‘ನಿಮ್ಮ ದುಡ್ಡು ಡಬಲ್ ಆಗುತ್ತೆ‘ ಎಂದ ಪೋಸ್ಟ್ ಮ್ಯಾನ್ ಪಂಗನಾಮ ಹಾಕಿದ!

ಹಾಸನ: ಪೋಸ್ಟ್ ಆಫೀಸಲ್ಲಿ ಹಣ ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ ಡಬಲ್ ಬಡ್ಡಿ ಬರುತ್ತೆ ಎಂದು ಪೋಸ್ಟ್ ಮ್ಯಾನ್, ಸ್ಥಳೀಯರನ್ನು ನಂಬಿಸಿ ಮೋಸ ಮಾಡಿರುವ ಘಟನೆ ನಡೆದಿದೆ. ಪೋಸ್ಟ್ ಮ್ಯಾನ್ ಲಕ್ಷ ಲಕ್ಷ ಹಣವನ್ನ ನುಂಗಿ ನೀರು ಕುಡಿದಿದ್ದಾನೆ. ಹಾಸನ ತಾಲೂಕಿನ ಸಾಲಗಾಮೆ ಅಂಚೆ ಕಚೇರಿಯಲ್ಲಿ ಭಾರಿ ಗೋಲ್​ಮಾಲ್ ನಡೆದಿದೆ. ಪೋಸ್ಟ್ ಮ್ಯಾನ್ ಚಂದ್ರ ಎಂಬಾತ ನಿಮ್ಮ ಹಣ ಡಬಲ್ ಆಗುತ್ತೆ, ಬಡ್ಡಿ ಬರುತ್ತೆ ಪೋಸ್ಟ್ ಆಫೀಸಲ್ಲಿ ಹಣ ಇಡಿ ಅಂತಾ ಜನರ ತಲೇಲಿ ಹುಳ ಬಿಟ್ಟಿದ್ದಾನೆ. ಇದನ್ನು […]

‘ನಿಮ್ಮ ದುಡ್ಡು ಡಬಲ್ ಆಗುತ್ತೆ‘ ಎಂದ ಪೋಸ್ಟ್ ಮ್ಯಾನ್ ಪಂಗನಾಮ ಹಾಕಿದ!
Follow us
ಸಾಧು ಶ್ರೀನಾಥ್​
|

Updated on:Nov 21, 2019 | 12:33 PM

ಹಾಸನ: ಪೋಸ್ಟ್ ಆಫೀಸಲ್ಲಿ ಹಣ ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ ಡಬಲ್ ಬಡ್ಡಿ ಬರುತ್ತೆ ಎಂದು ಪೋಸ್ಟ್ ಮ್ಯಾನ್, ಸ್ಥಳೀಯರನ್ನು ನಂಬಿಸಿ ಮೋಸ ಮಾಡಿರುವ ಘಟನೆ ನಡೆದಿದೆ. ಪೋಸ್ಟ್ ಮ್ಯಾನ್ ಲಕ್ಷ ಲಕ್ಷ ಹಣವನ್ನ ನುಂಗಿ ನೀರು ಕುಡಿದಿದ್ದಾನೆ.

ಹಾಸನ ತಾಲೂಕಿನ ಸಾಲಗಾಮೆ ಅಂಚೆ ಕಚೇರಿಯಲ್ಲಿ ಭಾರಿ ಗೋಲ್​ಮಾಲ್ ನಡೆದಿದೆ. ಪೋಸ್ಟ್ ಮ್ಯಾನ್ ಚಂದ್ರ ಎಂಬಾತ ನಿಮ್ಮ ಹಣ ಡಬಲ್ ಆಗುತ್ತೆ, ಬಡ್ಡಿ ಬರುತ್ತೆ ಪೋಸ್ಟ್ ಆಫೀಸಲ್ಲಿ ಹಣ ಇಡಿ ಅಂತಾ ಜನರ ತಲೇಲಿ ಹುಳ ಬಿಟ್ಟಿದ್ದಾನೆ. ಇದನ್ನು ನಂಬಿದ ಜನರು ಲಕ್ಷ ಲಕ್ಷ ಹಣವನ್ನು ಠೇವಣಿ ಇಟ್ಟಿದ್ದಾರೆ.

ಕೆಲವರಿಗೆ ತಿಂಗಳಿಗೆ ಇಂತಿಷ್ಟು ಬಡ್ಡಿ ಬರ್ತಿದೆ ಅಂತಾ ಅದನ್ನು ಪಾಸ್ ಬುಕ್ಕಿಗೂ ಎಂಟ್ರಿ ಮಾಡಿ ಕೊಡ್ತಿದ್ದ. ಜನ ಇದೆಲ್ಲ ನಂಬಿದ್ದಾಗಲೇ ಚಂದ್ರು ತಿಂಗಳ ಹಿಂದೆ ಟ್ರಾನ್ಸ್​ಫರ್ ಆಗಿದ್ದಾನೆ. ವರ್ಗಾವಣೆ ಆದ ಬಳಿಕ ಕಚೇರಿಗೆ ಹೋದ ಜನರಿಗೆ ಶಾಕ್ ಆಗಿದೆ. ಈಗಿರೋ ಪೋಸ್ಟ್ ಮ್ಯಾನ್ ನಿಮ್ಮ ಯಾವುದೇ ಹಣ ನಮ್ಮ ಶಾಖೆಯಲ್ಲಿಲ್ಲ. ನಿಮಗೆ ಬಡ್ಡಿ ಇನ್ನೆಲ್ಲಿಂದ ಬರುತ್ತೆ ಅಂತಾ ಹೇಳಿದ್ದಾರೆ. ಈ ಸುದ್ದಿ ಕೇಳಿ ಹಣ ಹೂಡಿಕೆ ಮಾಡಿದ್ದವರು ದಿಗ್ಭ್ರಾಂತರಾಗಿದ್ದಾರೆ.

ಹತ್ತಾರು ಹಳ್ಳಿಗಳಿಗೆ ಇದೊಂದೇ ಅಂಚೆ ಕಚೇರಿ. ಸುಮಾರು 8 ಸಾವಿರ ಜನರು ಖಾತೆ ಮಾಡಿಸಿಕೊಂಡಿದ್ದಾರೆ. ಕೆಲವರು ನಿಶ್ಚಿತ ಠೇವಣಿ ಇಟ್ಟಿದ್ರೆ, ಮತ್ತೆ ಕೆಲವರು ಲಕ್ಷ ಲಕ್ಷ ಹಣವನ್ನು ತಮ್ಮ ಖಾತೆಯಲ್ಲಿಟ್ಟಿದ್ರು. ತಿಂಗಳಿಗೆ ಬರೋ ಬಡ್ಡಿಯನ್ನೇ ಆಶ್ರಯಿಸಿ ಜೀವನ ನಡೆಸುತ್ತಿದ್ದಾರೆ. ಆದ್ರೀಗ, ಹಣ ಸಿಗದೇ ವಂಚನೆಗೊಳಗಾದವರು ಕಚೇರಿಗೆ ಅಲೆದಾಡ್ತಿದ್ದಾರೆ.

ತಮ್ಮ ಹಣ ಕಳ್ಕೊಂಡು ಮರುಗುತ್ತಿದ್ದಾರೆ. ಈ ಬಗ್ಗೆ ಜನ ಈಗಾಗ್ಲೇ ದೂರು ನೀಡಿದ್ದು, ಪರಿಶೀಲನೆಗೆ ತಂಡ ರಚಿಸಲಾಗಿದೆ. ಜನರು‌ ತಮಗೆ ಮೋಸವಾಗಿದ್ದರೆ ಈ ಬಗ್ಗೆ ದೂರು ನೀಡಬೇಕು ಅಂತಾ ಮೇಲಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಈ ಗೋಲ್​ಮಾಲ್ ಬೆಳಕಿಗೆ ಬರ್ತಿದ್ದಂತೆ ಅಕ್ಕಪಕ್ಕದ ಊರುಗಳಲ್ಲಿ ಜಾಗೃತಿ ಮೂಡಿಸಲಾಗ್ತಿದೆ. ನೀವು ಪೋಸ್ಟ್ ಆಫೀಸಲ್ಲಿ ಖಾತೆ ಹೊಂದಿದ್ರೆ, ಕೂಡ್ಲೇ ಚೆಕ್ ಮಾಡಿಕೊಳ್ಳಿ ಅಂತಾ ಪೋಸ್ಟರ್ ಅಂಟಿಸಲಾಗಿದೆ.

Published On - 8:10 am, Thu, 21 November 19

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?