ಲೋಕ ಕಲ್ಯಾಣ, ಕೊರೊನಾ ನಿರ್ಮೂಲನೆಗಾಗಿ ರಾಚೋಟೇಶ್ವರ ಶ್ರೀಗಳಿಂದ ಸಮಾಧಿಯೋಗ; ಗಾಳಿ, ಅನ್ನ, ನೀರು ಇಲ್ಲದೆ 11 ದಿನಗಳ ಕಠಿಣ ಅನುಷ್ಠಾನ ಅಂತ್ಯ

| Updated By: ಆಯೇಷಾ ಬಾನು

Updated on: Oct 29, 2021 | 8:36 AM

ಇಡೀ ವಿಶ್ವಕ್ಕೆ ಮಾರಕವಾಗಿರುವ ಕೊರೊನಾ ನಿರ್ಮೂಲನೆಗಾಗಿ ಅಲ್ಲೊಬ್ಬ ಶ್ರೀಗಳು ಸಮಾಧಿಯೋಗ ಮುಂದಾಗಿದ್ದಾರೆ. ಆ ಶ್ರೀಗಳು ಹನ್ನೊಂದು ದಿನ ಊಟ, ನೀರು, ಗಾಳಿ ಇಲ್ಲದೆ ಮತ್ತು ಬಾಹ್ಯ ಲೋಕದ ಸಂಪರ್ಕದಲ್ಲಿರದೆ, ಬರೀ ಯೋಗದಿಂದಲೇ ಬದುಕಿದ್ದಾರೆ.

ಲೋಕ ಕಲ್ಯಾಣ, ಕೊರೊನಾ ನಿರ್ಮೂಲನೆಗಾಗಿ ರಾಚೋಟೇಶ್ವರ ಶ್ರೀಗಳಿಂದ ಸಮಾಧಿಯೋಗ; ಗಾಳಿ, ಅನ್ನ, ನೀರು ಇಲ್ಲದೆ 11 ದಿನಗಳ ಕಠಿಣ ಅನುಷ್ಠಾನ ಅಂತ್ಯ
ರಾಚೋಟೇಶ್ವರ ದೇವಸ್ಥಾನದ ರಾಚೋಟೇಶ್ವರ ಶ್ರೀಗಳು
Follow us on

ಯಾದಗಿರಿ: ನಗರದ ಹೊರ ವಲಯದಲ್ಲಿರೋ ರಾಚೋಟೇಶ್ವರ ದೇವಸ್ಥಾನದ ರಾಚೋಟೇಶ್ವರ ಶ್ರೀಗಳು, ಲೋಕ ಕಲ್ಯಾಣಕ್ಕಾಗಿ, ಕೊರೊನಾ ನಿರ್ಮೂಲನೆಗಾಗಿ ಕಠಿಣ ಸಮಾಧಿಯೋಗ ಕೈಗೊಂಡಿದ್ರು. ಕಠಿಣ ಅನುಷ್ಠಾನ ಮಾಡಿದ್ರು. ಗಾಳಿ, ಅನ್ನ, ನೀರು ಇಲ್ಲದೆ 11 ದಿನಗಳ ಕಾಲ ಶ್ರೀಗಳು ಸಮಾಧಿಯೋಗ ಕೈಗೊಂಡಿದ್ರು. ರಾಚೋಟೇಶ್ವರ ದೇವಸ್ಥಾನದಲ್ಲಿ ಸಣ್ಣ ಗಾಳಿಯು ಒಳಗೆ ಬಾರದ ಹಾಗೆ ಸಿಮೆಂಟ್‌ನಿಂದ ಗೋಡೆಗಳನ್ನ ಪ್ಯಾಕ್ ಮಾಡಿಕೊಂಡು ಕಠಿಣ ವ್ರತಕೈಗೊಂಡಿದ್ರು. 11 ದಿನಗಳ ಹಿಂದೆ ಕೈಗೊಂಡಿದ್ದ ಅದೇ ವ್ರತ ನಿನ್ನೆ ಅಂತ್ಯವಾಗಿದೆ.

ಇನ್ನು ರಾಚೋಟೇಶ್ವರ ಶ್ರೀಗಳು ಇದಕ್ಕೂ ಮೊದಲು 10 ಬಾರಿ ಈ ರೀತಿ ಸಮಾಧಿಯೋಗವನ್ನ ಯಶಸ್ವಿಯಾಗಿ ಮಾಡಿದ್ದಾರೆ. ಜಿಲ್ಲೆ ಸೇರಿದಂತೆ ನಾನಾ ಕಡೆ ಲೋಕ ಕಲ್ಯಾಣಕ್ಕಾಗಿ ಶ್ರೀಗಳು ಸಮಾಧಿಯೋಗವನ್ನ ಮಾಡಿದ್ದಾರೆ. ಇನ್ನು ಅನುಷ್ಠಾನಕೈಗೊಂಡಿದ್ದ ಶ್ರೀಗಳು ಡಾಕ್ಟರೇಟ್ ಪದವಿ ಪಡೆದಿದ್ದು ಮೈಸೂರು ವಿವಿಯಲ್ಲಿ ಪ್ರಾದ್ಯಾಪಕರಾಗಿ ಸೇವೆಯನ್ನ ಸಲ್ಲಿಸಿದ್ದಾರೆ. ಆಧ್ಯಾತ್ಮದ ಕಡೆ ಹೆಚ್ಚು ಒಲವು ಇರುವ ಕಾರಣಕ್ಕೆ ಇತ್ತ ಮುಖ ಮಾಡಿದ್ದಾರೆ. ಸಮಾಧಿಯೋಗದ ಕೊನೇ ದಿನವಾದ ನಿನ್ನೆ ಅದ್ಧೂರಿ ಮೆರವಣಿಗೆ ಮೂಲಕ ರಂಭಾಪುರಿ ಶ್ರೀಗಳನ್ನ ಬರಮಾಡಿಕೊಳ್ಳಲಾಯ್ತು. ಬಳಿಕ ಅನುಷ್ಠಾನಕೈಗೊಂಡಿದ್ದ ಶ್ರೀಗಳಿಗೆ ಅಭಿಷೇಕ ಮಾಡಿ ವ್ರತವನ್ನ ಅಂತ್ಯಗೊಳಿಸಲಾಯ್ತು.

ಒಟ್ನಲ್ಲಿ ಕೊರೊನಾ ಓಡಿಸಲು ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ರೆ, ಇತ್ತ ಕಾವಿಧಾರಿಗಳು ಕೂಡಾ ಕಠಿಣ ಅನುಷ್ಠಾನದ ಮೂಲದ ಕೊರೊನಾ ವಿರುದ್ಧ ಹೋರಾಟ ಮಾಡಿದ್ದಾರೆ.

ವರದಿ: ಅಮೀನ್ ಹೊಸುರ್, ಟಿವಿ9 ಯಾದಗಿರಿ

ಇದನ್ನೂ ಓದಿ: Meta: ಫೇಸ್​ಬುಕ್ ಕಂಪನಿಯ ಹೊಸ ಹೆಸರು ಘೋಷಣೆ ಮಾಡಿದ ಮಾರ್ಕ್ ಜುಕರ್‌ಬರ್ಗ್