ಸೋಮವಾರದಿಂದ ರೋಡಿಗಿಳಿಯಲಿವೆ ಬಿಎಂಟಿಸಿ ಬಸ್, ಆದ್ರೆ ಕಂಡೀಷನ್ಸ್ ಅಪ್ಲೆ!
ಬೆಂಗಳೂರು: ಲಾಕ್ಡೌನ್ ನಡುವೆಯೂ ಕೆಲಸ ಮಾಡುತ್ತಿರುವ ಕಂಪನಿಗಳಿಗೆ ಬಸ್ ಸೌಲಭ್ಯ ಕಲ್ಪಿಸಲು BMTC ಸಂಸ್ಥೆ ಸಿದ್ಧತೆ ನಡೆಸಿದೆ. ಕಾರ್ಖಾನೆಗಳು ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಬಿಎಂಟಿಸಿ ಬಸ್ ಸೌಲಭ್ಯ ಹೊದಗಿಸಲಿದೆ. ಕೇಂದ್ರ ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಬಾಡಿಗೆ ಆಧಾರದಲ್ಲಿ ನಾನ್ ಎಸಿ ಬಸ್ ನೀಡುವುದಕ್ಕೆ BMTC ತಯಾರಿದೆ. ಬಸ್ ಪಡೆಯುವವರಿಗೆ ಬಿಎಂಟಿಸಿ ಸಂಸ್ಥೆ ಕೆಲವು ಷರತ್ತುಗಳನ್ನ ವಿಧಿಸಿದೆ. ಬಸ್ನಲ್ಲಿ ಶೇ.40ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಬೇಕು. ಎಲ್ಲಾ ಪ್ರಯಾಣಿಕರು ಮಾಸ್ಕ್ ಧರಿಸಿರಲೇಬೇಕು. ಇಳಿಯುವಾಗ, ಹತ್ತುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಬಸ್ನಲ್ಲಿ […]
ಬೆಂಗಳೂರು: ಲಾಕ್ಡೌನ್ ನಡುವೆಯೂ ಕೆಲಸ ಮಾಡುತ್ತಿರುವ ಕಂಪನಿಗಳಿಗೆ ಬಸ್ ಸೌಲಭ್ಯ ಕಲ್ಪಿಸಲು BMTC ಸಂಸ್ಥೆ ಸಿದ್ಧತೆ ನಡೆಸಿದೆ. ಕಾರ್ಖಾನೆಗಳು ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಬಿಎಂಟಿಸಿ ಬಸ್ ಸೌಲಭ್ಯ ಹೊದಗಿಸಲಿದೆ. ಕೇಂದ್ರ ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಬಾಡಿಗೆ ಆಧಾರದಲ್ಲಿ ನಾನ್ ಎಸಿ ಬಸ್ ನೀಡುವುದಕ್ಕೆ BMTC ತಯಾರಿದೆ.
ಬಸ್ ಪಡೆಯುವವರಿಗೆ ಬಿಎಂಟಿಸಿ ಸಂಸ್ಥೆ ಕೆಲವು ಷರತ್ತುಗಳನ್ನ ವಿಧಿಸಿದೆ. ಬಸ್ನಲ್ಲಿ ಶೇ.40ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಬೇಕು. ಎಲ್ಲಾ ಪ್ರಯಾಣಿಕರು ಮಾಸ್ಕ್ ಧರಿಸಿರಲೇಬೇಕು. ಇಳಿಯುವಾಗ, ಹತ್ತುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಬಸ್ನಲ್ಲಿ ಎಲ್ಲಾ ಪ್ರಯಾಣಿಕರು ಸ್ಯಾನಿಟೈಸರ್ ಬಳಸಬೇಕು ಎಂಬ ಷರತ್ತುಗಳನ್ನು ವಿಧಿಸಿದೆ. ಈಗಾಗಲೇ 20 ಬಸ್‌ಗಳಿಗೆ ಕೆಲವು ಕಂಪನಿಗಳು ಬೇಡಿಕೆಯಿಟ್ಟಿವೆ.
Published On - 6:42 pm, Sun, 19 April 20