ಆರ್​ಟಿ ನಗರದಿಂದ ಬಂದ ದೆವ್ವಗಳು.. ಮತ್ತಿಕೆರೆಯಲ್ಲಿ ಹುಚ್ಚಾಟ: ಆತಂಕ, ಅರೆಸ್ಟ್

|

Updated on: Nov 11, 2019 | 2:59 PM

ಬೆಂಗಳೂರು: ಮತ್ತಿಕೆರೆಯ ಬಳಿ ಯುವಕರ ಗುಂಪೊಂದು ನಡುರಾತ್ರಿ ದೆವ್ವಗಳಂತೆ ಪ್ರಾಂಕ್ ವಿಡಿಯೋ ಮಾಡಲು ಯತ್ನಿಸಿದ್ದು, ಸಾರ್ವಜನಿಕರಲ್ಲಿಆತಂಕ ಮೂಡಿಸಿದ್ದಾರೆ. ನಡುರಾತ್ರಿ 2 ಗಂಟೆ ಸುಮಾರಿಗೆ ಡೆವಿಲ್ ಮುಖವಾಡ ಧರಿಸಿ ಯುವಕರು ಹುಚ್ಚಾಟ ನಡೆಸಿ, ಸಾರ್ವಜನಿಕರಲ್ಲಿಆತಂಕ ಮೂಡಿಸಿದ್ದಾರೆ. ಸ್ಥಳೀಯ ನಿವಾಸಿಗಳು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ. ಮತ್ತಿಕೆರೆ ಡೆವಿಲ್ಸ್​ ಅರೆಸ್ಟ್​: ಯಶವಂತಪುರ ಠಾಣಾ ಪೊಲೀಸರು ಪ್ರಾಂಕ್ ಮಾಡುತ್ತಿದ್ದ 7 ಜನ ಯುವಕರನ್ನ ವಶಕ್ಕೆ ಪಡೆದಿದ್ದಾರೆ.ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕ್ಯಾಮೆರಾ, ಸಾಮಗ್ರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ದೆವ್ವಗಳು ಆರ್​ಟಿ ನಗರದಿಂದ ಬಂದವು: ಮನೋರಂಜನೆಗಾಗಿ […]

ಆರ್​ಟಿ ನಗರದಿಂದ ಬಂದ ದೆವ್ವಗಳು.. ಮತ್ತಿಕೆರೆಯಲ್ಲಿ ಹುಚ್ಚಾಟ: ಆತಂಕ, ಅರೆಸ್ಟ್
Follow us on

ಬೆಂಗಳೂರು: ಮತ್ತಿಕೆರೆಯ ಬಳಿ ಯುವಕರ ಗುಂಪೊಂದು ನಡುರಾತ್ರಿ ದೆವ್ವಗಳಂತೆ ಪ್ರಾಂಕ್ ವಿಡಿಯೋ ಮಾಡಲು ಯತ್ನಿಸಿದ್ದು, ಸಾರ್ವಜನಿಕರಲ್ಲಿಆತಂಕ ಮೂಡಿಸಿದ್ದಾರೆ.

ನಡುರಾತ್ರಿ 2 ಗಂಟೆ ಸುಮಾರಿಗೆ ಡೆವಿಲ್ ಮುಖವಾಡ ಧರಿಸಿ ಯುವಕರು ಹುಚ್ಚಾಟ ನಡೆಸಿ, ಸಾರ್ವಜನಿಕರಲ್ಲಿಆತಂಕ ಮೂಡಿಸಿದ್ದಾರೆ. ಸ್ಥಳೀಯ ನಿವಾಸಿಗಳು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ.

ಮತ್ತಿಕೆರೆ ಡೆವಿಲ್ಸ್​ ಅರೆಸ್ಟ್​:
ಯಶವಂತಪುರ ಠಾಣಾ ಪೊಲೀಸರು ಪ್ರಾಂಕ್ ಮಾಡುತ್ತಿದ್ದ 7 ಜನ ಯುವಕರನ್ನ ವಶಕ್ಕೆ ಪಡೆದಿದ್ದಾರೆ.ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕ್ಯಾಮೆರಾ, ಸಾಮಗ್ರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ದೆವ್ವಗಳು ಆರ್​ಟಿ ನಗರದಿಂದ ಬಂದವು:
ಮನೋರಂಜನೆಗಾಗಿ ಪ್ರಾಂಕ್ ಮಾಡ್ತಿದ್ದ ಯುವಕರು, ಕೂಕೀ ಪೀಡಿಯಾ ಎಂಬ ಯೂಟ್ಯೂಬ್ ಪೇಜ್ ಹೊಂದಿದ್ದರು. ಹೀಗಾಗಿ ಇಂತಹ ಸಾಹಸಕ್ಕೆ ಮುಂದಾಗಿದ್ದರು. ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ಪ್ರಾಂಕ್ ಮಾಡಿ ತೆರಳಿದ್ದರು. ಆದರೆ ಓರ್ವ ಯುವಕ ಮಾತ್ರ ಸ್ಥಳದಲ್ಲಿ ಬಿಟ್ಟಿದ್ದ ಸ್ಪೀಕರ್ ಹುಡುಕುತ್ತಿದ್ದ ಈ ವೇಳೆ ಪೊಲೀಸರು ಅವನನ್ನು ವಶಕ್ಕೆ ಪಡೆದು ಇನ್ನುಳಿದ 7 ಜನರನ್ನ ಕರೆಸಿಕೊಂಡಿದ್ದಾರೆ. ಶಾನ್ ಮಲಿಕ್ , ನವೀದ್, ಸಜಿಲ್ ಮಹಮದ್, ಮಹಮದ್ ಅಕ್ಯೂಬ್, ಸಾಕೀಬ್, ಸೈಯದ್ ನಬೀಲ್ ಹಾಗೂ ಯೂಸುಫ್ ಅಹಮದ್ ಬಂಧಿತರು ಇವರು ಇಂಜಿನಿಯರಿಂಗ್, ಬಿಬಿಎಂ ವಿದ್ಯಾರ್ಥಿಗಳಾಗಿದ್ದಾರೆ.

Published On - 2:42 pm, Mon, 11 November 19