ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಗಢ, ಊದಿನಕಡ್ಡಿ ತಯಾರಿಕಾ ಘಟಕಕ್ಕೆ ಬೆಂಕಿ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ
ದೃಶ್ಯದಲ್ಲಿ ಒಬ್ಬ ವ್ಯಕ್ತಿ ಎದುರುಭಾಗದಿಂದ ಬೆಂಕಿಯ ಕಡೆ ಓಡಿ ಬರುತ್ತಿರುವುದನ್ನು ನೋಡಬಹುದು. ಪ್ರಾಯಶಃ ಪಾರ್ಕ್ ಆಗಿದ್ದ ವಾಹನಗಳಲ್ಲಿ ಅವನದ್ದು ಕೂಡ ಇತ್ತೇನೋ? ಅಗರಬತ್ತಿ ಘಟಕವಿರುವ ರಸ್ತೆ ಇಕ್ಕಟ್ಟಾಗಿರುವುದರಿಂದ ಅಗ್ನಿಶಾಮಕ ದಳದ ವಾಹನ ಸ್ಥಳಕ್ಕೆ ತಲುಪುವುದು ಪ್ರಯಾಸಕರವಾಗಿತ್ತು. ಕೊನೆಗೆ ಹೇಗೋ ಅಲ್ಲಿಗೆ ಹೋದ ಸಿಬ್ಬಂದಿ ಬೆಂಕಿಯನ್ನು ನಂದಿಸಿತು.
ಬೆಂಗಳೂರು: ನಗರದಲ್ಲಿ ಬೆಂಕಿ ಆಕಸ್ಮಿಕಗಳು ಮೇಲಿಂದ ಮೇಲೆ ಸಂಭವಿಸುತ್ತಿರೋದು ಆತಂಕಕಾರಿ ವಿಷಯ. ಕಳೆದ ರವಿವಾರ ಅತ್ತಿಬೆಲೆಯಲ್ಲಿ ಪಟಾಕಿ ದಾಸ್ತಾನಿದ್ದ ಮಳಿಗೆಯೊಂದಕ್ಕೆ ಬೆಂಕಿ ಹೊತ್ತಿಕೊಂಡು 16 ಜನ ಬಲಿಯಾಗಿದ್ದರು. ಇವತ್ತು ನಗರದ ಜೋಗುಪಾಳ್ಯ (Jogupalya) ಪೈಪ್ ಲೈನ್ ರಸ್ತೆಯಲ್ಲಿರುವ ಅಗರಬತ್ತಿ ತಯಾರಿಕಾ ಘಟಕವೊಂದಕ್ಕೆ (incense sticks manufacturing unit) ಬೆಂಕಿ ತಗುಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಸಮಾಧಾನಕರ ಸಂಗತಿಯೆಂದರೆ ಯಾವುದೇ ಪ್ರಾಣಾಪಾಯವಾಗಿಲ್ಲ (no casualties). ಲಭ್ಯವಿರುವ ಮಾಹಿತಿ ಪ್ರಕಾರ ಅಗರಬತ್ತಿ ಘಟಕದಲ್ಲಿಟ್ಟಿದ್ದ ರಸಾಯನಿಕವೊಂದರ ಸೋರಿಕೆಯಯಿಂದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ರಸ್ತೆ ಕಡೆಯೂ ಹಬ್ಬಿದ್ದರಿಂದ ಸ್ಥಳದಲ್ಲಿ ಪಾರ್ಕ್ ಮಾಡಿದ್ದ 8 ದ್ವಿಚಕ್ರವಾಹನಗಳು ಸುಟ್ಟುಹೋಗಿವೆ. ದೃಶ್ಯದಲ್ಲಿ ಒಬ್ಬ ವ್ಯಕ್ತಿ ಎದುರುಭಾಗದಿಂದ ಬೆಂಕಿಯ ಕಡೆ ಓಡಿ ಬರುತ್ತಿರುವುದನ್ನು ನೋಡಬಹುದು. ಪ್ರಾಯಶಃ ಪಾರ್ಕ್ ಆಗಿದ್ದ ವಾಹನಗಳಲ್ಲಿ ಅವನದ್ದು ಕೂಡ ಇತ್ತೇನೋ? ಅಗರಬತ್ತಿ ಘಟಕವಿರುವ ರಸ್ತೆ ಇಕ್ಕಟ್ಟಾಗಿರುವುದರಿಂದ ಅಗ್ನಿಶಾಮಕ ದಳದ ವಾಹನ ಸ್ಥಳಕ್ಕೆ ತಲುಪುವುದು ಪ್ರಯಾಸಕರವಾಗಿತ್ತು. ಕೊನೆಗೆ ಹೇಗೋ ಅಲ್ಲಿಗೆ ಹೋದ ಸಿಬ್ಬಂದಿ ಬೆಂಕಿಯನ್ನು ನಂದಿಸಿತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ