ಯಾದಗಿರಿ: ದೈಹಿಕ ಸಂಪರ್ಕಕ್ಕೆ ಒಲ್ಲೆ ಎಂದ ಪತ್ನಿಯ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಪತಿ

ಯಾದಗಿರಿಯ ಸುರಪುರದ ಡೊಣ್ಣಿಗೇರದಲ್ಲಿ ಅಮಾನವೀಯ ಕೃತ್ಯ ನಡೆದಿದೆ. ಕೌಂಟುಂಬಿಕ ಹಿಂಸೆಯಿಂದಾಗಿ ತವರು ಮನೆ ಸೇರಿದ್ದ ಮಹಿಳೆಯನ್ನು ಹುಡುಕಿಕೊಂಡು ಬಂದಿದ್ದ ಆಕೆಯ ಪತಿಯೇ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಇಷ್ಟಕ್ಕೂ ಈ ಕೊಲೆ ನಡೆದಿದ್ದು, ಮಹಿಳೆ ಪತಿಯ ಜತೆ ದೈಹಿಕ ಸಂಪರ್ಕಕ್ಕೆ ನಿರಾಕರಿಸಿದ್ದಕ್ಕೆ ಎನ್ನಲಾಗಿದೆ.

ಯಾದಗಿರಿ: ದೈಹಿಕ ಸಂಪರ್ಕಕ್ಕೆ ಒಲ್ಲೆ ಎಂದ ಪತ್ನಿಯ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಪತಿ
ಮರೆಮ್ಮ ಮತ್ತು ಸಂಗಪ್ಪ
Updated By: Ganapathi Sharma

Updated on: Oct 06, 2025 | 12:27 PM

ಯಾದಗಿರಿ, ಅಕ್ಟೋಬರ್ 6: ದೈಹಿಕ ಸಂಪರ್ಕಕ್ಕೆ ಒಪ್ಪದ ಕಾರಣಕ್ಕೆ ವ್ಯಕ್ತಿಯೊಬ್ಬ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ದಾರುಣ ಘಟನೆ ಯಾದಗಿರಿ (Yadgir) ಜಿಲ್ಲೆಯ ಸುರಪುರದ ನಗರದ ಡೊಣ್ಣಿಗೇರ ಬಡಾವಣೆಯಲ್ಲಿ ನಡೆದಿದೆ. 40 ವರ್ಷ ವಯಸ್ಸಿನ ಸಂಗಪ್ಪ ಪತ್ನಿ ಮರೆಮ್ಮ (35) ಕೊಲೆ ಮಾಡಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಸುರಪುರ ಠಾಣೆಯ ಪೊಲೀಸರು ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ. ಸಂಗಪ್ಪನನ್ನು ಬಂಧಿಸಲಾಗಿದೆ.

ಗಂಡ ಹೆಂಡತಿ ಮಧ್ಯೆ ಭಾನುವಾರ ರಾತ್ರಿ ದೈಹಿಕ ಸಂಪರ್ಕ ವಿಚಾರವಾಗಿ ಜಗಳವಾಗಿತ್ತು. ಪತ್ನಿ ದೈಹಿಕ ಸಂಪರ್ಕಕ್ಕೆ ಒಪ್ಪಿರಲಿಲ್ಲ. ಈ ವೇಳೆ, ಜಗಳ ವಿಕೋಪಕ್ಕೆ ತಿರುಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.

ಕೊಲೆಗಾರ ಸಂಗಪ್ಪ ಕಳೆದ ಎರಡು ದಿನಗಳ ಹಿಂದ ತನ್ನ ಊರಾದ ಕಕ್ಕೇರದಿಂದ ಸುರಪುರಕ್ಕೆ ಬಂದಿದ್ದ. ಗಂಡ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಒಂದು ವರ್ಷದಿಂದ ಮರೆಮ್ಮ ತವರು ಮನೆಯಲ್ಲಿದ್ದರು. ಭಾನುವಾರ ಸುರಪುರಕ್ಕೆ ಬಂದ ಸಂಗಪ್ಪ ಪತ್ನಿಯನ್ನು ದೈಹಿಕ ಸಂಪರ್ಕಕ್ಕೆ ಆಗ್ರಹಿಸಿದ್ದಾನೆ. ಒಪ್ಪದೇ ಇರುವುದಕ್ಕೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.

ಇದನ್ನೂ ಓದಿ: ನೀರು ಕೊಡದಿದ್ದಕ್ಕೆ ಪತಿಯಿಂದ ಹಲ್ಲೆ: ಕೋಮಾಗೆ ಜಾರಿದ್ದ ಮಹಿಳೆ ಸಾವು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

(ಮಾಹಿತಿ ಅಪ್​ಡೇಟ್ ಆಗಲಿದೆ)