ ಗುಂಡಳ್ಳಿ ತಾಂಡಾದಲ್ಲಿ ಜಾನಪದ ಸೊಗಡಿನ ‘ತೋಲಿ ಶೀರಾಲಿ’ ವೈಭವ

ಯಾದಗಿರಿ ಜಿಲ್ಲೆಯ ಬಂಜಾರ ಸಮುದಾಯ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸುತ್ತದೆ. ಇದನ್ನು 'ಯುವತಿಯರ ಹಬ್ಬ' ಎಂದೂ ಕರೆಯಲಾಗುತ್ತದೆ. ಬೆಟ್ಟಗಳಿಂದ ಹೂವು ಸಂಗ್ರಹಿಸಿ, ನಾಯಕನ ಅನುಮತಿ ಪಡೆದು, ಸಾಂಪ್ರದಾಯಿಕ ನೃತ್ಯಗಳೊಂದಿಗೆ ಹಬ್ಬ ಪ್ರಾರಂಭವಾಗುತ್ತದೆ. ಮದುವೆಯಾಗಲಿರುವ ಯುವತಿಯರಿಗೆ ಇದು ಭಾವನಾತ್ಮಕ ಕ್ಷಣ. ಆಧುನಿಕತೆಯ ನಡುವೆಯೂ ಬಂಜಾರರು ತಮ್ಮ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ್ದಾರೆ.

ದೀಪಾವಳಿ ಆಚರಿಸುತ್ತಲೇ ಕಣ್ಣೀರಿಡುವ ಬಂಜಾರ ಯುವತಿಯರು: ಯಾದಗಿರಿಯ ಗುಂಡಳ್ಳಿ ತಾಂಡಾದಲ್ಲಿ ಜಾನಪದ ಸೊಗಡಿನ 'ತೋಲಿ ಶೀರಾಲಿ' ವೈಭವ
ದೀಪವಾಳಿ, ಬಂಜಾರ ಸಮುದಾಯImage Credit source: Tv9 kannada
TV9 Web
| Edited By: |

Updated on: Nov 10, 2026 | 7:18 PM

Share

ಯಾದಗಿರಿ, ನ.10: ದೀಪಾವಳಿ ಎಂದರೆ ಕೇವಲ ಪಟಾಕಿಗಳ ಅಬ್ಬರ ಮತ್ತು ದೀಪಗಳ ಸಾಲಷ್ಟೇ ಅಲ್ಲ; ಅದರ ಆಚೆಯೂ ಭಾರತದ ಸಂಸ್ಕೃತಿಯಲ್ಲಿ ಅಪರೂಪದ ಹಾಗೂ ಜಾನಪದ ಸೊಗಡಿನ ಆಚರಣೆಗಳಿವೆ. ಇದಕ್ಕೆ ಸಾಕ್ಷಿಯಾಗಿ ಗಿರಿನಾಡು ಯಾದಗಿರಿ ಜಿಲ್ಲೆಯ ಬಂಜಾರ ಸಮುದಾಯದ ಜನರು ಈ ಬಾರಿಯ ದೀಪಾವಳಿ ಹಬ್ಬವನ್ನು ಅತ್ಯಂತ ಸಡಗರ-ಸಂಭ್ರಮ ಹಾಗೂ ವಿಶಿಷ್ಟ ಸಂಪ್ರದಾಯದೊಂದಿಗೆ ಆಚರಿಸಿ ಗಮನ ಸೆಳೆದಿದ್ದಾರೆ. ಬಂಜಾರ ಸಮುದಾಯದಲ್ಲಿ ದೀಪಾವಳಿಯನ್ನು ಮುಖ್ಯವಾಗಿ ‘ಯುವತಿಯರ ಹಬ್ಬ’ ಎಂದೇ ಕರೆಯಲಾಗುತ್ತದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗುಂಡಳ್ಳಿ ತಾಂಡಾ ಸೇರಿದಂತೆ ಜಿಲ್ಲೆಯ ವಿವಿಧ ತಾಂಡಾಗಳಲ್ಲಿ ಈ ಸಂಪ್ರದಾಯದ ರಂಗು ಕಳೆಗಟ್ಟಿದೆ.

Yadgir Banjara Community (1)

ಬೆಟ್ಟ-ಗುಡ್ಡಗಳಲ್ಲಿ ಹೂವುಗಳ ಸಂಗ್ರಹ: ತಾಂಡಾದ ‘ನಾಯಕನ’ ಅನುಮತಿ

ದೀಪಾವಳಿಯ ದಿನ ಬಂಜಾರ ಸಮುದಾಯದ ಯುವತಿಯರು ಹಾಗೂ ಮಹಿಳೆಯರು ಮುಂಜಾನೆಯೇ ತಾಂಡಾದಿಂದ ದೂರವಿರುವ ಬೆಟ್ಟ-ಗುಡ್ಡಗಳಿಗೆ ತೆರಳಿ ಕಾಡು ಜಾತಿಯ ವಿವಿಧ ಬಗೆಯ ನೈಸರ್ಗಿಕ ಹೂವುಗಳನ್ನು ಹುಡುಕಿ ಸಂಗ್ರಹಿಸಿಕೊಂಡು ಬರುತ್ತಾರೆ. ತಂದ ಹೂವುಗಳನ್ನು ದೇವರಿಗೆ ಅರ್ಪಿಸಿದ ಬಳಿಕ, ತಾಂಡಾದ ಹಿರಿಯರು ಹಾಗೂ ‘ನಾಯಕ’ನಿಗೆ ನೀಡಿ ಹಬ್ಬದ ಶುಭಾಶಯ ಕೋರಿ ಆಶೀರ್ವಾದ ಪಡೆಯುತ್ತಾರೆ. ತಾಂಡಾದಲ್ಲಿ ದೀಪಾವಳಿ ಆಚರಣೆ ಆರಂಭವಾಗಬೇಕಾದರೆ ತಾಂಡಾದ ನಾಯಕನ ಅನುಮತಿ ಪಡೆಯುವುದು ಕಡ್ಡಾಯ. “ಈ ಬಾರಿ ಎಲ್ಲರಿಗೂ ಒಳ್ಳೆಯದಾಗಲಿದೆ, ಸಂಭ್ರಮದಿಂದ ಆಚರಿಸಿ” ಎಂದು ನಾಯಕ ಸಮ್ಮತಿ ಸೂಚಿಸಿದ ಮೇಲೆಯೇ ಇಡೀ ತಾಂಡಾದ ಜನತೆ ಸಂಭ್ರಮದಲ್ಲಿ ಮುಳುಗುತ್ತಾರೆ.

ಇದನ್ನೂ ಓದಿ: ಬರ ಪರಿಹಾರದಲ್ಲಿ ಯಾವುದೇ ಮೋಸವಿಲ್ಲ, ರೈತರಿಗೆ ಸಿಗಲಿದೆ ಕನಿಷ್ಠ 5 ಸಾವಿರ ರೂ.: ವಿಪಕ್ಷಗಳ ಆರೋಪಕ್ಕೆ ಡಿಸಿಎಂ ಡಾ. ಜಿ. ಪರಮೇಶ್ವರ್ ಖಡಕ್ ಸ್ಪಷ್ಟನೆ

ನೆನಪಾಗಿ ಕಾಡುವ ಮದುವೆ: ಯುವತಿಯರ ಕಣ್ಣೀರಿನ ಬೀಳ್ಕೊಡುಗೆ

ಈ ಹಬ್ಬದ ಆಚರಣೆಯಲ್ಲಿ ಒಂದು ಭಾವುಕ ಕ್ಷಣವೂ ಅಡಗಿದೆ. ಬರುವ ಬೇಸಿಗೆಯ ಹೊತ್ತಿಗೆ ಮದುವೆಯಾಗಲಿರುವ ಯುವತಿಯರು ಈ ದೀಪಾವಳಿ ಆಚರಣೆಯ ವೇಳೆ ತೀವ್ರ ದುಃಖದಿಂದ ಕಣ್ಣೀರಿಡುತ್ತಾರೆ. “ಮುಂದಿನ ವರ್ಷ ನಾವು ಮದುವೆಯಾಗಿ ಬೇರೆ ಮನೆಗೆ ಹೋಗುವುದರಿಂದ, ನಮ್ಮ ಸ್ವಂತ ತಾಂಡಾದಲ್ಲಿ ಮತ್ತೆ ಈ ರೀತಿ ದೀಪಾವಳಿ ಆಚರಿಸಲು ಸಾಧ್ಯವಾಗುವುದಿಲ್ಲವಲ್ಲ” ಎಂಬ ಸವಿ ನೆನಪಿನ ಭಾವನಾತ್ಮಕ ನೋವು ಅವರ ಕಣ್ಣೀರಿಗೆ ಕಾರಣವಾಗಿರುತ್ತದೆ.

Yadgir Banjara Community (2)

ಆಧುನಿಕ ಭರಾಟೆಯಲ್ಲಿ ಅನೇಕ ಜಾನಪದ ಕಲೆಗಳು ಮರೆಯಾಗುತ್ತಿರುವ ಈ ಕಾಲದಲ್ಲೂ, ಬಂಜಾರ ಸಮುದಾಯ ತಮ್ಮ ಪರಂಪರೆಯನ್ನು ಜೀವಂತವಾಗಿರಿಸಿದೆ. ದೀಪಾವಳಿ ಆರಂಭಕ್ಕೂ 15 ದಿನಗಳ ಮುಂಚಿನಿಂದಲೇ ಯುವತಿಯರು ಸಾಂಪ್ರದಾಯಿಕ ವರ್ಣರಂಜಿತ ಉಡುಪುಗಳನ್ನು ಧರಿಸಿ ದೇವಸ್ಥಾನದ ಮುಂದೆ ವಾದ್ಯಗೋಷ್ಠಿಯ ತಾಳಕ್ಕೆ ತಕ್ಕಂತೆ ಜಾನಪದ ನೃತ್ಯಗಳನ್ನು ಮಾಡುತ್ತಾರೆ. ದೀಪಾವಳಿಯ ಮುಖ್ಯ ದಿನದಂದು ತಾಂಡಾದ ಪ್ರತಿಯೊಂದು ಮನೆಗೂ ತೆರಳಿ ದೀಪಗಳನ್ನು ಬೆಳಗಿಸುವ ಮೂಲಕ ಬೆಳಕಿನ ಹಬ್ಬಕ್ಕೆ ವಿಶೇಷ ಮೆರುಗು ನೀಡುತ್ತಾರೆ. ತಾಂಡಾದ ಯುವತಿಯರಾದ ಲಕ್ಷ್ಮಿ ಹಾಗೂ ಮಹಾಲಕ್ಷ್ಮಿ ತಿಳಿಸಿರುವಂತೆ, ಈ ಅಪರೂಪದ ಪರಂಪರೆಯನ್ನು ಇಂದಿಗೂ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಅತ್ಯಂತ ಶ್ರದ್ಧೆಯಿಂದ ಮುಂದುವರಿಸಿಕೊಂಡು ಬಂದಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ
ಮಾದಪ್ಪನ ಬೆಟ್ಟದಲ್ಲಿ ಇಂದು ದೀಪಾವಳಿ ಜಾತ್ರಾ ಮಹೋತ್ಸವ; ಬೆಳಗಿದವು ಲಕ್ಷದೀಪ
ಮಾದಪ್ಪನ ಬೆಟ್ಟದಲ್ಲಿ ಇಂದು ದೀಪಾವಳಿ ಜಾತ್ರಾ ಮಹೋತ್ಸವ; ಬೆಳಗಿದವು ಲಕ್ಷದೀಪ
ಹಾಸನಾಂಬೆ ದರ್ಶನಕ್ಕೆ ಇಂದೇ ಕೊನೆಯ ದಿನ
ಹಾಸನಾಂಬೆ ದರ್ಶನಕ್ಕೆ ಇಂದೇ ಕೊನೆಯ ದಿನ
ಅಣ್ಣಾವ್ರ ಸಂಬಂಧಿಕರ ಮನೆಯಲ್ಲಿ ನಿಗೂಢ ಸ್ಫೋಟ; ಕಿಟಕಿ ಗಾಜುಗಳು ಪುಡಿಪುಡಿ!
ಅಣ್ಣಾವ್ರ ಸಂಬಂಧಿಕರ ಮನೆಯಲ್ಲಿ ನಿಗೂಢ ಸ್ಫೋಟ; ಕಿಟಕಿ ಗಾಜುಗಳು ಪುಡಿಪುಡಿ!
ಬೆಂಗಳೂರಿನ ಅಮೃತಹಳ್ಳಿ ಬಳಿ ಭಾರಿ ಅಗ್ನಿ ಅವಘಡ
ಬೆಂಗಳೂರಿನ ಅಮೃತಹಳ್ಳಿ ಬಳಿ ಭಾರಿ ಅಗ್ನಿ ಅವಘಡ