ಕಣ್ಣಿನ ಶಸ್ತ್ರಚಿಕಿತ್ಸೆ ಆಗಲೇಬೇಕು, ಆದ್ರೆ ಸರ್ಟಿಫಿಕೇಟ್​ಗಾಗಿ ಬಾಲಕಿ ಪರದಾಟ!

|

Updated on: Apr 20, 2020 | 5:53 PM

ಬೆಂಗಳೂರು: ಕೊರೊನ ಆತಂಕದಿಂದ ಇಡೀ ದೇಶವೇ ಲಾಕ್​ಡೌನ್​ ಆಗಿದೆ. ಇದರಿಂದ ಬೆಂಗಳೂರಿನಲ್ಲಿ ಎರಡೂ ಕಣ್ಣುಗಳನ್ನು ಕಳೆದುಕೊಂಡಿರುವ ಕಲಬುರಗಿ ಮೂಲದ 10 ವರ್ಷದ ಬಾಲಕಿ ಅಂಬಿಕಾ ಪರದಾಡುವಂತಾಗಿದೆ. ನಾಳೆ ಹೊಸೂರಿನ‌ ಶಂಕರ್ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಯಬೇಕಿದೆ. ಶಸ್ತ್ರಚಿಕಿತ್ಸೆ ಮಾಡಿದ್ರೆ ಒಂದು ಕಣ್ಣು ಬರುವ ಸಾಧ್ಯತೆ ಇದೆ. ಚಿಕಿತ್ಸೆಗೆ ಸ್ಕ್ಯಾನಿಂಗ್, ಫಿಸಿಕಲ್ ಸರ್ಟಿಫಿಕೇಟ್ ಪಡೆಯಬೇಕು. ಆದ್ರೆ ಇಂದು ಭಾನುವಾರ ಆಗಿರುವ ಕಾರಣ ನಗರದಲ್ಲಿ ಯಾವುದೇ ಸ್ಕ್ಯಾನಿಂಗ್ ಸೆಂಟರ್ ತೆರೆದಿಲ್ಲ. ಅಲ್ಲದೆ ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಿಂಟರ್ ಸಹ ಕೆಟ್ಟಿದೆ. […]

ಕಣ್ಣಿನ ಶಸ್ತ್ರಚಿಕಿತ್ಸೆ ಆಗಲೇಬೇಕು, ಆದ್ರೆ ಸರ್ಟಿಫಿಕೇಟ್​ಗಾಗಿ ಬಾಲಕಿ ಪರದಾಟ!
Follow us on

ಬೆಂಗಳೂರು: ಕೊರೊನ ಆತಂಕದಿಂದ ಇಡೀ ದೇಶವೇ ಲಾಕ್​ಡೌನ್​ ಆಗಿದೆ. ಇದರಿಂದ ಬೆಂಗಳೂರಿನಲ್ಲಿ ಎರಡೂ ಕಣ್ಣುಗಳನ್ನು ಕಳೆದುಕೊಂಡಿರುವ ಕಲಬುರಗಿ ಮೂಲದ 10 ವರ್ಷದ ಬಾಲಕಿ ಅಂಬಿಕಾ ಪರದಾಡುವಂತಾಗಿದೆ. ನಾಳೆ ಹೊಸೂರಿನ‌ ಶಂಕರ್ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಯಬೇಕಿದೆ. ಶಸ್ತ್ರಚಿಕಿತ್ಸೆ ಮಾಡಿದ್ರೆ ಒಂದು ಕಣ್ಣು ಬರುವ ಸಾಧ್ಯತೆ ಇದೆ.

ಚಿಕಿತ್ಸೆಗೆ ಸ್ಕ್ಯಾನಿಂಗ್, ಫಿಸಿಕಲ್ ಸರ್ಟಿಫಿಕೇಟ್ ಪಡೆಯಬೇಕು. ಆದ್ರೆ ಇಂದು ಭಾನುವಾರ ಆಗಿರುವ ಕಾರಣ ನಗರದಲ್ಲಿ ಯಾವುದೇ ಸ್ಕ್ಯಾನಿಂಗ್ ಸೆಂಟರ್ ತೆರೆದಿಲ್ಲ. ಅಲ್ಲದೆ ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಿಂಟರ್ ಸಹ ಕೆಟ್ಟಿದೆ. ಹೀಗಾಗಿ ಅಂಬಿಕಾ ಕುಟುಂಬ ಈಗ ಬೆಂಗಳೂರಿನಲ್ಲಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

Published On - 4:49 pm, Sun, 19 April 20