ದೂರು ಸ್ವೀಕರಿಸದಿದ್ದರೆ ಎದುರಾಳಿಯನ್ನು ಕೊಲ್ಲುವೆ: ಪೊಲೀಸ್​ ಮಹಾನಿರ್ದೇಶಕರನ್ನೇ ಟ್ಯಾಗ್​ ಮಾಡಿ ವ್ಯಕ್ತಿ ಟ್ವೀಟ್

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬರದೇವನಾಳ ಗ್ರಾಮದ ಶರೀಫ್ ಅವರ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಒಂದು ತಿಂಗಳಿಂದ ಪ್ರಯತ್ನಿಸುತ್ತಿದ್ದಾರೆ. ಆದರೆ, ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಆಕ್ರೋಶಗೊಂಡ ಶರೀಫ್, ತನ್ನ ಎದುರಾಳಿಗಳನ್ನು ಕೊಲ್ಲುವುದಾಗಿ ಎಕ್ಸ್ ನಲ್ಲಿ ಬರೆದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಟ್ಯಾಗ್ ಮಾಡಿದ್ದಾರೆ.

ದೂರು ಸ್ವೀಕರಿಸದಿದ್ದರೆ ಎದುರಾಳಿಯನ್ನು ಕೊಲ್ಲುವೆ: ಪೊಲೀಸ್​ ಮಹಾನಿರ್ದೇಶಕರನ್ನೇ ಟ್ಯಾಗ್​ ಮಾಡಿ ವ್ಯಕ್ತಿ ಟ್ವೀಟ್
ತಲ್ವಾರ್​, ಕೊಡೇಕಲ್​ ಪೊಲೀಸ್​ ಠಾಣೆ
Edited By:

Updated on: Jan 20, 2025 | 1:38 PM

ಯಾದಗಿರಿ, ಜನವರಿ 20: ಠಾಣೆಯಲ್ಲಿ (Police Station) ದೂರು ಸ್ವೀಕರಿಸದಿದ್ದಕ್ಕೆ ಆಕ್ರೋಶಗೊಂಡಿರುವ ವ್ಯಕ್ತಿಯೋರ್ವ ತನ್ನ ಎದುರಾಳಿಗಳನ್ನು ತಲವಾರ್​ನಿಂದ ಕೊಲೆ ಮಾಡುವುದಾಗಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪೋಸ್ಟ್​ ಹಾಕಿ ರಾಜ್ಯ ಪೊಲೀಸ್​ ಮಹಾನಿರ್ದೇಶಕರಿಗೆ ಟ್ಯಾಗ್​ ಮಾಡಿದ ವಿಚಿತ್ರ ಘಟನೆ ನಡೆದಿದೆ. ಯಾದಗಿರಿ (Yadgiri) ಜಿಲ್ಲೆಯ ಹುಣಸಗಿ ತಾಲೂಕಿನ ಬರದೇವನಾಳ ಗ್ರಾಮದ ಶರೀಫ್ ತನ್ನೂರಿನಲ್ಲಿ ಮನೆ ಕಟ್ಟಿಸುತ್ತಿದ್ದಾರೆ.

ಇದಕ್ಕೆ ಗ್ರಾಮದ ಕೆಲವರಿಂದ ಅಡಚಣೆ ವ್ಯಕ್ತಪಡಿಸಿದ್ದರು. ಎಲ್ಲ ದಾಖಲೆಗಳು ಸರಿಯಾಗಿದ್ದರೂ ಅಡಚಣೆ ಮಾಡುತ್ತಿದ್ದಾರೆ, ಹೀಗಾಗಿ ಅವರ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಕೊಡೆಕಲ್ ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಶರೀಫ್​ ಅವರ ತಂದೆ ಕಳೆದ ಒಂದು ತಿಂಗಳಿನಿಂದ ಪೊಲೀಸ್​ ಠಾಣೆಗೆ ಅಲೆದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ.

ಇದನ್ನೂ ಓದಿ: ಶಾಸಕ ಶರಣಗೌಡ ಕಂದಕೂರನಿಂದ ಕಿರುಕುಳ ಆರೋಪ: ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ

ಸುರಪುರ ಶಾಸಕರ ಪಿಎ ಪೊಲೀಸರಿಗೆ ಕರೆ ಮಾಡಿ ಹೇಳಿದ್ದಕ್ಕೆ ದೂರು ಪಡೆಯುತ್ತಿಲ್ಲ. ಒಂದು ವೇಳೆ ನೀವು ದೂರು ಪಡೆಯದಿದ್ದರೆ ನನ್ನ ಎದುರಾಳಿಗಳನ್ನು ತಲ್ವಾರ್​​ನಿಂದ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ತಲ್ವಾರ್​​ಗಳ ಫೋಟೋವನ್ನು ಟ್ವೀಟ್​​ ಮಾಡಿ ಪೊಲೀಸ್​ ಮಹಾನಿರ್ದೇಶಕರಿಗೆ ಟ್ಯಾಗ್ ಮಾಡಿದ್ದಾರೆ.

ಟ್ವಿಟರ್​ ಪೋಸ್ಟ್​

ಶರೀಫ್​ ಟ್ವಿಟ್​ಗೆ ಬೆಂಗಳೂರು ನಗರ ಪೊಲೀಸರು ಪ್ರತಿಕ್ರಿಯಿಸಿದ್ದು, ಯಾವ ಠಾಣೆಗೆ ದೂರು ನೀಡಲು ಹೋಗಿದ್ರಿ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಶರೀಫ್​, “ಕೊಡೇಕಲ್ ಪೊಲೀಸ್ ಠಾಣೆ ಅಧಿಕಾರಿಗಳಿಗೆ ದಯವಿಟ್ಟು ಕ್ರಮ ಕೈಗೊಳಲು ಹೇಳಿ. ನಮ್ಮ ತಂದೆ ಒಂದು ತಿಂಗಳಿನಿಂದ ಪೊಲೀಸ್ ಠಾಣೆಗೆ ತಿರುಗಾಡಿದರೂ, ಯಾರು ಕೂಡ ಗಮನಹರಿಸುತ್ತಿಲ್ಲ. ಇಲ್ಲದಿದ್ದರೇ ನಾನು ನನ್ನ ಕಾನೂನು (ಮರ್ಡರ್) ಮಾಡಬೇಕಾಗುತ್ತದೆ” ಎಂದು ಉತ್ತರ ನೀಡಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:35 pm, Mon, 20 January 25