ಮಧ್ಯರಾತ್ರಿ ನಾಗಮಂಗಲ ತಾಲ್ಲೂಕು ಕಚೇರಿ ಹೊಕ್ಕ ಯುವಕನೊಬ್ಬ ಹೂಕುಂಡಗಳನ್ನು ಧ್ವಂಸ ಮಾಡಿದ, ಕೃತ್ಯ ಸಿಸಿಟಿವಿಯಲ್ಲಿ ಸೆರೆ!

|

Updated on: Nov 02, 2023 | 11:44 AM

ಅವನ ಪುಂಡಾಟ ಅಷ್ಟಕ್ಕೆ ನಿಂತಿಲ್ಲ. ಪಕ್ಕದ್ಲಲೇ ಇರುವ ಪಾರ್ಕೊಂದರ ಬಳಿ ಹೋಗಿ ನೀರಿನ ಪೈಪ್ ಲೈನ್ ಒಡೆದು ಹಾಕಿದ್ದಾನೆ. ನಾಗಮಂಗಲ ತಹಸೀಲ್ದಾರ ಸಿಸಿಟಿವಿ ದೃಶ್ಯಗಳನ್ನಾಧರಿಸಿ ಪೊಲೀಸರಿಗೆ ದೂರು ಸಲ್ಲಿಸಿದ್ದು ಪ್ರಕರಣ ದಾಖಲಿಸಿಕೊಂಡು ಅವನ ಶೋಧ ಕಾರ್ಯ ನಡೆದಿದೆ. ನಾಗಮಂಗಲ ದೊಡ್ಡ ಊರೇನಲ್ಲ, ಯುವಕ ಬೇಗ ಸಿಗಲಿದ್ದಾನೆ.

ಮಂಡ್ಯ: ನಾಗಮಂಗಲದ (Nagamangala) ಈ ಯುವಕನಿಗೆ ವ್ಯವಸ್ಥೆಯ ಮೇಲೆ ಆಕ್ರೋಶವೋ, ತಾಲ್ಲೂಕು ಕಚೇರಿಯಲ್ಲಿ ಇವನ ಅರ್ಜಿಯನ್ನು ಕಡೆಗಣಿಸಲಾಗುತ್ತಿದೆಯೋ, ಸಂಬಂಧಪಟ್ಟ ಸಿಬ್ಬಂದಿ ಇಲ್ಲವೇ ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೋ ಅಥವಾ ಮತಿಭ್ರಮಣೆ ಆಗಿದೆಯೋ ಗೊತ್ತಿಲ್ಲ ಮಾರಾಯ್ರೇ. ಆದರೆ, ಬುಧವಾರ ಅಪರಾತ್ರಿ ನಾಗಮಂಗಲ ತಾಲ್ಲೂಕು ಕಚೇರಿ (taluk office) ಅವರಣದೊಳಗೆ ಹೋಗಿ ಅಲ್ಲಿದ್ದ ಹೂಕುಂಡಗಳನ್ನು (flower pots) ಧ್ವಂಸ ಮಾಡಿರೋದು ಹುಚ್ಚಾಟವಲ್ಲದೆ ಮತ್ತೇನೂ ಅಲ್ಲ. ಅವನು ನಡೆಸಿದ ಕೃತ್ಯ ಆವರಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರಿಗೆ ಇವನ ಪತ್ತೆ ಹಚ್ಚುವುದು ಕಷ್ಟವಾಗಲಿಕ್ಕಿಲ್ಲ, ತಲೆಗೂದಲಿಂದ ಸುಲಭವಾಗಿ ಗುರುತು ಹಿಡಿಯಬಹುದು. ಅವನ ಪುಂಡಾಟ ಅಷ್ಟಕ್ಕೆ ನಿಂತಿಲ್ಲ. ಪಕ್ಕದ್ಲಲೇ ಇರುವ ಪಾರ್ಕೊಂದರ ಬಳಿ ಹೋಗಿ ನೀರಿನ ಪೈಪ್ ಲೈನ್ ಒಡೆದು ಹಾಕಿದ್ದಾನೆ. ನಾಗಮಂಗಲ ತಹಸೀಲ್ದಾರ ಸಿಸಿಟಿವಿ ದೃಶ್ಯಗಳನ್ನಾಧರಿಸಿ ಪೊಲೀಸರಿಗೆ ದೂರು ಸಲ್ಲಿಸಿದ್ದು ಪ್ರಕರಣ ದಾಖಲಿಸಿಕೊಂಡು ಅವನ ಶೋಧ ಕಾರ್ಯ ನಡೆದಿದೆ. ನಾಗಮಂಗಲ ದೊಡ್ಡ ಊರೇನಲ್ಲ, ಯುವಕ ಬೇಗ ಸಿಗಲಿದ್ದಾನೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  

 

Published on: Nov 02, 2023 11:44 AM