ಚಾಮರಾಜನಗರ: ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ವೇಳೆ ಭಕ್ತರು ಬಾರದಂತೆ ಕ್ರಮ ಕೈಗೊಳ್ಳಲಾಗಿದ್ದು, ಮಲೆ ಮಹದೇಶ್ವರ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಎಂ.ಆರ್. ರವಿ ಆದೇಶ ಹೊರಡಿಸಿದ್ದಾರೆ. ಏಪ್ರಿಲ್ ತಿಂಗಳ 10ನೇ ತಾರೀಕಿನಿಂದ 13ನೇ ತಾರೀಕಿನವರೆಗೆ ಭಕ್ತರಿಗೆ ನಿರ್ಬಂಧ ಹೇರಲಾಗಿದ್ದು, ಜಾತ್ರಾ ಮಹೋತ್ಸವದಲ್ಲಿ 200 ಭಕ್ತರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ.
ಹಲವೆಡೆ ಕೊರೊನಾ ಭಯವೇ ಇಲ್ಲ
ವಿಜಯಪುರ: ಜನರು ಉದ್ಯಾನವನಗಳಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ಕೆಲವರು ಮಾಸ್ಕ್ ಹಾಕಿದರೆ ಹಲವಾರು ಜನರು ಮಾಸ್ಕ್ ಧರಿಸದೇ ಎಲ್ಲೆಡೆ ಓಡಾಡುತ್ತಿದ್ದಾರೆ. ಸಾಮಾಜಿಕ ಅಂತರ ಪಾಲಿಸದೇ ಗುಂಪು ಗುಂಪಾಗಿ ಜನರು ಉದ್ಯಾನವನಗಳಿಗೆ ಬರುತ್ತಿದ್ದಾರೆ. ಹೀಗಿದ್ದಾಗಲೂ ಸರ್ಕಾರ ನಿಗದಿ ಮಾಡಿದ ಪ್ರಮಾಣಕ್ಕಿಂತ ಹೆಚ್ಚು ಜನರನ್ನು ಪಾರ್ಕ್ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
ಹಾಸನದಲ್ಲಿ 104 ಜನರಿಗೆ ಕೊರೊನಾ ದೃಢ
ಜಿಲ್ಲೆಯಲ್ಲಿ ಇಂದು (ಏಪ್ರಿಲ್ 05) 104 ಜನರಿಗೆ ಕೊರೊನಾ ದೃಢಪಟ್ಟಿದೆ. ಇಂದು ಒಬ್ಬರು ಕೊನಾಕ್ಕೆ ಬಲಿಯಾಗಿದ್ದಾರೆ. 5 ತಿಂಗಳ ಬಳಿಕ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ಒಟ್ಟು ಈವರೆಗೆ ಕೊರೊನಾ ಸೋಂಕಿಗೆ 476 ಜನ ಬಲಿಯಾಗಿದ್ದಾರೆ.
ಸರ್ಕಾರದ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ ಕೊರೊನಾ ಹೆಚ್ಚಾಗಿದೆ; ವಾಟಾಳ್ ನಾಗರಾಜ್
ಸರ್ಕಾರದ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ ಕೊರೊನಾ ಹೆಚ್ಚಾಗಿದೆ. ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಕೊರೊನಾ ನಿಯಂತ್ರಣಕ್ಕಿಂತ ಅಧಿಕಾರ ಮುಖ್ಯವಾಗಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: India Coronavirus Update: ಕಳೆದ 24 ಗಂಟೆಯಲ್ಲಿ ದೇಶದಲ್ಲಿ 93,249 ಜನರಿಗೆ ಕೊರೊನಾ ಸೋಂಕು, 513 ಬಲಿ
Akshay Kumar: ನಟ ಅಕ್ಷಯ್ ಕುಮಾರ್ಗೆ ಕೊರೊನಾ ಪಾಸಿಟಿವ್! ಹೋಮ್ ಕ್ವಾರಂಟೈನ್ನಲ್ಲಿ ಕಿಲಾಡಿ
(yugadi festival Devotees are not allowed to enter the Male Mahadeshwara Temple from Corona at chamrajnagar)