ಭಾರತದಲ್ಲಿ 16 ಸಾವಿರದ ಗಡಿ ದಾಟಿದ ಕೊರೊನಾ

ಭಾರತದಲ್ಲಿ 16 ಸಾವಿರದ ಗಡಿ ದಾಟಿದ ಕೊರೊನಾ

ದೆಹಲಿ: ಅದ್ಯಾಕೋ ಮಹಾಮಾರಿ ಕೊರೊನಾ ದೇಶಾದ್ಯಂತ ತನ್ನ ಆಟಾಟೋಪ ನಿಲ್ಲಿಸುತ್ತಲೇ ಇಲ್ಲ. ನಿನ್ನೆ ಕೂಡ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು, ನೂತನವಾಗಿ ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕನ್ಫರ್ಮ್ ಆಗಿವೆ. ಲಾಕ್​ಡೌನ್ ಪಾರ್ಟ್ ಒನ್ ಮುಗಿದು, ಪಾರ್ಟ್ 2 ಶುರುವಾದರೂ ದೇಶದಲ್ಲಿ ಕೊರೊನಾ ಕಂಟ್ರೋಲ್​ಗೇ ಬರ್ತಿಲ್ಲ. ಅದರಲ್ಲೂ ಕೆಲದಿನಗಳಿಂದ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಬೆಳೆಯುತ್ತಿರೋದು ದೇಶದ ಜನರ ನಿದ್ದೆಗೆ ಭಂಗವನ್ನುಂಟು ಮಾಡಿದೆ. ನಿನ್ನೆ ಕೂಡ ಬರೋಬ್ಬರಿ 1324 ಹೊಸ ಕೊರೊನಾ ಪ್ರಕರಣಗಳು ದೃಢವಾಗಿವೆ. ಹಾಗೂ ನಿನ್ನೆ ಒಂದೇ […]

sadhu srinath

|

Apr 20, 2020 | 7:25 AM

ದೆಹಲಿ: ಅದ್ಯಾಕೋ ಮಹಾಮಾರಿ ಕೊರೊನಾ ದೇಶಾದ್ಯಂತ ತನ್ನ ಆಟಾಟೋಪ ನಿಲ್ಲಿಸುತ್ತಲೇ ಇಲ್ಲ. ನಿನ್ನೆ ಕೂಡ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು, ನೂತನವಾಗಿ ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕನ್ಫರ್ಮ್ ಆಗಿವೆ.

ಲಾಕ್​ಡೌನ್ ಪಾರ್ಟ್ ಒನ್ ಮುಗಿದು, ಪಾರ್ಟ್ 2 ಶುರುವಾದರೂ ದೇಶದಲ್ಲಿ ಕೊರೊನಾ ಕಂಟ್ರೋಲ್​ಗೇ ಬರ್ತಿಲ್ಲ. ಅದರಲ್ಲೂ ಕೆಲದಿನಗಳಿಂದ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಬೆಳೆಯುತ್ತಿರೋದು ದೇಶದ ಜನರ ನಿದ್ದೆಗೆ ಭಂಗವನ್ನುಂಟು ಮಾಡಿದೆ. ನಿನ್ನೆ ಕೂಡ ಬರೋಬ್ಬರಿ 1324 ಹೊಸ ಕೊರೊನಾ ಪ್ರಕರಣಗಳು ದೃಢವಾಗಿವೆ. ಹಾಗೂ ನಿನ್ನೆ ಒಂದೇ ದಿನಕ್ಕೆ 31 ಮಂದಿ ಮೃತಪಟ್ಟಿರೋದು ಕೇಂದ್ರ ಸರ್ಕಾರವನ್ನ ಚಿಂತೆಗೀಡು ಮಾಡಿದೆ.

ಭಾರತದಲ್ಲಿ 16 ಸಾವಿರದ ಗಡಿ ದಾಟಿದ ಕೊರೊನಾ: ದೇಶದಲ್ಲಿ ಕೊರೊನಾ ಹಬ್ಬುವ ಭೀತಿ ಹಿನ್ನೆಲೆಯಲ್ಲಿ ಕಳೆದ ತಿಂಗಳಿಂದಲೇ ಲಾಕ್​ಡೌನ್ ಜಾರಿಗೆ ತರಲಾಗಿದೆ. ಆದ್ರೆ ಇಲ್ಲಿಯವರೆಗೂ ಕೊರೊನಾ ಸೋಂಕನ್ನು ದೇಶದಿಂದ ಒದ್ದು ಓಡಿಸಲು ಸಾಧ್ಯವಾಗುತ್ತಿಲ್ಲ. ಒಂದ್ಕಡೆ ಮಾತನ್ನು ಕೇಳದ ಕೆಲವರು ಸೋಂಕಿನ ಭೀತಿ ಹೆಚ್ಚಿಸಿದ್ರೆ ಮತ್ತೊಂದ್ಕಡೆ ಸೋಂಕು ತಡೆಗೆ ಸಮಸ್ಯೆಗಳಿರೋದು ಆತಂಕ ಸೃಷ್ಟಿಸಿದೆ. ಇಷ್ಟೆಲ್ಲದರ ಮಧ್ಯೆ ದೇಶಾದ್ಯಂತ ಸೋಂಕಿತರ ಸಂಖ್ಯೆ 16 ಸಾವಿರದ ಗಡಿ ದಾಟಿರೋದು ಬೆಚ್ಚಿ ಬೀಳುವಂತೆ ಮಾಡಿದೆ. ಹಾಗಾದ್ರೆ ಸದ್ಯದ ಪರಿಸ್ಥಿತಿಯಲ್ಲಿ ಯಾವ, ಯಾವ ರಾಜ್ಯದಲ್ಲಿ ಎಷ್ಟೆಷ್ಟು ಕೇಸ್‌ಗಳಿವೆ ಅನ್ನೋದಾದ್ರೆ.

ತೆಲಂಗಾಣದಲ್ಲಿ ಮೇ 7ರವರೆಗೂ ಕಟ್ಟುನಿಟ್ಟಿನ ಲಾಕ್​ಡೌನ್ ಜಾರಿ! ಇನ್ನು ನೆರೆಯ ತೆಲಂಗಾಣದಲ್ಲಿ ಕೊರೊನಾ ವೈರಸ್ ಹಬ್ಬದಂತೆ ನಾನಾ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೇ 7ರವರೆಗೂ ಲಾಕ್​ಡೌನ್ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಹಾಗೇ ಸದ್ಯದ ಮಟ್ಟಿಗೆ ‘ಸ್ವಿಗ್ಗೀ’ ಹಾಗೂ ‘ಜೊಮ್ಯಾಟೋ’ದಂತಹ ಸಂಸ್ಥೆಗಳ ಮೇಲೂ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಈ ಮೂಲಕ ತೆಲಂಗಾಣ ಸಿಎಂ ಕೆಸಿಆರ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಪಂಜಾಬ್​ನಲ್ಲಿ ಸಡಿಲಿಕೆ ಸಾಧ್ಯವೇ ಇಲ್ಲ! ಇನ್ನು ಕೊರೊನಾ ಕಾಟಕ್ಕೆ ತತ್ತರಿಸಿರುವ ರಾಜ್ಯಗಳ ಪೈಕಿ ಪಂಜಾಬ್ ಕೂಡ ಒಂದು. ಹೀಗಾಗಿ ಪಂಜಾಬ್​ನಲ್ಲಿ ಮೇ 3ರವರೆಗೂ ರಿಯಾಯಿತಿ ಇರದೆ ಲಾಕ್​ಡೌನ್ ಅನ್ವಯಿಸಲು ಪಂಜಾಬ್ ಸಿಎಂ ಆದೇಶವನ್ನ ಹೊರಡಿಸಿದ್ದಾರೆ.

ಒಟ್ನಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಕೊಂಚ ರಿಲ್ಯಾಕ್ಸ್ ಆಗಿದ್ದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ 2ನೇ ಹಂತದ ಲಾಕ್​ಡೌನ್​ನ ಕಟ್ಟುನಿಟ್ಟಾಗಿ ಜಾರಿಗೆ ತರಲು ಸರ್ಕಾರ ಹಾಗೂ ಭದ್ರತಾ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ. ಇನ್ನು ಸರ್ಕಾರದ ಆದೇಶವನ್ನ ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ಮಾತ್ರ, ಪರಿಸ್ಥಿತಿ ಸುಧಾರಿಸಲು ಸಾಧ್ಯ. ಇಲ್ಲವಾದರೆ ಮತ್ತಷ್ಟು ದಿನ ಲಾಕ್​ಡೌನ್ ಮುಂದುವರಿಸುವ ಅನಿವಾರ್ಯತೆ ಎದುರಾದರೂ ಆಗಬಹುದು. ಈ ಹಿನ್ನೆಲೆಯಲ್ಲಿ ಜನರು ಕೂಡ ಅಲರ್ಟ್ ಆಗಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಸಾಥ್ ನೀಡಬೇಕಿದೆ.

Follow us on

Related Stories

Most Read Stories

Click on your DTH Provider to Add TV9 Kannada