ಯುವಕರಿಂದ ಬಾಲಕನಿಗೆ ಚಿತ್ರಹಿಂಸೆ, ಕಂಠೀರವ ಸ್ಟೇಡಿಯಂ ಕೆರೆಯಲ್ಲಿ ಪುಂಡಾಟ
ಬೆಂಗಳೂರು: ಯುವಕರ ಗುಂಪೊಂದು ಬಾಲಕನನ್ನು ನೀರಿನಲ್ಲಿ ಮುಳುಗಿಸಿ ಚಿತ್ರ ಹಿಂಸೆ ನೀಡಿದ ಅಮಾನವೀಯ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಹರ್ಷವರ್ಧನ ಎಂಬ ಬಾಲಕನನ್ನು ಮ್ಯಾನುಯಲ್, ಸೂರ್ಯ , ಚರಣ್ ಮುಂತಾದ ಯುವಕರ ಗುಂಪು ನೀರಲ್ಲಿ ಮುಳುಗಿಸಿ ಚಿತ್ರಹಿಂಸೆ ಕೊಡುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂ ಬಳಿ ಇರುವ ಐತಿಹಾಸಿಕ ಕಲ್ಯಾಣಿಯಲ್ಲಿ ಈ ಘಟನೆ ನಡೆದಿದೆ. ಬಾಲಕ ಎಷ್ಟೇ ಅಂಗಲಾಚಿದರೂ, ಈಜು ಬರಲ್ಲ ಬಿಡಿ ಅಣ್ಣಾ, ಜೀವ ಹೋಗತ್ತೆ ಎಂದು ಚೀರಿದರೂ ಕ್ಯಾರೇ ಅನ್ನದೆ ಯುವಕರು ಚಿತ್ರಹಿಂಸೆ […]
ಬೆಂಗಳೂರು: ಯುವಕರ ಗುಂಪೊಂದು ಬಾಲಕನನ್ನು ನೀರಿನಲ್ಲಿ ಮುಳುಗಿಸಿ ಚಿತ್ರ ಹಿಂಸೆ ನೀಡಿದ ಅಮಾನವೀಯ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಹರ್ಷವರ್ಧನ ಎಂಬ ಬಾಲಕನನ್ನು ಮ್ಯಾನುಯಲ್, ಸೂರ್ಯ , ಚರಣ್ ಮುಂತಾದ ಯುವಕರ ಗುಂಪು ನೀರಲ್ಲಿ ಮುಳುಗಿಸಿ ಚಿತ್ರಹಿಂಸೆ ಕೊಡುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂ ಬಳಿ ಇರುವ ಐತಿಹಾಸಿಕ ಕಲ್ಯಾಣಿಯಲ್ಲಿ ಈ ಘಟನೆ ನಡೆದಿದೆ.
ಬಾಲಕ ಎಷ್ಟೇ ಅಂಗಲಾಚಿದರೂ, ಈಜು ಬರಲ್ಲ ಬಿಡಿ ಅಣ್ಣಾ, ಜೀವ ಹೋಗತ್ತೆ ಎಂದು ಚೀರಿದರೂ ಕ್ಯಾರೇ ಅನ್ನದೆ ಯುವಕರು ಚಿತ್ರಹಿಂಸೆ ನೀಡಿದ್ದಾರೆ. ಪ್ರಕರಣ ಇದೀಗ ಸಂಪಂಗಿ ರಾಮ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
6ಆರೋಪಿಗಳ ಬಂಧನ: ಪ್ರಕರಣದ ಸಂಬಂಧ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಇದರಲ್ಲಿ ಐವರು ಅಪ್ರಾಪ್ತರು. ಅವರನ್ನ ಜ್ಯೂವೆನಲ್ ಕೋರ್ಟ್ಗೆ ಹಾಜರುಪಡಿಸಿ ಪುನರ್ವಸತಿ ಕೇಂದ್ರಕ್ಕೆ ಕಳಿಸಲಾಗುವುದು. ಈ ಕೇಸಲ್ಲಿ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎಂದು ಡಿಸಿಪಿ ಚೇತನ್ ಸಿಂಗ್ ರಾತೋರ್ ತಿಳಿಸಿದ್ದಾರೆ.
Published On - 10:02 am, Thu, 21 November 19