ಯಾದಗಿರಿ ರೈತರಲ್ಲಿ ಹೆಚ್ಚಿದ ಆತಂಕ; ಗೋಡೌನ್​ನಲ್ಲಿ ಇಟ್ಟ ಸಾವಿರಾರು ಕ್ವಿಂಟಲ್ ಬ್ಯಾಡಗಿ ಮೆಣಸಿನಕಾಯಿ ಹಾಳು

ಉಷಾ ಕೋಲ್ಡ್ ಸ್ಟೋರೇಜ್ ಗೋಡೌನ್​ನಲ್ಲಿ ಸಾವಿರಾರು ಲಕ್ಷಕ್ಕೂ ಅಧಿಕ ಕ್ವೀಂಟಲ್ ಮೆಣಸಿನಕಾಯಿಯನ್ನು ಸ್ಟೋರ್ ಮಾಡಬಹುದಾಗಿದೆ. ಒಂದು ಕ್ವೀಂಟಲ್​ಗೆ ವರ್ಷಕ್ಕೆ ಕೋಲ್ಡ್ ಸ್ಟೋರೇಜ್​ನಲ್ಲಿ ಮೆಣಸಿನಕಾಯಿ ಶೇಖರಿಸುವುದಕ್ಕೆ ರೈತರಿಂದ ಬರೋಬ್ಬರಿ ಎರಡು ಸಾವಿರ ರೂಪಾರಿ ಪಡೆಯಲಾಗುತ್ತದೆ.

ಯಾದಗಿರಿ ರೈತರಲ್ಲಿ ಹೆಚ್ಚಿದ ಆತಂಕ; ಗೋಡೌನ್​ನಲ್ಲಿ ಇಟ್ಟ ಸಾವಿರಾರು ಕ್ವಿಂಟಲ್ ಬ್ಯಾಡಗಿ ಮೆಣಸಿನಕಾಯಿ ಹಾಳು
ಗೋಡೌನ್​ನಲ್ಲಿ ಇಟ್ಟ ಸಾವಿರಾರು ಕ್ವಿಂಟಲ್ ಬ್ಯಾಡಗಿ ಮೆಣಸಿನಕಾಯಿ ಹಾಳು
Follow us
TV9 Web
| Updated By: preethi shettigar

Updated on: Jun 27, 2021 | 1:19 PM

ಯಾದಗಿರಿ: ಕೊರೊನಾ ಎರಡನೇ ಅಲೆಯಿಂದಾಗಿ ಇಡೀ ದೇಶವೇ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಅದರಲ್ಲೂ ರೈತರು ಈ ಬಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಕಂಗಾಲಾಗಿದ್ದಾರೆ. ಸದ್ಯ ಯಾದಗಿರಿ ಭಾಗದ ರೈತರು ಕೂಡ ಇಂತಹದ್ದೇ ಒಂದು ಸಮಸ್ಯೆಗೆ ಗುರಿಯಾಗಿದ್ದಾರೆ. ಜಿಲ್ಲೆಯ ರೈತರು ಮೆಣಸಿನಕಾಯಿಯನ್ನು ಹೇರಳವಾಗಿ ಬೆಳೆದಿದ್ದಾರೆ. ಮೆಣಸಿನಕಾಯಿ ರಾಶಿಯಾದ ಕೂಡಲೆ ಸರಿಯಾದ ಬೆಲೆ ಸಿಕ್ಕಿಲ್ಲ. ಹೀಗಾಗಿ ಬೆಲೆ ಬಂದ ಮೇಲೆ ಮಾರಾಟ ಮಾಡಬೇಕು ಎಂದು ಜಿಲ್ಲೆಯ ಕೋಲ್ಡ್ ಸ್ಟೋರೇಜ್ ಗೋಡೌನ್​ನಲ್ಲಿ ಮೆಣಸಿನಕಾಯಿ ಶೇಖರಿಸಿಟ್ಟಿದ್ದರು. ಆದರೆ ಕಾದು ಕುಳಿತಿದ್ದ ರೈತರಿಗೆ ಸಂಕಷ್ಟ ಎದುರಾಗಿದೆ. ರೈತರು ಶೇಖರಿಸಿಟ್ಟಿದ್ದ ಸಾವಿರಾರು ಚೀಲ ಮೆಣಸಿನಕಾಯಿ ಸಂಪೂರ್ಣ ಹಾಳಾಗಿ ಹೋಗಿದೆ. ಇದೆ ಕಾರಣದಿಂದ ಜಿಲ್ಲೆಯಲ್ಲಿ ರೈತರು ಮತ್ತು ಕೋಲ್ಡ್ ಸ್ಟೋರೇಜ್ ಮಾಲೀಕರ ಮಧ್ಯ ಜಟಾಪಟಿ ನಡೆದಿದೆ.

ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯ ಸಾವಿರಾರು ರೈತರು ಈ ಬಾರಿ ಬ್ಯಾಡಗಿ ತಳಿಯ ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದಾರೆ. ಅದರಂತೆ ಫಸಲು ಕೂಡ ಚೆನ್ನಾಗಿ ಬಂದಿದೆ. ಎಕರೆಗೆ ಸುಮಾರು 30 ರಿಂದ 40 ಸಾವಿರ ರೂಪಾಯಿ ಖರ್ಚು ಮಾಡಿದ್ದು, ಎಕರೆಗೆ 10 ಕ್ವೀಂಟಲ್ ನಷ್ಟು ಮೆಣಸಿನಕಾಯಿನ್ನು ಬೆಳೆದಿದ್ದಾರೆ. ಆದರೆ ಮೆಣಸಿನಕಾಯಿ ರಾಶಿಯಾದ ಬಳಿಕ ಸರಿಯಾದ ರೇಟ್ ಸಿಗದೆ ರೈತರು ಕಂಗಲಾಗಿದ್ದು, ಪ್ರತಿ ಕ್ವಿಂಟಲ್​ಗೆ 25 ರಿಂದ 30 ಸಾವಿರ ರೂಪಾಯಿ ಮಾರಾಟವಾಗಬೇಕಿದ್ದ ಮೆಣಸಿನಕಾಯಿಗೆ ಸರಿಯಾದ ಬೆಲೆ ಸಿಗಲ್ಲಿಲ್ಲ ಎಂದು ಶೇಖರಿಸಿಡಲು ನಿರ್ಧರಿಸಿದ್ದಾರೆ.

ರೈತರು ಜಿಲ್ಲೆಯಲ್ಲಿರುವ ಏಕೈಕ ಕೋಲ್ಡ್ ಸ್ಟೋರೇಜ್ ಗೋಡೌನ್ ಆಗಿರುವ ಕಲಬುರಗಿ ಮೂಲದ ಉಷಾ ಕೋಲ್ಡ್ ಸ್ಟೋರೇಜ್​ನಲ್ಲಿ ಮೆಣಸಿನಕಾಯಿ ಇಟ್ಟಿದ್ದಾರೆ. ಜಿಲ್ಲೆಯ ನೂರಾರು ರೈತರು ಸಾವಿರಾರು ಕ್ವಿಂಟಲ್ ನಷ್ಟು ಒಣ ಮೆಣಸಿನಕಾಯಿಯನ್ನು ಕೋಲ್ಡ್ ಸ್ಟೋರೇಜ್​ನಲ್ಲಿಟ್ಟರೆ ಹಾಳಾಗಲ್ಲ ಎನ್ನುವ ಕಾರಣಕ್ಕೆ ಇಲ್ಲಿ ಇಟ್ಟಿದ್ದರು. ಆದರೆ ಅದು ಹಾಳಾಗಿದೆ. ಹೀಗಾಗಿ ಮೆಣಸಿನಕಾಯಿ ಹಾಳಾಗುವುದಕ್ಕೆ ಗೋಡೌನ್ ಮಾಲೀಕ ಬೆಜಾವಾಬ್ದಾರಿತನವೇ ಕಾರಣ ಎಂದು ಮೆಣಸಿನಕಾಯಿ ಬೆಳೆದ ರೈತ ಸಿದ್ದಣ್ಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಉಷಾ ಕೋಲ್ಡ್ ಸ್ಟೋರೇಜ್ ಗೋಡೌನ್​ನಲ್ಲಿ ಸಾವಿರಾರು ಲಕ್ಷಕ್ಕೂ ಅಧಿಕ ಕ್ವಿಂಟಲ್ ಮೆಣಸಿನಕಾಯಿಯನ್ನು ಸ್ಟೋರ್ ಮಾಡಬಹುದಾಗಿದೆ. ಒಂದು ಕ್ವಿಂಟಲ್​ಗೆ ವರ್ಷಕ್ಕೆ ಕೋಲ್ಡ್ ಸ್ಟೋರೇಜ್​ನಲ್ಲಿ ಮೆಣಸಿನಕಾಯಿ ಶೇಖರಿಸುವುದಕ್ಕೆ ರೈತರಿಂದ ಬರೋಬ್ಬರಿ ಎರಡು ಸಾವಿರ ರೂಪಾರಿ ಪಡೆಯಲಾಗುತ್ತದೆ. ಮನೆಯಲ್ಲಿ ಮತ್ತು ಮಾಮೂಲಿ ಗೋಡೌನ್​ನಲ್ಲಿ ಮೆಣಸಿನಕಾಯಿ ಸ್ಟೋರ್ ಮಾಡಿದರೆ ಕೆಲವೇ ದಿನಗಳಲ್ಲಿ ಸಂಪೂರ್ಣ ಹಾಳಾಗಿ ಹೋಗುತ್ತದೆ. ಹೀಗಾಗಿ ಒಣ ಮೆಣಸಿನಕಾಯಿ ಕೆಡಬಾರದು ಅಂದರೆ ಸದಾ ಕೋಲ್ಡ್ ಇರುವ ಸ್ಥಳದಲ್ಲಿ ಸ್ಟೋರ್ ಮಾಡಬೇಕು. ಇದೆ ಕಾರಣದಿಂದ ನೂರಾರು ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಈ ಕೋಲ್ಡ್ ಸ್ಟೋರೇಜ್ ಗೋಡೌನ್​ನಲ್ಲಿ ಸ್ಟಾಕ್ ಮಾಡಿದ್ದಾರೆ.

ಆದರೆ ರೈತರು ಇಟ್ಟ ಮೆಣಸಿನಕಾಯಿಗೆ ಕೋಲ್ಡ್ ಕಮ್ಮಿಯಾಗಿದ್ದಕ್ಕೆ ಗೋಡೌನ್​ನಲ್ಲಿ ಇಟ್ಟ ಕೆಲವೇ ದಿನಗಳಲ್ಲಿ ಸಾವಿರಾರು ಕ್ವಿಂಟಲ್ ಹಾಳಾಗಿ ಹೋಗಿದೆ. ಇದರಲ್ಲೂ ಆಂಧ್ರ ಮೂಲದ ರೈತರೊಬ್ಬರು ಇಟ್ಟ ಬರೋಬ್ಬರಿ 2 ಸಾವಿರ ಮೆಣಸಿನಕಾಯಿ ಚೀಲಗಳು ಯಾರು ಖರೀದಿ ಮಾಡದ ಸ್ಥಿತಿಗೆ ಬಂದಿದೆ. ಸಂಪೂರ್ಣವಾಗಿ ಬೂದು ಬಂದಿದ್ದು, ಕೆಂಪು ಬಣ್ಣದ ಮೆಣಸಿನಕಾಯಿ ಈಗ ಕಪ್ಪು ಬಣ್ಣ ಪಡೆದುಕೊಂಡಿದೆ. ಈ ಒಬ್ಬ ರೈತ ಅಷ್ಟೇ ಅಲ್ಲದೆ ಇನ್ನು ನೂರಾರು ರೈತರ ಸಾವಿರಾರು ಕ್ವಿಂಟಲ್ ಮೆಣಸಿನಕಾಯಿ ಬೆಳೆ ಕೋಲ್ಡ್ ಕಡಿಮೆಯಾಗಿದ್ದಕ್ಕೆ ಸಂಪೂರ್ಣ ಹಾಳಾಗಿ ಹೋಗಿದೆ.

ಖರೀದಿ ಮಾಡಲು ಬಂದ ವ್ಯಾಪರಸ್ಥರು ಮೆಣಸಿನಕಾಯಿ ಸ್ಥಿತಿ ನೋಡಿ ವಾಪಸ್ ಹೋಗಿದ್ದಾರೆ. ಇನ್ನು ಕೋಲ್ಡ್ ಸ್ಟೋರೇಜ್ ಗೋಡೌನ್​ನಲ್ಲಿ ದಿನದ 24 ಗಂಟೆ ಎಸಿ ಆನ್ ಆಗಿರಬೇಕು ಯಾವುದೆ ಕಾರಣಕ್ಕೂ ಸ್ವಲ್ಪ ಹೊತ್ತು ಸಹ ಬಂದ್ ಆಗಬಾರದು ಆದರೆ ಗೋಡೌನ್ ಒಳಗೆ ಹೋಗಿ ನೋಡಿದರೆ ಎಸಿಯಿಂದ ನೀರು ಹೊರ ಬಿದ್ದು ಮೆಣಸಿನಕಾಯಿ ಬೆಳೆ ಹಾಳಾಗಿದ್ದು, ಕಂಡು ಬರುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ಇನ್ನು ಈ ಬಗ್ಗೆ ಗೋಡೌನ್​ನ ಮ್ಯಾನೇಜರ್​ ರಫೀಕ್ಅವರನ್ನು ಕೇಳಿದರೆ ರೈತರು ಸ್ಟಾಕ್ ಮಾಡುವಾಗ ಮೆಣಸಿಕಾಯಿಗೆ ನೀರು ಹೊಡೆದುಕೊಂಡು ಬಂದಿದ್ದಾರೆ. ಇದೆ ಕಾರಣದಿಂದ ಹೀಗೆ ಆಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ಬಳ್ಳಾರಿಯಲ್ಲಿ ಮೆಣಸಿನಕಾಯಿ ಬೀಜಕ್ಕಾಗಿ ಮುಂದುವರಿದ ರೈತರ ಪರದಾಟ; ತೋಟಗಾರಿಕೆ ಇಲಾಖೆ ಕಚೇರಿಗೆ ನುಗ್ಗಿ ಆಕ್ರೋಶ

ಲಾಕ್​ಡೌನ್​ ಎಫೆಕ್ಟ್: ಐದು ಎಕರೆ ಹಸಿ ಮೆಣಸಿನಕಾಯಿ ಬೆಳೆಯನ್ನು ಹಾಳು ಮಾಡಿದ ಹಾವೇರಿ ರೈತ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ