ರೋಹಿಣಿ ಸಿಂಧೂರಿ ಒಳ್ಳೆ ಆಡಳಿತಗಾರ್ತಿ ಅಂತ ಅಂದುಕೊಂಡಿದ್ದೀರಾ? ಮಾಜಿ ಸಚಿವ ಎ.ಮಂಜು ಪ್ರಶ್ನೆ
Rohini Sindhuri: ಭೂ ಮಾಫಿಯಾ ನಡೆಸುವ ಅಕ್ರಮ ರಾಜಕಾರಣಿಗಳಿಗೆ ಅಧಿಕಾರಿಗಳೇ ಸಹಾಯ ಮಾಡುತ್ತಾರೆ. ಅಧಿಕಾರಿಗಳು ಸಹಾ ರಿಯಲ್ ಎಸ್ಟೇಟ್ ಮಾಡ್ತಾ ಇದ್ದಾರೆ. ನಾನು ತಪ್ಪು ಮಾಡಿದ್ದರೆ ನಾನು ಜೈಲಿನ ಹಿಂದೆ ಇರುತ್ತಿದ್ದೆ ಎಂದು ಅವರು ಟೀಕೆ ನಡೆಸಿದರು.
ಮೈಸೂರು: ಹಾಸನದಲ್ಲಿ ಒಂದೂವರೆ ವರ್ಷ ರೋಹಿಣಿ ಸಿಂಧೂರಿ ಜಿಲ್ಲಾಧಿಕಾರಿಯಾಗಿದ್ದರು. ಆಗ 1 ಗುಂಟೆಯಷ್ಟೂ ಸರ್ಕಾರಿ. ಇಲ್ಲಿಯೂ ಭೂಮಿ ಒತ್ತುವರಿ ತೆರವು ಆಗಿರಲಿಲ್ಲ. ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಒಳ್ಳೆ ಆಡಳಿತಗಾರ್ತಿ ಅಂತ ನೀವು ಅಂದುಕೊಂಡಿದ್ದೀರಾ? ಮಾತನಾಡುವ ರೀತಿ ಅವರು ಇಲ್ಲ ನಾನು ಯಾರ ಪರವಾಗಿ ಮೈಸೂರಿಗೆ ಬಂದಿಲ್ಲ. ಬದಲಿಗೆ ನಿರ್ಗಮಿತ ಡಿಸಿಯ ಕಾರ್ಯ ವೈಖರಿ ತಿಳಿಸಲು ಬಂದಿದ್ದೇನೆ ಎಂದು ಮಾಜಿ ಸಚಿವ ಎ.ಮಂಜು ರೋಹಿಣಿ ಸಿಂಧೂರಿ ಅವರ ವಿರುದ್ಧ ಹರಿಹಾಯ್ದರು.
ಭೂ ಮಾಫಿಯ ಅಕ್ರಮ ರಾಜಕಾರಣಿಗಳಿಗೆ ಅಧಿಕಾರಿಗಳೇ ಸಹಾಯ ಮಾಡುತ್ತಾರೆ. ಅಧಿಕಾರಿಗಳು ಸಹಾ ರಿಯಲ್ ಎಸ್ಟೇಟ್ ಮಾಡ್ತಾ ಇದ್ದಾರೆ. ನಾನು ತಪ್ಪು ಮಾಡಿದ್ದರೆ ನಾನು ಜೈಲಿನ ಹಿಂದೆ ಇರುತ್ತಿದ್ದೆ. ಭೂ ಮಾಫಿಯಾ ಮಾಡುವ ಅಕ್ರಮ ರಾಜಕಾರಣಿಗಳಿಗೆ ಅಧಿಕಾರಿಗಳೇ ಸಹಾಯ ಮಾಡುತ್ತಾರೆ ಎಂದು ಅವರು ಟೀಕೆ ನಡೆಸಿದರು.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪರ ಆನ್ಲೈನ್ ಕ್ಯಾಂಪೇನ್ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರ ಆನ್ಲೈನ್ ಕ್ಯಾಂಪೇನ್ ನಡೆಯುತ್ತಿದೆ. ರೋಹಿಣಿ ಸಿಂಧೂರಿ ಅವರನ್ನು ಮತ್ತೆ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ನೇಮಿಸುವಂತೆ ಒತ್ತಾಯಿಸಿ, ಚೇಂಜ್ ಆರ್ಗ್ ಸಂಸ್ಥೆಯಿಂದ ‘ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ’ ಅಭಿಯಾನ ಆರಂಭವಾಗಿದೆ. ಈಗಾಗಲೇ ಸುಮಾರು 26ಸಾವಿರ ಜನರಿಂದ ಸಹಿ ಸಂಗ್ರಹವಾಗಿದ್ದು, ರೋಹಿಣಿ ಸಿಂಧೂರಿ ಅವರನ್ನು ಮರಳಿ ಮೈಸೂರಿಗೆ ನೇಮಿಸುವಂತೆ ಮನವಿ ಮಾಡಿದೆ. ಚೇಂಜ್ ಆರ್ಗ್ ಸಂಸ್ಥೆ, ಸಹಿ ಸಂಗ್ರಹ ಅಭಿಯಾನದ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ಗೆ ಮನವಿ ಮಾಡಿದೆ ಎಂಬ ಮಾಹಿತಿ ದೊರೆತಿದೆ.
ಮತ್ತೊಂದು ಆಡಿಯೋ ವೈರಲ್ ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಅವರದ್ದು ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಡಿಯೋದಲ್ಲಿ ಸಾ.ರಾ.ಮಹೇಶ್ ಮತ್ತು ರಾಜೀವ್ ವಿರುದ್ಧ ಆರೋಪ ಕೇಳಿಬಂದಿದೆ. ತನ್ನ ವರ್ಗಾವಣೆಗೆ ಇವರಿಬ್ಬರ ಷಡ್ಯಂತ್ರವಿದೆ ಎಂದು ದೂರಿದ್ದಾರೆ. ಅಲ್ಲದೇ ಸಾ.ರಾ.ಮಹೇಶ್ ಮತ್ತು ರಾಜೀವ್ ಭೂ ಹಗರಣದಲ್ಲಿ ಭಾಗಿದ್ದಾರೆ ಎನ್ನುವ ಮಾತುಗಳು ವೈರಲ್ ಆದ ಆಡಿಯೋದಲ್ಲಿ ಕೇಳಿಬಂದಿವೆ.
ಇದನ್ನೂ ಓದಿ: ವರ್ಗಾವಣೆಗೂ ಮುನ್ನ ಭೂ ಅಕ್ರಮದ ಬಗ್ಗೆ ತನಿಖೆಗೆ ಆದೇಶಿಸಿದ ರೋಹಿಣಿ ಸಿಂಧೂರಿ; ಆದೇಶ ಪ್ರತಿ ವೈರಲ್
ಭಾರತ ಸಿಂಧೂರಿ’ ಟೈಟಲ್ನಲ್ಲಿ ಸಿನಿಮಾ ಆಗಲಿದೆ ರೋಹಿಣಿ ಸಿಂಧೂರಿ ಜೀವನ ಚರಿತ್ರೆ
(Former Minister A Manju questions is IAS Rohini Sindhuri is a good administrator?)
Published On - 2:49 pm, Sat, 12 June 21