ಸಮುದಾಯ ಭವನದಲ್ಲಿದ್ದ ಸರ್ಕಾರಿ ಶಾಲೆ ಕಟ್ಟಡ ಬೇರೆಡೆಗೆ ಸ್ಥಳಾಂತರ, ಪೋಷಕರು ಬೇಡ ಅನ್ನುತ್ತಿದ್ದಾರೆ ಯಾಕೆ ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Feb 01, 2024 | 2:27 PM

17 ವರ್ಷಗಳ ಹಳೆಯ ಶಾಲೆ ಬೇರೆ ಶಾಲೆಯ ಕಟ್ಟಡಕ್ಕೆ ಸ್ಥಳಾಂತರ.. ಶಾಲೆ ಸ್ಥಳಾಂತರ ಮಾಡಿದ್ದಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರ ಆಕ್ರೋಶ.. ಸಮುದಾಯ ಭವನದಲ್ಲಿ ಶಾಲೆ ನಡೆಯುತ್ತಿದ್ದಕ್ಕೆ ಸ್ಥಳಾಂತರ ಮಾಡಿದ ಅಧಿಕಾರಿಗಳು.. ಯಸ್ ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ನಗರದ ವಾಲ್ಮೀಕಿ ಬಡಾವಣೆಯಲ್ಲಿ..

ಸಮುದಾಯ ಭವನದಲ್ಲಿದ್ದ ಸರ್ಕಾರಿ ಶಾಲೆ ಕಟ್ಟಡ ಬೇರೆಡೆಗೆ ಸ್ಥಳಾಂತರ, ಪೋಷಕರು ಬೇಡ ಅನ್ನುತ್ತಿದ್ದಾರೆ ಯಾಕೆ ಗೊತ್ತಾ?
ಸರ್ಕಾರಿ ಶಾಲೆ ಕಟ್ಟಡ ಬೇರೆಡೆಗೆ ಸ್ಥಳಾಂತರ, ಪೋಷಕರು ಬೇಡ ಅನ್ನುತ್ತಿದ್ದಾರೆ
Follow us on

ಕಳೆದ 17 ವರ್ಷಗಳಿಂದ ಆ ಬಡವಾಣೆಯಲ್ಲಿ ಸರ್ಕಾರಿ ಶಾಲೆ ಸಮುದಾಯ ಭವನದಲ್ಲಿ ನಡೆಯುತ್ತಿತ್ತು. ಸಾವಿರಾರು ಮಕ್ಕಳು ಸಮುದಾಯ ಭವನದಲ್ಲಿ ನಡೆಯುತ್ತಿದ್ದ ಶಾಲೆಯಲ್ಲಿಯೇ ವಿದ್ಯೆಯನ್ನ ಕಲಿತ್ತಿದ್ದಾರೆ. ಈಗ್ಲೂ ಕೂಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಶಿಕ್ಷಣವನ್ನ ಪಡೆಯುತ್ತಿದ್ದಾರೆ. ಆದ್ರೆ ಈಗ ಅಧಿಕಾರಿಗಳು ಸಮುದಾಯ ಭವನದಲ್ಲಿದ್ದ ಶಾಲೆಯನ್ನ ಬೇರೆ ಸರ್ಕಾರಿ ಶಾಲೆಯ ಕಟ್ಟಡಕ್ಕೆ ವರ್ಗಾವಣೆ ಮಾಡಿದ್ದಾರೆ. ಬೇರೆ ಕಡೆ ಶಾಲೆಯನ್ನ ಸ್ಥಳಾಂತರ ಮಾಡಿದ್ದಕ್ಕೆ ಒಂದು ತಿಂಗಳಿನಿಂದ ಮಕ್ಕಳು ಶಾಲೆಗೆ ಹೋಗುತ್ತಿಲ್ಲ.. ಹೊಸ ಕಡೆಗಾದ್ರೆ ಮಕ್ಕಳಿಗೆ ಶಾಲೆಗೆ ಕಳುಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಸ್ ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ನಗರದ ವಾಲ್ಮೀಕಿ ಬಡಾವಣೆಯಲ್ಲಿ..

ಹೌದು ಕಳೆದ 17 ವರ್ಷಗಳ ಹಿಂದೆ ಅಂದ್ರೆ 2006-07 ನೇ ಸಾಲಿನಲ್ಲಿ ಈ ಬಡಾವಣೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನ ಶಿಕ್ಷಣ ಇಲಾಖೆ ಮಂಜೂರು ಮಾಡಿತ್ತು. ಆರಂಭದಲ್ಲೇ ಜಾಗ ಮತ್ತು ಶಾಲೆಗೆ ಕಟ್ಟಡ ಇಲ್ಲದ ಕಾರಣಕ್ಕೆ ಬಡಾವಣೆಯ ಮಶಮ್ಮ ದೇವಸ್ಥಾನದ ಆವರಣದಲ್ಲಿ ಟಿನ್ ಶೆಡ್​​​ ಹಾಕಿಕೊಂಡು ಶಾಲೆಯನ್ನ ನಡೆಸಲಾಗುತ್ತಿತ್ತು.

ಆದ್ರೆ ಕೆಲ ವರ್ಷಗಳ ಬಳಿಕ ಇದೆ ದೇವಸ್ಥಾನ ಪಕ್ಕದ ಖಾಲಿ ಜಾಗದಲ್ಲಿ ದೇವಸ್ಥಾನದ ಸಮುದಾಯ ಭವನ ನಿರ್ಮಾಣವಾಗಿದೆ. ಹೀಗಾಗಿ ಶಾಲೆಯನ್ನ ಟಿನ್ ಶೆಡ್ ನಿಂದ ಸಮುದಾಯ ಭವನಕ್ಕೆ ಶಿಫ್ಟ್ ಮಾಡಲಾಗಿದೆ. ಕಳೆದ 10 ವರ್ಷಗಳಿಂದ ಇದೆ ಮುಚ್ಚಿರುವ ಸಮುದಾಯ ಭವನದಲ್ಲಿ ಶಾಲೆಯನ್ನ ನಡೆಸಲಾಗುತ್ತಿತ್ತು. ಸುಮಾರು 17 ವರ್ಷಗಳ ಕಾಲ ಕಿರಿಯ ಪ್ರಾಥಮಿಕ ಶಾಲೆಯನ್ನ ಇದೆ ಸಮುದಾಯ ಭವನದಲ್ಲಿ ನಡೆಸಿಕೊಂಡು ಬರಲಾಗಿದೆ.

ಆದ್ರೆ ಮಕ್ಕಳಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಈಗ ಶಿಕ್ಷಣ ಇಲಾಖೆ ಅಧಿಕಾರಿಗಳು ಸಮುದಾಯ ಭವನದಿಂದ ಪಕ್ಕದ ಬಡಾವಣೆಯಲ್ಲಿರುವ ಸರ್ಕಾರಿ ಉರ್ದು ಶಾಲೆಯ ಕಟ್ಟಡಕ್ಕೆ ಶಾಲೆಯನ್ನ ಕಳೆದ ತಿಂಗಳು ಸ್ಥಳಾಂತರ ಮಾಡಿದ್ದಾರೆ. ಸ್ಥಳಾಂತರ ಮಾಡಿದ ದಿನದಿಂದ ಇಲ್ಲಿಯವರೆಗೆ ಮಕ್ಕಳು ಸ್ಥಳಾಂತರಗೊಂಡು ಶಾಲೆಗೆ ಹೋಗದೆ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಮಕ್ಕಳನ್ನ ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.

17 ವರ್ಷಗಳಿಂದ ಶಾಲೆಗೆ ಒಂದು ಸ್ವಂತ ಕಟ್ಟಡವನ್ನ ಕಟ್ಟಿಕೊಡದ ಅಧಿಕಾರಿಗಳು ಈಗ ಶಾಲೆಯನ್ನ ಬೇರೆ ಕಡೆ ಸ್ಥಳಾಂತರ ಮಾಡಿದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಶಾಲೆಯನ್ನ ಸ್ಥಳಾಂತರ ನೆಪದಲ್ಲಿ ಬೇರೆ ಶಾಲೆಗೆ ವಿಲೀನ ಮಾಡಲು ಪ್ಲಾನ್ ಮಾಡಿದ್ದಾರೆ ಅಂತ ಪೋಷಕರ ಆರೋಪವಾಗಿದೆ.

Also Read: ವಿದ್ಯಾಕಾಶಿ ಧಾರವಾಡ- ವಾಣಿಜ್ಯ ನಗರಿ ಹುಬ್ಬಳ್ಳಿ ಅವಳಿ ನಗರದಲ್ಲಿ ಮಹಿಳೆಯರದ್ದೇ ದರ್ಬಾರ್!

ಯಾಕೆಂದ್ರೆ 17 ವರ್ಷದಿಂದ ಶಾಲೆಯ ಬಗ್ಗೆ ಸಮಸ್ಯೆ ಕೇಳಲು ಬಾರದ ಅಧಿಕಾರಿಗಳು ಈಗ ಏಕಾಏಕಿ ಬಂದು ಶಾಲೆ ಸ್ಥಳಾಂತರ ಮಾಡಿದ್ದಾರೆ ಅಂತ ಆರೋಪಿಸುತ್ತಿದ್ದಾರೆ. ಶಾಲೆಯನ್ನ ಸ್ಥಳಾಂತರ ಮಾಡಿದ್ದಕ್ಕೆ ಈಗಿರುವ ಶಾಲೆಗೆ ಮಕ್ಕಳು ಹೋಗಬೇಕು ಅಂದ್ರೆ ಮುಖ್ಯ ರಸ್ತೆಯನ್ನ ದಾಟಿ ಹೋಗಬೇಕು. ಮುಖ್ಯ ರಸ್ತೆ ಮೇಲೆ ನೂರಾರು ವಾಹನಗಳು ಓಡಾಡುತ್ತವೆ ಹೀಗಾಗಿ ಪುಟ್ಟ ಪುಟ್ಟ ಮಕ್ಕಳು ರಸ್ತೆಯನ್ನ ದಾಟಿ ಶಾಲೆಗೆ ಹೋಗುವುದ್ದಕ್ಕೆ ಆಗುವುದಿಲ್ಲ. ರಸ್ತೆ ದಾಟುವಾಗ ಏನಾದ್ರು ಹೆಚ್ಚು ಕಮ್ಮಿ ಆದ್ರೆ ಯಾರು ಜವಾಬ್ದಾರರು ಆಗುತ್ತಾರೆ? ನಾವು ಕೂಲಿ ಮಾಡುವ ಜನ ಮಕ್ಕಳಿಗೆ ಶಾಲೆಗೆ ಬಿಡೋಕೆ ಬರೋಕೆ ಆಗಲ್ಲ.

ಹೀಗಾಗಿ ಸಮುದಾಯ ಭವನದಲ್ಲೇ ಶಾಲೆ ನಡೆಸಿ ಅಂತ ಆಗ್ರಹಿಸುತ್ತಿದ್ದಾರೆ. ಇನ್ನು ಅಧಿಕಾರಿಗಳು ಮಾತು ಕೇಳದಕ್ಕೆ ಕಳೆದ ಒಂದು ತಿಂಗಳಿನಿಂದ 1 ರಿಂದ 5 ನೇ ತರಗತಿ ವರೆಗೆ ಇರುವ ಈ ಶಾಲೆಯ ಸುಮಾರು 60 ಕ್ಕೂ ಅಧಿಕ ಮಕ್ಕಳು ಶಾಲೆ ಮುಖ ನೋಡದೆ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಮಕ್ಕಳು ಶಾಲೆಗೆ ಬಾರದ ಕಾರಣಕ್ಕೆ ಶಾಲೆಯ ಮೂರು ಜನ ಶಿಕ್ಷಕಿಯರು ಕಳೆದ ಒಂದು ತಿಂಗಳಿನಿಂದ ಶಾಲೆಗೆ ಬಂದು ಕುಳಿತುಕೊಂಡು ವಾಪಸ್ ಹೋಗುತ್ತಿದ್ದಾರೆ. ಕೊನೆಗೆ ಇವತ್ತು ಪೋಷಕರ ಜೊತೆ ಮಕ್ಕಳು ಸಹ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೋಷಕರ ಒಪ್ಪಿಗೆ ಇಲ್ಲದೆ ಶಾಲೆಯನ್ನ ಸ್ಥಳಾಂತರ ಮಾಡಿದ್ದಾರೆ ಅಂತ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಒಟ್ನಲ್ಲಿ 17 ವರ್ಷಗಳಿಂದ ಸರ್ಕಾರಿ ಶಾಲೆ ಸಮುದಾಯ ಭವನದಲ್ಲಿ ನಡೆಯುತ್ತಿತ್ತು. ಆದ್ರೆ ಈಗ ಮಕ್ಕಳ ಹಿತದೃಷ್ಟಿಯಿಂದ ಅಧಿಕಾರಿಗಳು ಶಾಲೆಯನ್ನ ಸ್ಥಳಾಂತರ ಮಾಡಿದ್ದಾರೆ. ಆದ್ರೆ ಅಧಿಕಾರಿಗಳ ವಿರುದ್ದ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು ಮಕ್ಕಳನ್ನ ಶಾಲೆಗೆ ಕಳುಹಿಸುತ್ತಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ