ಕೊರೊನಾದಿಂದ ಯಾದಗಿರಿ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಾಗಿದೆ.. ಅಗನಗತ್ಯವಾಗಿ ಓಡಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸುವ ಕೆಲಸವನ್ನ ಪೊಲೀಸರು ಮಾಡ್ತಾಯಿದ್ದಾರೆ.. ಆದ್ರೆ ಪೊಲೀಸರು ಲಾಕ್ ಡೌನ್ ನಲ್ಲಿ ಎಷ್ಟರ ಮಟ್ಟಿಗೆ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತ್ಯ ಸರ್ಪ್ರೈಸ್ ಭೇಟಿ ನೀಡಿ ಅಧಿಕಾರಿಗಳಿಗೆ ಶಾಕ್ ನೀಡ್ತಾಯಿದ್ದಾರೆ.. ಮಾರುವೇಷದಲ್ಲಿ ಸಿಟಿ ರೌಂಡ್ಸ್ ಹಾಕಿ ಸಾರ್ವಜನಿಕರ ಮೆಚ್ಚುಗೆ ಪಾತ್ರರಾಗಿದ್ದಾರೆ..
ಸರ್ಕಾರಿ ವಾಹನ, ಗನ್ ಮ್ಯಾನ್ ಬಿಟ್ಟು ನಿತ್ಯ ಸೈಕಲ್ ಸವಾರಿ ಮಾಡುತ್ತಾ ಕೆಳ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಶಾಕ್ ಕೊಡುತ್ತಿರುವ ಜಿಲ್ಲೆಯ ನಂಬರ್ 1 ಪೊಲೀಸ್ ಅಧಿಕಾರಿ. ಮಾರುವೇಷದಲ್ಲಿ ಚೆಕಿಂಗ್ ಬರುತ್ತಿರುವ ಆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು (ಎಸ್ಪಿ) ಕಂಡು ತಬ್ಬಿಬ್ಬಾದ ಅಧಿಕಾರಿಗಳು ಹಾಗೂ ಸಿಬ್ಬಂದಿ.. ಹೌದು ಸರ್ಕಾರಿ ವಾಹನ ಹಾಗೂ ಗನ್ ಮ್ಯಾನ್ ಬಿಟ್ಟು ಯಾದಗಿರಿ ಎಸ್ಪಿ ವೇದಮೂರ್ತಿ ಅವರು ಸೈಕಲ್ ಸವಾರಿ ಆರಂಭಿಸಿದ್ದಾರೆ.
ಜನಸಾಮಾನ್ಯರಂತೆ ಬಟ್ಟೆ ಧರಿಸಿಕೊಂಡು ಸರ್ಪ್ರೈಸ್ ವಿಸಿಟ್ ಕೊಡ್ತಾಯಿದ್ದಾರೆ ಎಸ್ಪಿ ವೇದಮೂರ್ತಿ
ಹೌದು, ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಕಂಟ್ರೋಲ್ ಮಾಡುವುದ್ದಕ್ಕಾಗಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಲಾಕ್ ಡೌನ್ ಅವಧಿಯಲ್ಲಿ ಜನ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡುವವರಿಗೆ ಬ್ರೇಕ್ ಹಾಕಲು ಪೊಲೀಸರು ನಗರದ ನಾನಾ ಕಡೆ ಬ್ಯಾರಿಕೇಡ್ ಹಾಕಿ ತಾತ್ಕಾಲಿಕ ಚೆಕ್ ಪೋಸ್ಟ್ ಗಳನ್ನ ಮಾಡಿದ್ದಾರೆ.. ಚೆಕ್ ಪೋಸ್ಟ್ ಗಳ ಬಳಿ ಪೊಲೀಸರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನ ನಿಯೋಜನೆ ಮಾಡಿ ಅನವಶ್ಯಕವಾಗಿ ಓಡಾಡುವವರನ್ನು ತಡೆಯುವ ಕೆಲಸ ಮಾಡಲಾಗುತ್ತಿದೆ.. ಚೆಕ್ ಪೋಸ್ಟ್ ಗಳಲ್ಲಿ ತಮ್ಮ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಯಾವ ರೀತಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನುವ ಬಗ್ಗೆ ಪರಿಶೀಲನೆ ಮಾಡಲು ಎಸ್ ಪಿ ವೇದಮೂರ್ತಿ ಅವರು ಸರ್ಪ್ರೈಸ್ ವಿಸಿಟ್ ಕೊಟ್ಟು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಶಾಕ್ ನೀಡುತ್ತಿದ್ದಾರೆ.
ಸಾಮಾನ್ಯವಾಗಿ ಎಸ್ಪಿ ಬರ್ತಾಯಿದ್ದಾರೆ ಅಂದ್ರೆ ದೂರದಿಂದ್ಲೇ ವಾಹನ ನೋಡಿ ಗೊತ್ತಾಗುತ್ತೆ ಅಷ್ಟೊತ್ತಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಲರ್ಟ್ ಆಗ್ತಾರೆ. ಇದೇ ಕಾರಣಕ್ಕೆ ಎಸ್ಪಿ ವೇದಮೂರ್ತಿ ಅವರು ನಿತ್ಯ ಬೆಳಗ್ಗೆ ಎದ್ದು ನೈಟ್ ಡ್ರೆಸ್ ಮೇಲೆ ಸೈಕಲ್ ಹತ್ತಿ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಸಿಟಿಯಲ್ಲಿ ಓಡಾಡುತ್ತಿದ್ದಾರೆ. ಎಸ್ಪಿ ಅವರು ಯಾವಾಗ, ಯಾವ ವೇಷದಲ್ಲಿ ಬರ್ತಾರೆ ಎನ್ನೋದೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಗೊತ್ತಾಗದಂತಾಗಿದೆ.. ಎಸ್ ಪಿ ಅವರ ಮಾರುವೇಷದ ವಿಸಿಟ್ ಕಂಡು ಸಾರ್ವಜನಿಕರು ಸಹ ಶಾಕ್ ಆಗಿದ್ದಾರೆ. ಎಸ್ಪಿ ಅವರ ಈ ಕಾರ್ಯ ಕಂಡು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಐಪಿಎಸ್ ಅಧಿಕಾರಿಗಳು ಅಂದ್ರೆ ಸಾಕು ಸಾಮಾನ್ಯವಾಗಿ ಬೆಳಗ್ಗೆ 10 ಗಂಟೆ ನಂತರ ಡ್ಯೂಟಿಗೆ ಹಾಜರಾಗುತ್ತಾರೆ. ಕೆಲವರಂತೂ ಆಚೀಚೆ ಹೋಗದೆಯೇ ಬಹುತೇಕ ಸಮಯ ಕಚೇರಿಯಲ್ಲಿಯೇ ಕುಳಿತು ಕರ್ತವ್ಯ ನಿರ್ವಹಿಸುತ್ತಾರೆ. ಆದ್ರೆ ಯಾದಗಿರಿ ಎಸ್ಪಿ ವೇದಮೂರ್ತಿ ಅವರು ಸ್ವಲ್ಪ ಡಿಫರೆಂಟ್ ಆಗಿ ಕೆಲಸ ಮಾಡಲು ಪ್ಲಾನ್ ಮಾಡಿದ್ದಾರೆ. ಬೆಳಗ್ಗೆ ಎದ್ದು ಸೈಕಲ್ ಹತ್ತಿ ಬಂದ್ರೆ ಸಾಕು ಇಡೀ ನಗರವನ್ನೇ ಸುತ್ತಾಡಿ ಬರ್ತಾಯಿದ್ದಾರೆ. ಸುಮಾರು 10 ರಿಂದ 15 ಕಿ.ಮೀ ನಷ್ಟು ಸೈಕಲ್ ಸವಾರಿ ಮಾಡಿ ತಮ್ಮ ಇಲಾಖೆ ಅಧಿಕಾರಿಗಳ ಕೆಲಸವನ್ನ ಕ್ರಾಸ್ ಚೆಕ್ಕಿಂಗ್ ಮಾಡ್ತಾಯಿದ್ದಾರೆ.
ಕೆಲವೊಂದು ಪಾಯಿಂಟ್ ಗಳನ್ನ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೋಮ್ ಗಾರ್ಡ್ ಗಳ ಕೈಯಲ್ಲಿ ಡ್ಯೂಟಿ ಮಾಡಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಹಾಗಾಘಿ ಎಸ್ಪಿ ಅವರು ಪ್ರತಿಯೊಂದು ಪಾಯಿಂಟ್ಗೂ ಸ್ವತ: ತಾವೇ ಹೋಗಿ ಅಧಿಕಾರಿ ಹಾಗೂ ಸಿಬ್ಬಂದಿ ಬಿಸಿ ಮುಟ್ಟಿಸುವಂತಹ ಕೆಲಸ ಮಾಡ್ತಾಯಿದ್ದಾರೆ. ಇನ್ನು ಸೈಕಲ್ ಮೇಲೆಯೇ ಬಂದು ಸಾರ್ವಜನಿಕರು ಸಹ ಲಾಕ್ ಡೌನ್ ನಿಯಮಗಳನ್ನ ಪಾಲನೆ ಮಾಡ್ತಾಯಿದ್ದಾರೋ, ಇಲ್ಲವೋ ಅಂತಾ ಚೆಕ್ ಮಾಡ್ತಾಯಿದ್ದಾರೆ.
ಹಾಗೆಯೇ, ಅನವಶ್ಯಕವಾಗಿ ಓಡಾಡುವವರಿಗೆ ಅವರೇ ಖುದ್ದು ವಾರ್ನ್ ಮಾಡಿ ವಾಹನಗಳು ಸೀಜ್ ಮಾಡಿಸ್ತಾಯಿದ್ದಾರೆ.. ಕೇವಲ ತಾತ್ಕಾಲಿಕ ಚೆಕ್ ಪೋಸ್ಟ್ ಗಳಿಗೆ ಮಾತ್ರ ವಿಸಿಟ್ ಕೊಡದೆ ನಗರದಲ್ಲಿರುವ ಎಲ್ಲಾ ಪೊಲೀಸ್ ಠಾಣೆಗಳಿಗೂ ಸರ್ಪ್ರೈಸ್ ವಿಸಿಟ್ ಕೊಟ್ಟು ಎಲ್ಲರಿಗೂ ಬಿಸಿ ಮುಟ್ಟಿಸಿದ್ದಾರೆ.. ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಯಾವ ರೀತಿ ಸ್ಪಂದಿಸುತ್ತಿದ್ದಾರೆ ಎನ್ನುವ ಬಗ್ಗೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ..
ಎಸ್ ಪಿ ಅವರು ಸೈಕಲ್ ಮೇಲೆ ಠಾಣೆಗಳಿಗೆ ಹೋದ ಸಂದರ್ಭದಲ್ಲಿ ಯಾರೋ ಬಂದಿರಬೇಕು ಅಂತ ಮೈಮರೆತು ಕುಳಿತುಕೊಂಡ ಸಿಬ್ಬಂದಿಗಳಿಗೆ ಎಸ್ ಪಿ ಅವರು ಮುಖಕ್ಕೆ ಹಾಕಿದ ಮಾಸ್ಕ್ ತೆಗೆದ ತಕ್ಷಣ ಠಾಣೆಯಲ್ಲಿ ಇರುವ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.. ಇನ್ನು ಕಳೆದ 15 ದಿನಗಳಿಂದ ಸೈಕಲ್ ಮೇಲೆ ಸವಾರಿ ಮಾಡಿ ಅಧಿಕಾರಿಗಳ ಕೆಲಸವನ್ನ ಪರಿಶೀಲನೆ ಮಾಡ್ತಾಯಿದ್ದೇನೆ.. ಇದರಿಂದ ನನ್ನ ಆರೋಗ್ಯಕ್ಕೂ ಉತ್ತಮ ಜೊತೆಗೆ ಮಾರುವೇಷದಲ್ಲಿ ಹೋಗುವುದರಿಂದ ಅಧಿಕಾರಿಗಳು ಸಿಬ್ಬಂದಿಗಳ ಕೆಲವನ್ನು ಸಹ ನೋಡಬಹುದಾಗಿದೆ ಅಂತಾರೆ ಡಾ. ವೇದಮೂರ್ತಿ, ಯಾದಗಿರಿ ಎಸ್ ಪಿ.
ಒಟ್ನಲ್ಲಿ ಎಸ್ ಪಿ ಅವರ ಸರ್ಪ್ರೈಸ್ ವಿಸಿಟ್ ನಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಚುರುಕಿನಿಂದ ಕೆಲಸ ಮಾಡುವಂತಾಗಿದೆ.. ತಮ್ಮ ಇಲಾಖೆ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕರ್ತವ್ಯವನ್ನ ಪರಿಶೀಲನೆ ಮಾಡಲು ಎಸ್ ಪಿ ಅವರು ಮಾಡಿರುವ ಪ್ಲಾನ್ ಮಾದರಿಯಾಗಿದೆ.
-ಅಮೀನ್ ಹೊಸುರ್
ಜನಸಾಮಾನ್ಯರಂತೆ ಬಟ್ಟೆ ಧರಿಸಿಕೊಂಡು ಸರ್ಪ್ರೈಸ್ ವಿಸಿಟ್ ಕೊಡ್ತಾಯಿದ್ದಾರೆ ಎಸ್ಪಿ ವೇದಮೂರ್ತಿ
(yadgir police superintendent dr veda murthy on city rounds in bicycle)
ಯಾದಗಿರಿ ಸರ್ಕಾರಿ ಕಚೇರಿಯಲ್ಲಿ ಕವಿದ ಕತ್ತಲು; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿದ ಸಾರ್ವಜನಿಕರು