ಕೆಂಪೇಗೌಡ ಏರ್ಪೋರ್ಟ್ನಲ್ಲಿ ಆತಂಕ ಸೃಷ್ಟಿಸಿದ ಅನುಮಾನಾಸ್ಪದ ಬ್ಯಾಗ್!
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾರಸುದಾರರಿಲ್ಲದ ಅನುಮಾನಾಸ್ಫದ ಬ್ಯಾಗ್ ಪತ್ತೆಯಾಗಿ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ನಡೆಯಿತು. ಏರ್ಪೋರ್ಟ್ನ ಅರೈವಲ್ ಗೇಟ್ ಬಳಿ ಲಗೇಜ್ ಸಾಗಿಸುವ ಟ್ರಾಲಿ ಮೇಲೆ ಬ್ಯಾಗ್ ಪತ್ತೆಯಾಗಿತ್ತು. ಇದನ್ನ ಗಮನಿಸಿದ ಭದ್ರತಾ ಸಿಬ್ಬಂದಿ, ಬ್ಯಾಗ್ ಟ್ರಾಲಿ ಮೇಲೆ ಸಾಕಷ್ಟು ಸಮಯ ಕಾದ್ರೂ ಬ್ಯಾಗ್ ತೆಗೆದುಕೊಳ್ಳಲು ಯಾರೂ ಬರಲಿಲ್ಲ. ಹೀಗಾಗಿ ಏಕಾಂಕಿಯಾಗಿದ್ದ ಬ್ಯಾಗ್ ಕಂಡ ಭದ್ರತಾ ಸಿಬ್ಬಂದಿ ಅನುಮಾನ ಪಡುವಂತಾಯಿತು. ತದನಂತರ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಯಂತ್ರದ ಮೂಲಕ ಬ್ಯಾಗ್ […]
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾರಸುದಾರರಿಲ್ಲದ ಅನುಮಾನಾಸ್ಫದ ಬ್ಯಾಗ್ ಪತ್ತೆಯಾಗಿ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ನಡೆಯಿತು. ಏರ್ಪೋರ್ಟ್ನ ಅರೈವಲ್ ಗೇಟ್ ಬಳಿ ಲಗೇಜ್ ಸಾಗಿಸುವ ಟ್ರಾಲಿ ಮೇಲೆ ಬ್ಯಾಗ್ ಪತ್ತೆಯಾಗಿತ್ತು. ಇದನ್ನ ಗಮನಿಸಿದ ಭದ್ರತಾ ಸಿಬ್ಬಂದಿ, ಬ್ಯಾಗ್ ಟ್ರಾಲಿ ಮೇಲೆ ಸಾಕಷ್ಟು ಸಮಯ ಕಾದ್ರೂ ಬ್ಯಾಗ್ ತೆಗೆದುಕೊಳ್ಳಲು ಯಾರೂ ಬರಲಿಲ್ಲ. ಹೀಗಾಗಿ ಏಕಾಂಕಿಯಾಗಿದ್ದ ಬ್ಯಾಗ್ ಕಂಡ ಭದ್ರತಾ ಸಿಬ್ಬಂದಿ ಅನುಮಾನ ಪಡುವಂತಾಯಿತು.
ತದನಂತರ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಯಂತ್ರದ ಮೂಲಕ ಬ್ಯಾಗ್ ಅನ್ನು ಪರಿಶೀಲನೆ ನಡೆಸಿದರು. ಕೊನೆಗೆ ಯಾವುದೇ ಅನುಮಾನಾಸ್ಫದ ರೀತಿಯ ಸ್ಫೋಟಕ ವಸ್ತುಗಳಿಲ್ಲ ಅಂತ ಅರಿವಿಗೆ ಬಂದ ನಂತರ ಟ್ರಾಲಿ ಸಮೇತ ಬ್ಯಾಗನ್ನ ಭದ್ರತಾ ಸಿಬ್ಬಂದಿ ಕೊಂಡೊಯ್ದರು. ಕೆಲ ಪ್ರಯಾಣಿಕರು ಆತುರದಲ್ಲಿ ಬ್ಯಾಗ್ ಬಿಟ್ಟು ಹೋಗುವ ಘಟನೆಗಳು ಆಗಾಗ್ಗೆ ಸಂಭವಿಸುತ್ತಿರುತ್ತವೆ. ಆದ್ರೆ ಅದನ್ನ ನಿರ್ಲಕ್ಷ್ಯ ವಹಿಸುವಂತಿಲ್ಲ. ಹೀಗಾಗಿ ಭದ್ರತೆಯ ಹಿತದೃಷ್ಟಿಯಿಂದ ಪರಿಶೀಲನೆ ನಡೆಸಲಾಗುತ್ತದೆ.
Published On - 8:31 pm, Sun, 29 December 19