ಮುಂದಿನ ಬಾರಿ ಚಾಮರಾಜಪೇಟೆಯಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಒತ್ತಾಯ; ಆಯ್ತು, ನೋಡೋಣ ಎಂದ ವಿಪಕ್ಷ ನಾಯಕ

| Updated By: sandhya thejappa

Updated on: Jun 12, 2021 | 3:43 PM

ಜಮೀರ್ ಚಾಮರಾಜಪೇಟೆಯಲ್ಲಿ ಅತಿ ಹೆಚ್ಚು ಕೆಲಸ ಮಾಡಿದ್ದಾರೆ. ನಾನೇ ಹಲವಾರು ಬಾರಿ ಕ್ಷೇತ್ರಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ. ಆಡಳಿತ ಪಕ್ಷದ ಸದಸ್ಯರಿಗಿಂತ ಹೆಚ್ಚು ಕೆಲಸ ಮಾಡಿದ್ದಾರೆ. ನಾನೇ ಅನೇಕ ಬಾರಿ ಇಲ್ಲಿಗೆ ಬಂದಿದ್ದೇನೆ. ಹೀಗಾಗಿ ಮಾಧ್ಯಮದವರು ನನ್ನ ಅನೇಕ ಬಾರಿ ಪ್ರಶ್ನೆ ಮಾಡಿದ್ದಾರೆ.

ಮುಂದಿನ ಬಾರಿ ಚಾಮರಾಜಪೇಟೆಯಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಒತ್ತಾಯ; ಆಯ್ತು, ನೋಡೋಣ ಎಂದ ವಿಪಕ್ಷ ನಾಯಕ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಬೆಂಗಳೂರು; ಚಾಮರಾಜಪೇಟೆಯಿಂದ ಸಿದ್ದರಾಮಯ್ಯ ಸ್ಪರ್ಧಿಸಬೇಕೆಂದು ಕಾರ್ಯಕ್ರಮದಲ್ಲಿ ಒತ್ತಾಯಿಸಿದ ಹಿನ್ನೆಲೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಆಯ್ತು ನೋಡೋಣ ಎಂದು ಹೇಳಿದ್ದಾರೆ. ಜೆ.ಜೆ.ನಗರದಲ್ಲಿ ಪೌರ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ಮಾಡಿದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ಸ್ಪರ್ಧಿಸುವಂತೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಒತ್ತಾಯಿಸಿದ್ದಾರೆ. ಇದೇ ವೇಳೆ ಜೋರಾಗಿ ಕೂಗಿ ಎಂದು ಜಮೀರ್ ಹೇಳಿದರು. ಆಗ ವಿಪಕ್ಷ ನಾಯಕ ಸಿದ್ದರಾಮಯ್ಯ ಆಯ್ತು ಎಂದು ಹೇಳಿ ಸಮಾಧಾನ ಮಾಡಿದರು.

ಜಮೀರ್ ಚಾಮರಾಜಪೇಟೆಯಲ್ಲಿ ಅತಿ ಹೆಚ್ಚು ಕೆಲಸ ಮಾಡಿದ್ದಾರೆ. ನಾನೇ ಹಲವಾರು ಬಾರಿ ಕ್ಷೇತ್ರಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ. ಆಡಳಿತ ಪಕ್ಷದ ಸದಸ್ಯರಿಗಿಂತ ಹೆಚ್ಚು ಕೆಲಸ ಮಾಡಿದ್ದಾರೆ. ನಾನೇ ಅನೇಕ ಬಾರಿ ಇಲ್ಲಿಗೆ ಬಂದಿದ್ದೇನೆ. ಹೀಗಾಗಿ ಮಾಧ್ಯಮದವರು ನನ್ನ ಅನೇಕ ಬಾರಿ ಪ್ರಶ್ನೆ ಮಾಡಿದ್ದಾರೆ. ಚಾಮರಾಜಪೇಟೆಯಲ್ಲಿ ಸ್ಪರ್ಧಿಸುತ್ತಿರಾ ಎಂದು ಪ್ರಶ್ನಿಸಿದ್ದಾರೆ. ನಾನು ಬಾದಮಿ ಶಾಸಕ. ಈಗ ಅಲ್ಲೆ ಇದ್ದೇನೆ. ಜಮೀರ್ ನನ್ನನ್ನ ಸ್ಪರ್ಧೆಗೆ ಆಹ್ವಾನಿಸಿರುವುದು ಅವರ ಔದಾರ್ಯ ಅಷ್ಟೇ ಎಂದು ಸಿದ್ದರಾಮಯ್ಯ ಹೇಳಿದರು.

ಈ ವೇಳೆ ಮಧ್ಯಪ್ರವೇಶ ಪ್ರವೇಶಿಸಿದ ಜಮೀರ್, ಇಲ್ಲ ಸರ್. ನೀವು ಇಲ್ಲೇ ನಿಂತ್ಕೋಬೇಕು ಎಂದು ಒತ್ತಾಯಿಸಿದರು. ಜೊತೆಗೆ ಇಲ್ಲೇ ಸ್ಪರ್ಧಿಸಬೇಕೆಂದು ನೂರಾರು ಮಂದಿ ಕೂಗಿದರು. ಆಗ ಸಿದ್ದರಾಮಯ್ಯ ಆಯ್ತು.. ನೋಡೋಣ ಎಂದರು.

ಮೋದಿ ಜನರ ರಕ್ತವನ್ನು ಕುಡಿಯುತ್ತಿದ್ದಾರೆ; ಸಿದ್ದರಾಮಯ್ಯ
ಪ್ರಧಾನಿ ನರೇಂದ್ರ ಮೋದಿ ಜನರ ರಕ್ತವನ್ನು ಕುಡಿಯುತ್ತಿದ್ದಾರೆ. ತಿಗಣೆ ರಕ್ತ ಹೀರಿದಂತೆ ಪ್ರಧಾನಿ ಮೋದಿ ರಕ್ತ ಹೀರುತ್ತಿದ್ದಾರೆ ಎಂದು ಹೇಳಿಕೆ ನೀಡಿದ ಸಿದ್ದರಾಮಯ್ಯ. ಎಲ್ಲ ಕಡೆ ಹುಡುಗರು ಮೋದಿ ಮೋದಿ ಎಂದು ಹೇಳುತ್ತಿದ್ದರೆಂದು ಮಿಮಿಕ್ರಿ ಮಾಡಿದರು. ಪ್ರಧಾನಿ ಮೋದಿಯಷ್ಟು ಸುಳ್ಳು ಹೇಳಿದವರು ಯಾರೂ ಇಲ್ಲ. ಜಾಗಟೆ ಬಾರಿಸಿ, ಚಪ್ಪಾಳೆ ಹೊಡಿಸಿ ಮೌಢ್ಯತೆ ಹೆಚ್ಚಿಸಿದರು. ಇಂತಹ ಪ್ರಧಾನಿ ನಮ್ಮ ದೇಶದಲ್ಲಿ ಎಂದೂ ಇರಲೇ ಇಲ್ಲ ಎಂದು ಅಭಿಪ್ರಾಯಪಟ್ಟರು.

ಕೊರೊನಾ ಎರಡನೇ ಅಲೆ ಬಗ್ಗೆ ಸರ್ಕಾರಕ್ಕೆ ಮೊದಲೇ ಗೊತ್ತಿತ್ತು. ಆದರೆ ಯಾರೂ ಕೊರೊನಾ ನಿಯಂತ್ರಣಕ್ಕೆ ಮುಂದಾಗಲಿಲ್ಲ. ಇವರು ಯಾವುದೇ ಸಿದ್ಧತೆಯನ್ನು ಕೂಡ ಮಾಡಿಕೊಳ್ಳಲಿಲ್ಲ. ಇದರ ಪರಿಣಾಮವಾಗಿ ಜನರು ಪ್ರಾಣ ಕಳೆದುಕೊಂಡರು. ದೇಶದಲ್ಲಿ ಲಕ್ಷಾಂತರ ಜನ ಮೃತಪಟ್ಟರೂ ಲೆಕ್ಕ ಕೊಡಲಿಲ್ಲ. ಇದು ಲಜ್ಜೆಗೆಟ್ಟ, ಮಾನಗೆಟ್ಟ ಸರ್ಕಾರ. ಇಂತಹ ಮುಖ್ಯಮಂತ್ರಿಯನ್ನು ನೋಡಿಯೇ ಇರಲಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ

ರೋಹಿಣಿ ಸಿಂಧೂರಿ ಒಳ್ಳೆ ಆಡಳಿತಗಾರ್ತಿ ಅಂತ ಅಂದುಕೊಂಡಿದ್ದೀರಾ? ಮಾಜಿ ಸಚಿವ ಎ.ಮಂಜು ಪ್ರಶ್ನೆ

Siddalingaiah Funeral: ಸಕಲ ಸರ್ಕಾರಿ ಗೌರವದೊಂದಿಗೆ ನಡೆದ ಡಾ.ಸಿದ್ದಲಿಂಗಯ್ಯ ಅಂತ್ಯಸಂಸ್ಕಾರ; ಕೊನೆಯ ಫೋಟೊಗಳು ಇಲ್ಲಿವೆ

(zameer ahmad urged Siddaramaiah to contest from Chamarajapete next time)

Published On - 3:29 pm, Sat, 12 June 21