ಯಡಿಯೂರಪ್ಪಗೆ ತಮ್ಮ ಮಕ್ಕಳು ಉದ್ಧಾರವಾಗೋದಷ್ಟೇ ಮುಖ್ಯ, ಪಕ್ಷದ ಸಂಘಟನೆ ಬೇಕಿಲ್ಲ: ಕೆಎಸ್ ಈಶ್ವರಪ್ಪ

ಯಡಿಯೂರಪ್ಪಗೆ ತಮ್ಮ ಮಕ್ಕಳು ಉದ್ಧಾರವಾಗೋದಷ್ಟೇ ಮುಖ್ಯ, ಪಕ್ಷದ ಸಂಘಟನೆ ಬೇಕಿಲ್ಲ: ಕೆಎಸ್ ಈಶ್ವರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 16, 2024 | 12:10 PM

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಪಕ್ಷದ ಬಲವರ್ಧನೆಗಾಗಿ ಶ್ರೀಧರ ಸ್ವಾಮಿ ಮತ್ತು ದತ್ತಾತ್ರೇಯ ಸ್ವಾಮುಯವರ ಸನ್ನಿಧಿಗೆ ಹೋಗುತ್ತಿರುವಾಗಿ ಅವರು ಹೇಳಿದರು. ರಾಜ್ಯಾದಾದ್ಯಂತ ಇರುವ ತಮ್ಮ ಬೆಂಬಲಿಗರು ತಮ್ಮನ್ನು ಪಕ್ಷೇತ್ರರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಒತ್ತಾಯಿಸುತ್ತಿದ್ದಾರೆ, ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿದರೆ ತಾನು ಖಂಡಿತ ಗೆಲ್ಲುವುದಾಗಿ ಅವರು ಹೇಳಿದರು.

ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿ ಸಂಘಟನೆ ಹಾಳಾಗುತ್ತಿದೆ, ಪಕ್ಷ ಒಂದೇ ಕುಟುಂಬದ ಹಿಡಿತಕ್ಕೆ ಸಿಕ್ಕು ನಲುಗಿತ್ತಿದೆ ಎಂದು ಹೇಳುತ್ತಾ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಇಂದು ಮತ್ತೇ ಬಿಎಸ್ ಯಡಿಯೂರಪ್ಪ (BS Yediyurappa) ಕುಟುಂಬದ ವಿರುದ್ಧ ತಮ್ಮ ದಾಳಿ ಮುಂದುವರಿಸಿದರು. ಇದೇ ಸಂದರ್ಭದಲ್ಲಿ ಅವರು ಲಿಂಗಾಯತ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ್ತು ಒಕ್ಕಲಿಗ ಧುರೀಣ ಸಿಟಿ ರವಿ (CT Ravi) ಪರ ಬ್ಯಾಟ್ ಬೀಸಿದರು. ಅವರಿಬ್ಬರು ಪಕ್ಷಕ್ಕಾಗಿ ಹಲವಾರು ಬಲಿದಾನಗಳನ್ನು ಮಾಡಿದ್ದಾರೆ ಮತ್ತು ರಾಜ್ಯದ ಪ್ರಮುಖ ಮತ್ತು ಬಲಾಢ್ಯ ಸಮುದಾಯಗಳನ್ನು ಪ್ರತಿನಿಧಿಸುತ್ತಾರೆ, ಅವರಲ್ಲೊಬ್ಬರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಯಾಕೆ ಮಾಡಲಿಲ್ಲ? ಎಂದು ಪ್ರಶ್ನಿಸಿದ ಈಶ್ವರಪ್ಪ ಹಿಂದುಳಿದ ವರ್ಗಗಳ ಬೆಂಬಲ ಪಡೆಯುವ ಉದ್ದೇಶವಿದ್ದಿದ್ದರೆ ತನ್ನನ್ನು ಮಾಡಬಹುದಿತ್ತು ಎಂದು ಹೇಳಿದರು.

ಪಾಪ, ರವಿಗೆ ಲೋಕಸಭಾ ಚುನಾವಣೆಗೂ ಟಿಕೆಟ್ ವಂಚಿಸಲಾಯಿತು ಎಂದು ವಿಷಾದ ವ್ಯಕ್ತಪಡಿಸಿದ ಈಶ್ವರಪ್ಪ, ಯಡಿಯೂರಪ್ಪಗೆ ಪಕ್ಷದ ಸಂಘಟನೆ ಬೇಕಿಲ್ಲ, ತನ್ನ ಮಕ್ಕಳು ಉದ್ಧಾರವಾದರೆ ಸಾಕು ಅಂತ ಕಿಡಿಕಾರಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಪಕ್ಷದ ಬಲವರ್ಧನೆಗಾಗಿ ಶ್ರೀಧರ ಸ್ವಾಮಿ ಮತ್ತು ದತ್ತಾತ್ರೇಯ ಸ್ವಾಮುಯವರ ಸನ್ನಿಧಿಗೆ ಹೋಗುತ್ತಿರುವಾಗಿ ಅವರು ಹೇಳಿದರು. ರಾಜ್ಯಾದಾದ್ಯಂತ ಇರುವ ತಮ್ಮ ಬೆಂಬಲಿಗರು ತಮ್ಮನ್ನು ಪಕ್ಷೇತ್ರರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಒತ್ತಾಯಿಸುತ್ತಿದ್ದಾರೆ, ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿದರೆ ತಾನು ಖಂಡಿತ ಗೆಲ್ಲುವುದಾಗಿ ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನಮ್ಮ ಹೋರಾಟ ಕೇವಲ ಶಿವಮೊಗ್ಗ ಕ್ಷೇತ್ರಕ್ಕೆ ಸೀಮಿತ: ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್

Published on: Mar 16, 2024 12:08 PM