ರಾಮನಗರದ ಜನರನ್ನು ಹಾಸನದ ನಾಯಕರು ಗುಲಾಮರಂತೆ ಟ್ರೀಟ್ ಮಾಡುತ್ತಿದ್ದಾರೆ: ಹೆಚ್ ಸಿ ಬಾಲಕೃಷ್ಣ, ಶಾಸಕ
ತಮ್ಮನ್ನು ಅವರು ಗುಲಾಮರಂತೆಯೇ ಟ್ರೀಟ್ ಮಾಡುತ್ತಿದ್ದಾರೆ, ಅವರು ಬಳಸುವ ಭಾಷೆ ಸುಸಂಸ್ಕೃತವಲ್ಲ ಎಂದು ಹೇಳಿದ ಬಾಲಕೃಷ್ಣ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಮನಗರದ ಜನ ಸ್ವಾಭಿಮಾನದ ಪರ ಮತ ಚಲಾಯಿಸುತ್ತಾರೋ ಅಥವಾ ಗುಲಾಮಗಿರಿಯನ್ನು ಒಪ್ಪಿಕೊಳ್ಳುತ್ತಾರೋ ಅಂತ ಕಾದು ನೋಡಬೇಕಿದೆ ಎಂದು ಹೇಳಿದರು.
ಬೆಂಗಳೂರು: ಅದೊಂದು ಕಾಲವಿತ್ತು. ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಎನ್ ಚಲುವರಾಯಸ್ವಾಮಿ, ಹೆಚ್ ಸಿ ಬಾಲಕೃಷ್ಣ (HC Balakrishna), ಬಿಜೆಡ್ ಜಮೀರ್ ಅಹ್ಮದ್ ಖಾನ್ ಮೊದಲಾದವರೆಲ್ಲ ಒಂದೇ ತಾಯಿಯ ಮಕ್ಕಳಂತಿದ್ದರು. ಈಗ ಕುಮಾರಸ್ವಾಮಿಯಿಂದ ಉಳಿದ ಮೂವರು ದೂರಾಗಿ ಕಾಂಗ್ರೆಸ್ ಸೇರಿದ್ದರೆ ಕುಮಾರಣ್ಣ ಬಿಜೆಪಿ ಜೊತೆ (alliance with BJP) ಸೇರಿ ಯೇ ದೋಸ್ತಿ ಹಮ್ ನಹೀಂ ಛೋಡೆಂಗೆ ಹಾಡು ಹೇಳುತ್ತಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಾಂಗ್ರೆಸ್ ಬಾಲಕೃಷ್ಣ ಹಾಸನ ನಾಯಕರು ರಾಮನಗರಕ್ಕೆ ಬಂದು ಇಲ್ಲಿಯ ಜನರ ಮೇಲೆ ಅಧಿಕಾರ ನಡೆಸುತ್ತಾ ಅವರನ್ನು ಗುಲಾಮರನ್ನಾಗಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ತಮ್ಮನ್ನು ಅವರು ಗುಲಾಮರಂತೆಯೇ ಟ್ರೀಟ್ ಮಾಡುತ್ತಿದ್ದಾರೆ, ಅವರು ಬಳಸುವ ಭಾಷೆ ಸುಸಂಸ್ಕೃತವಲ್ಲ ಎಂದು ಹೇಳಿದ ಬಾಲಕೃಷ್ಣ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಮನಗರದ ಜನ ಸ್ವಾಭಿಮಾನದ ಪರ ಮತ ಚಲಾಯಿಸುತ್ತಾರೋ ಅಥವಾ ಗುಲಾಮಗಿರಿಯನ್ನು ಒಪ್ಪಿಕೊಳ್ಳುತ್ತಾರೋ ಅಂತ ಕಾದು ನೋಡಬೇಕಿದೆ ಎಂದು ಹೇಳಿದರು.
ರಾಜಕೀಯ ಅಖಾಡದಲ್ಲಿರುವವರೆಲ್ಲ ರಾಜಕಾರಣ ಮಾಡಿಕೊಂಡು ಬಂದಿರುತ್ತಾರೆ, ರಾಮನಗರ ರಾಜಕೀಯದ ಬಗ್ಗೆ ಮಾತಾಡುವ ಕುಮಾರಸ್ವಾಮಿ ತಾವು ಸ್ಪರ್ಧಿಸದೆ ಸಂಬಂಧಿಕರನ್ನು ಯಾಕೆ ಕರೆತಂದಿದ್ದಾರೆ? ಜನಪ್ರಿಯ ಮುಖ್ಯಮಂತ್ರಿಯಾದವರಿಗೆ ಲೋಕಸಭಾ ಚುನಾವಣೆ ಗೆಲ್ಲುವುದು ಸಾಧ್ಯವಾಗುತ್ತಿರಲಿಲ್ಲವೇ? ಎಂದು ಬಾಲಕೃಷ್ಣ ಕುಹುಕವಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: