ಮೈಸೂರು: ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು(88) ಇಹಲೋಕ ತ್ಯಜಿಸಿದ್ದಾರೆ. ಜಯಚಾಮರಾಜೇಂದ್ರ ಒಡೆಯರ್ ಜೊತೆಗಿನ ಶ್ರೀಗಳ ಅಪರೂಪದ ಫೋಟೋ ಹಂಚಿಕೊಂಡು ಯದುವೀರ್ ಸಂತಾಪ ಸೂಚಿಸಿದ್ದಾರೆ.
ಮಹಾನ್ ಸಂತರೂ ಸಿದ್ಧಪುರುಷರೂ ಆದ ಶ್ರೀಕ್ಷೇತ್ರ ಉಡುಪಿ ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ದೈವಾಧೀನರಾಗಿದ್ದು ನಮಗೆ ಬಹಳ ದುಃಖವಾಗಿದೆ. ಪರಮಪೂಜ್ಯ ಶ್ರೀಪಾದಂಗಳವರು ತಮ್ಮ ಬಾಲ್ಯದಲ್ಲೇ ವಯ್ಯಕ್ತಿಕ ಜೀವನವನ್ನು ತ್ಯಾಗ ಮಾಡಿ ಸುಮಾರು 80 ವರ್ಷ ತಮ್ಮನ್ನು ನಿರಂತರವಾಗಿ ಶ್ರೀಕೃಷ್ಣನ ಸೇವೆಗಾಗಿ ಹಾಗು ಸಮಾಜದ ಸುಧಾರಣೆಗಾಗಿ ಮುಡಿಪಾಗಿಸಿಟ್ಟಿದ್ದರು.
ನಮ್ಮ ಪೂರ್ವಜರಾದ ಮಹಾರಾಜ ಶ್ರೀ ಜಯಚಾಮರಾಜ ಒಡೆಯರವರು ಆಗಾಗ್ಗೆ ಶ್ರೀಮಠಕ್ಕೆ ಭೇಟಿ ನೀಡಿ ಪರಮಪೂಜ್ಯರ ದರ್ಶನವನ್ನು ಪಡೆಯುತ್ತಿದ್ದರು. ನಾಡಿನ ಜನತೆಗೆ ಶ್ರೀಗಳವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಯದುವೀರ್ ಒಡೆಯರ್ ಸಂತಾಪ ಸೂಚಿಸಿದ್ದಾರೆ.
Published On - 11:54 am, Sun, 29 December 19