Yadgir News: ಮಹಿಳೆಯರಿಗೆ ಉಚಿತ ಪ್ರಯಾಣ, ನಮಗೆ ಇನ್ನೂ ಆಗಿಲ್ಲ ವೇತನ; ಯಾದಗಿರಿಯಲ್ಲಿ ಸಾರಿಗೆ ಸಿಬ್ಬಂದಿ ಅಳಲು

ಪ್ರತಿ ತಿಂಗಳು 1ನೇ ತಾರೀಖಿನಂದು ಸಂಬಳ ಆಗುತ್ತಿತ್ತು. ಆದ್ರೆ ಈ ತಿಂಗಳು ಇದುವರೆಗೂ ಸಂಬಳ ಆಗಿಲ್ಲ ಅಂತಾ‌ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

Yadgir News: ಮಹಿಳೆಯರಿಗೆ ಉಚಿತ ಪ್ರಯಾಣ, ನಮಗೆ ಇನ್ನೂ ಆಗಿಲ್ಲ ವೇತನ; ಯಾದಗಿರಿಯಲ್ಲಿ ಸಾರಿಗೆ ಸಿಬ್ಬಂದಿ ಅಳಲು
ಒಳಾಡಳಿತ & ಸಾರಿಗೆ ಇಲಾಖೆ 16,638 ಕೋಟಿ ಮೀಸಲು
Follow us
| Updated By: ಗಣಪತಿ ಶರ್ಮ

Updated on: Jul 06, 2023 | 3:13 PM

ಯಾದಗಿರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್​​​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಸಾರಿಗೆ ಇಲಾಖೆ ಸಿಬ್ಬಂದಿಗೆ (Transport Department) ಮಾತ್ರ ನಿಗದಿಗಿಂತ ಆರು ದಿನ ಕಳೆದರೂ ಇನ್ನೂ ವೇತನವಾಗಿಲ್ಲ. ಈ ಬಗ್ಗೆ ಯಾದಗಿರಿಯ ಸಾರಿಗೆ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ಸುಳಿವು ಕೂಡ ಇಲ್ಲ ಎಂದು ಇಲಾಖೆ ಸಿಬ್ಬಂದಿ ಹೇಳಿದ್ದು, ಸಂಬಳ ಆಗದ್ದಕ್ಕೆ ಪರಿತಪಿಸುತ್ತಿದ್ದಾರೆ.

ಉಚಿತ ಬಸ್ ಯೋಜನೆ ಪ್ರಾರಂಭವಾದ ನಂತರ ಹೆಚ್ಚು ಕಾರ್ಯನಿರ್ವಹಿಸುತ್ತಿರುವುದೇ ಚಾಲಕರು, ನಿರ್ವಾಹಕರು. ಪ್ರತಿ ತಿಂಗಳು 1ನೇ ತಾರೀಖಿನಂದು ಸಂಬಳ ಆಗುತ್ತಿತ್ತು. ಆದ್ರೆ ಈ ತಿಂಗಳು ಇದುವರೆಗೂ ಸಂಬಳ ಆಗಿಲ್ಲ ಅಂತಾ‌ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಈ ಮಧ್ಯೆ ಇವತ್ತು, ನಾಳೆ ಸಂಬಳ ಆಗುತ್ತದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ದಿನದೂಡುತ್ತಿದ್ದಾರೆ. ಮನೆ ಬಾಡಿಗೆ ಹಾಗೂ ಮಕ್ಕಳ ಶಾಲಾ ಫೀಸ್ ಕಟ್ಟಲಾಗದೆ ಸಿಬ್ಬಂದಿ ಹೈರಾಣಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ