ನನ್ನ ಮಗ ಕಾಂತೇಶ್ ಟಿಕೆಟ್ ತಪ್ಪಿದ್ದಕ್ಕೆ ಯಡಿಯೂರಪ್ಪ ಮತ್ತು ವಿಜಯೇಂದ್ರ ನಡೆಸಿದ ಷಡ್ಯಂತ್ರ ಕಾರಣ: ಕೆಎಸ್ ಈಶ್ವರಪ್ಪ
ಕಾಂತೇಶ್ ಗೆ ಟಿಕೆಟ್ ಕೊಡಿಸುವ ಬಗ್ಗೆ ಮಾತಾಡಲು ಯಡಿಯೂರಪ್ಪರ ಮನೆಗೆ ಹೋದಾಗ ಅವರು ಟಿಕೆಟ್ ಕೊಡಿಸುವುದು ಮಾತ್ರವಲ್ಲದೆ, ಕ್ಷೇತ್ರದ ತುಂಬಾ ಓಡಾಡಿ ಕಾಂತೇಶ್ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದರು. ಈಗ ಟಿಕೆಟ್ ತಪ್ಪಿಸಿರುವುದು ಷಡ್ಯಂತ್ರವಲ್ಲದೆ ಮತ್ತೇನು ಎಂದು ಅವರು ಹೇಳಿದರು.
ಶಿವಮೊಗ್ಗ: ನಿನ್ನೆ ಬೆಂಗಳೂರಲ್ಲಿ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದ ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಇವತ್ತು ಶಿವಮೊಗ್ಗದ ತಮ್ಮ ನಿವಾಸದಲ್ಲಿ ಜಿಲ್ಲೆಯ ಟಿವಿ9 ವರದಿಗಾರನೊಂದಿಗೆ ಮಾತಾಡುವಾಗಲೂ ತಂದೆ-ಮಗ ಜೋಡಿಯ ವಿರುದ್ಧ ಅಸಮಾಧಾನ ಮತ್ತು ಬೇಸರ ವ್ಯಕ್ತಪಡಿಸಿದರು. ಮಾತು ಆರಂಭಿಸುವ ಮೊದಲು ತಾನೇನೂ ಗರಂ ಆಗಿಲ್ಲ ಶಾಂತನಾಗಿದ್ದೇನೆ ಅನ್ನೋದನ್ನು ಸ್ಪಷ್ಟಪಡಿಸಿದ ಈಶ್ವರಪ್ಪ ಯಡಿಯೂರಪ್ಪ ಮತ್ತು ವಿಜಯೇಂದ್ರ ಕುತಂತ್ರದಿಂದ ತಮ್ಮ ಮಗ ಕಾಂತೇಶ್ ಗೆ ಹಾವೇರಿ ಕ್ಷೇತ್ರದ ಟಿಕೆಟ್ ತಪ್ಪಿದೆ ಎಂದರು. ಕಾಂತೇಶ್ ಗೆ ಟಿಕೆಟ್ ಕೊಡಿಸುವ ಬಗ್ಗೆ ಮಾತಾಡಲು ಯಡಿಯೂರಪ್ಪರ ಮನೆಗೆ ಹೋದಾಗ ಅವರು ಟಿಕೆಟ್ ಕೊಡಿಸುವುದು ಮಾತ್ರವಲ್ಲದೆ, ಕ್ಷೇತ್ರದ ತುಂಬಾ ಓಡಾಡಿ ಕಾಂತೇಶ್ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದರು. ಈಗ ಟಿಕೆಟ್ ತಪ್ಪಿಸಿರುವುದು ಷಡ್ಯಂತ್ರವಲ್ಲದೆ ಮತ್ತೇನು ಎಂದು ಅವರು ಹೇಳಿದರು. ಅಸಲು ವಿಷಯವೇನೆಂದರೆ, ಕೇಂದ್ರದ ನಾಯಕರು ತಂದೆ ಮತ್ತು ಮಗನಿಗೆ ವಿನಾಕಾರಣ ಹೆಚ್ಚಿನ ಮಹತ್ವ ಮತ್ತು ಬೆಲೆ ನೀಡುತ್ತಿದ್ದಾರೆ, ಅದನ್ನು ಇವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಒಂದೂವರೆ ತಿಂಗಳು ಹಿಂದೆ ತಾಯಿ-ಮಗಳಿಗೆ ನೆರವಾಗಿ ಅಂತ ನಾನೇ ಪೊಲೀಸ್ ಆಯುಕ್ತರಲ್ಲಿಗೆ ಕಳಿಸಿದ್ದೆ: ಬಿಎಸ್ ಯಡಿಯೂರಪ್ಪ