ಯುವಕ ಆತ್ಮಹತ್ಯೆ; ಸಿದ್ದರಾಮಯ್ಯ, ಯಶ್ ಅಂತ್ಯಸಂಸ್ಕಾರಕ್ಕೆ ಬರುವಂತೆ ಮನವಿ, 15 ವರ್ಷದ ಹಿಂದೆ ತಂದೆ ಸಹ ಆತ್ಮಹತ್ಯೆ..

ರಾಮಕೃಷ್ಣ(25) ಡೆತ್​ ನೋಟ್​ನಲ್ಲಿ ನನ್ನ ಅಂತ್ಯಕ್ರಿಯೆಗೆ ಯಶ್​ ಮತ್ತು ಸಿದ್ದರಾಮಯ್ಯ ಬರಬೇಕೆಂದು ಬರೆದಿಟ್ಟು, ನೇಣಿಗೆ ಶರಣಾಗಿದ್ದಾರೆ. ಇದು ನನ್ನ ಕೊನೆ ಆಸೆ ಎಂದು ಪತ್ರದಲ್ಲಿ ಬರೆದು ನೇಣಿಗೆ ಶರಣಾಗಿದ್ದಾರೆ.

ಯುವಕ ಆತ್ಮಹತ್ಯೆ; ಸಿದ್ದರಾಮಯ್ಯ, ಯಶ್ ಅಂತ್ಯಸಂಸ್ಕಾರಕ್ಕೆ ಬರುವಂತೆ ಮನವಿ, 15 ವರ್ಷದ ಹಿಂದೆ ತಂದೆ ಸಹ ಆತ್ಮಹತ್ಯೆ..
ರಾಮಕೃಷ್ಣ (25)

Updated on: Feb 18, 2021 | 11:49 AM

ಮಂಡ್ಯ: ಜಿಲ್ಲೆಯ ರಾಮಕೃಷ್ಣ ಎಂಬ ಯುವಕ ಡೆತ್​ ನೋಟ್​ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಗಮನಾರ್ಹವೆಂದರೆ ಆತ ತಾನು ಬರೆದಿರುವ ಡೆತ್​ ನೋಟ್​ ನಲ್ಲಿ ತನ್ನ ಅಂತ್ಯಕ್ರಿಯೆಗೆ ಯಶ್​ ಮತ್ತು ಸಿದ್ದರಾಮಯ್ಯ ಬರಬೇಕೆಂದು ಬರೆದಿಟ್ಟು, ನೇಣಿಗೆ ಶರಣಾಗಿದ್ದಾರೆ. ಘಟನೆ ಕೋಡಿ ದೊಡ್ಡಿಯಲ್ಲಿ ಗ್ರಾಮದಲ್ಲಿ ನಡೆದಿದೆ. ನನ್ನ ಕೊನೆಯ ಆಸೆ ಇದು. ನಟ ಯಶ್​ ಮತ್ತು  ಮಾಜಿ ಸಿಎಂ ಸಿದ್ದರಾಮಯ್ಯ ನನ್ನ ಅಂತ್ಯಕ್ರಿಯೆಗೆ ಬರಬೇಕು ಎಂದು ಮೃತ ದುರ್ದೈವಿ ರಾಮಕೃಷ್ಣ (25) ಮನವಿ ಮಾಡಿದ್ದಾರೆ.

ನನ್ನನ್ನು ದಯವಿಟ್ಟು ಕ್ಷಮಿಸಿ ಬಿಡಿ. ಏಕೆಂದರೆ ನಿಮಗೆಲ್ಲಾ ತುಂಬಾ ನೋವು ಕೊಟ್ಟಿದ್ದೀನಿ. ಅಮ್ಮನಿಗೆ ಒಬ್ಬ ಮಗನಾಗಿ, ಅಣ್ಣನಿಗೆ ತಮ್ಮನಾಗಿ, ಗೆಳೆಯರಿಗೆ ಒಂದೊಳ್ಳೆ ಸ್ನೇಹಿತನಾಗಿ, ನನ್ನ ಹುಡುಗಿಗೆ ಜೊತೆಗಾರನಾಗಿ, ಬಾಳ ಸಂಗಾತಿಯಾಗಲು ವಿಫಲನಾಗಿದ್ದೇನೆ. ಹಾಗಾಗಿ, ನಾನು ನಿಮ್ಮಿಂದ ದೂರವಾಗಬೇಕೆಂದು ತೀರ್ಮಾನಿಸಿ ನನ್ನ ಇಚ್ಛೆಯಂತೆ ಮರಣ ಹೊಂದುತ್ತಿದ್ದೇನೆ ಎಂದು ರಾಮಕೃಷ್ಣ ಪತ್ರದಲ್ಲಿ ಬರೆದು ಆತ್ಮ ಹತ್ಯೆಗೆ ಶರಣಾಗಿದ್ದಾರೆ.

ಡೆತ್ ನೋಟ್

ನನ್ನ ಅಂತ್ಯಕ್ರಿಯೆಗೆ ರಾಕಿಂಗ್ ಸ್ಟಾರ್ ಯಶ್ ಅಣ್ಣ ಭಾಗವಹಿಸಬೇಕು. ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸರ್​ರವರು ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬೇಕು. ಏಕೆಂದರೆ ನಿಮ್ಮಿಬ್ಬರ ಅಪ್ಪಟ ಅಭಿಮಾನಿ ನಾನು. ದಯವಿಟ್ಟು ಕೇಳಿಕೊಳ್ಳುತ್ತೇನೆ ನನ್ನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ. ನನ್ನ ಕೊನೆಯ ಆಸೆ ಈಡೇರಿಸಿ ಪ್ಲೀಸ್. ಮಾಧ್ಯಮ ಮಿತ್ರರು ಸಹ ಸಹಕರಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.

15 ವರ್ಷದ ಹಿಂದೆ ಕೃಷ್ಣ ತಂದೆ ಚಂದ್ರು ಸಹ ಆತ್ಮಹತ್ಯೆಗೆ ಶರಣಾಗಿದ್ದರು
ರಾಮಕೃಷ್ಣ ಪೆಟ್ರೋಲ್​ ಬಂಕ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 15 ವರ್ಷದ ಹಿಂದೆ ಕೃಷ್ಣ ತಂದೆ ಚಂದ್ರು ಸಹ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೆರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ನಾನು ಮಾಡಿದ ಕರ್ಮಕ್ಕೆ ನಾನು ಸಾಯುತ್ತಿದ್ದೇನೆ -ಗಂಗಾ ಕುಲಕರ್ಣಿ ಡೆತ್ ನೋಟ್

Published On - 11:44 am, Thu, 18 February 21