Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ಸಂಭ್ರಮ; ಬೆಂಗಳೂರಲ್ಲಿ ಇನ್ನೊಂದು ಬೆಂಕಿ ದುರಂತ, 4-ಮಹಡಿ ಕಟ್ಟಡ ಅಗ್ನಿಗಾಹುತಿ!

ದೀಪಾವಳಿ ಸಂಭ್ರಮ; ಬೆಂಗಳೂರಲ್ಲಿ ಇನ್ನೊಂದು ಬೆಂಕಿ ದುರಂತ, 4-ಮಹಡಿ ಕಟ್ಟಡ ಅಗ್ನಿಗಾಹುತಿ!

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 13, 2023 | 10:38 AM

ಎರಡನೇ ಮಹಡಿಯಲ್ಲಿ ಕೋಚಿಂಗ್ ಸೆಂಟರ್ ಮತ್ತು ಮೇಲಿನ ಎರಡು ಮಹಡಿಗಳನ್ನು ಐಟಿ ಕಂಪನಿಯೊಂದಕ್ಕೆ ಬಾಡಿಗೆ ಕೊಡಲಾಗಿತ್ತಂತೆ. ಇಲ್ಲಿ ಉದ್ಭವಿಸುವ ಸಮಸ್ಯೆಯೇನೆಂದರೆ, ಇಷ್ಟು ದೊಡ್ಡ ಕಟ್ಟಡದಲ್ಲಿ ಫೈರ್ ಸೇಫ್ಟಿಗಾಗಿ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿರಲಿಲ್ಲವೇ ಅನ್ನೋದು. ಶಂಕರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು ತನಿಖೆಯ ಬಳಿಕವೇ ದುರಂತದ ಹಿಂದಿನ ಕಾರಣ ಬೆಳಕಿಗೆ ಬರಬೇಕು.

ಬೆಂಗಳೂರು: ನಗರದಲ್ಲಿ ಮತ್ತೊಂದು ಅಗ್ನಿ ಅವಗಢ! ಬಾಣಸವಾಡಿ ಹೊರವರ್ತುಲ ರಸ್ತೆಯಲ್ಲಿದ್ದ (Banaswadi Outer Ring Road) ನಾಲ್ಕು ಮಹಡಿ ಕಟ್ಟಡವೊಂದು ಸೋಮವಾರ ಬೆಳಗಿನ ಜಾವ (Monday wee hours) ಬೆಂಕಿಗಾಹುತಿಯಾಗಿದೆ. ಕಟ್ಟಡ ಅಕ್ಷರಶಃ ಸುಟ್ಟು ಕರಕಲಾಗಿದೆ. ಇದನ್ನು ಸಹ ಪಟಾಕಿ ದುರುಂತವೆಂದು ಹೇಳಲಾಗುತ್ತಿದೆಯಾದರೂ ಇಡೀ ಕಟ್ಟಡಕ್ಕೆ ಬೆಂಕಿ ಹೇಗೆ ಹೊತ್ತಿಕೊಂಡಿತು ಅನ್ನೋದು ನಿಖರವಾಗಿ ಗೊತ್ತಾಗಿಲ್ಲ. ಶಂಕರ್ (Shankar) ಹೆಸರಿನ ವ್ಯಕ್ತಿಗೆ ಸೇರಿದ ಈ ಕಟ್ಟಡದ ಎಲ್ಲ 4 ಮಹಡಿಗಳನ್ನು ಬಾಡಿಗೆಗೆ ನೀಡಲಾಗಿತ್ತಂತೆ. ನೆಲ ಮತ್ತು ಮೊದಲ ಮಹಡಿಯಲ್ಲಿ ಫರ್ನಿಚರ್ ಶೋರೂಮ್ ಇತ್ತು. ಎರಡನೇ ಮಹಡಿಯಲ್ಲಿ ಕೋಚಿಂಗ್ ಸೆಂಟರ್ ಮತ್ತು ಮೇಲಿನ ಎರಡು ಮಹಡಿಗಳನ್ನು ಐಟಿ ಕಂಪನಿಯೊಂದಕ್ಕೆ ಬಾಡಿಗೆ ಕೊಡಲಾಗಿತ್ತಂತೆ. ಇಲ್ಲಿ ಉದ್ಭವಿಸುವ ಸಮಸ್ಯೆಯೇನೆಂದರೆ, ಇಷ್ಟು ದೊಡ್ಡ ಕಟ್ಟಡದಲ್ಲಿ ಫೈರ್ ಸೇಫ್ಟಿಗಾಗಿ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿರಲಿಲ್ಲವೇ ಅನ್ನೋದು. ಶಂಕರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು ತನಿಖೆಯ ಬಳಿಕವೇ ದುರಂತದ ಹಿಂದಿನ ಕಾರಣ ಬೆಳಕಿಗೆ ಬರಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ