ಕೊರೊನಾ ವಿರುದ್ಧ ಹೋರಾಡಲು ಕೇಂದ್ರದಿಂದ ಬರಲಿದೆ ವಿಶೇಷ ತಂಡ
ದೆಹಲಿ: ದೇಶದ ಮಹಾನಗರಗಳಲ್ಲಿ ಕೊರೊನಾ ಕಂಟ್ರೋಲ್‌ಗೇ ಬರ್ತಿಲ್ಲ. ಹೆಮ್ಮಾರಿ ರೀತಿ ಕೊರೊನಾ ಹರಡುತ್ತಲೇ ಇದೆ. ವೈರಸ್ ಅನ್ನು ನಿಯಂತ್ರಣ ಮಾಡೋದಕ್ಕೆ ಕೇಂದ್ರ ಸರ್ಕಾರ ಪ್ಲ್ಯಾನ್ ಮಾಡಿದೆ. ಅದರಂತೆ ವಿಶೇಷ ತಂಡ ಮಹಾನಗರಗಳಿಗೆ ಭೇಟಿ ಕೊಟ್ಟು ಅಧ್ಯಯನ ನಡೆಸಲಿದೆ. ಹಾಗಾದ್ರೆ ಎಲ್ಲೆಲ್ಲಿಗೆ ಭೇಟಿ ನೀಡಲಿದೆ ಅನ್ನೋದ್ರ ಡಿಟೇಲ್ಸ್ ಇಲ್ಲಿದೆ. ಹೆಮ್ಮಾರಿ ವಿರುದ್ಧ ಹೋರಾಡಲು ಬರಲಿದೆ ಕೇಂದ್ರ ವಿಶೇಷ ತಂಡ! ಹೌದು.. ದಿನದಿಂದ ದಿನಕ್ಕೆ ದೇಶದಲ್ಲಿ ಕೊರೊನಾ ಅನ್ನೋ ಮಹಾಮಾರಿಯ ಅಟ್ಟಹಾಸ ಮುಂದುವರಿಯುತ್ತಲೇ ಇದೆ. ಇನ್ನೇನು ಒಂದೆರಡು ದಿನದಲ್ಲಿ ಸೋಂಕಿತರ […]
ದೆಹಲಿ: ದೇಶದ ಮಹಾನಗರಗಳಲ್ಲಿ ಕೊರೊನಾ ಕಂಟ್ರೋಲ್‌ಗೇ ಬರ್ತಿಲ್ಲ. ಹೆಮ್ಮಾರಿ ರೀತಿ ಕೊರೊನಾ ಹರಡುತ್ತಲೇ ಇದೆ. ವೈರಸ್ ಅನ್ನು ನಿಯಂತ್ರಣ ಮಾಡೋದಕ್ಕೆ ಕೇಂದ್ರ ಸರ್ಕಾರ ಪ್ಲ್ಯಾನ್ ಮಾಡಿದೆ. ಅದರಂತೆ ವಿಶೇಷ ತಂಡ ಮಹಾನಗರಗಳಿಗೆ ಭೇಟಿ ಕೊಟ್ಟು ಅಧ್ಯಯನ ನಡೆಸಲಿದೆ. ಹಾಗಾದ್ರೆ ಎಲ್ಲೆಲ್ಲಿಗೆ ಭೇಟಿ ನೀಡಲಿದೆ ಅನ್ನೋದ್ರ ಡಿಟೇಲ್ಸ್ ಇಲ್ಲಿದೆ.
ಹೆಮ್ಮಾರಿ ವಿರುದ್ಧ ಹೋರಾಡಲು ಬರಲಿದೆ ಕೇಂದ್ರ ವಿಶೇಷ ತಂಡ! ಹೌದು.. ದಿನದಿಂದ ದಿನಕ್ಕೆ ದೇಶದಲ್ಲಿ ಕೊರೊನಾ ಅನ್ನೋ ಮಹಾಮಾರಿಯ ಅಟ್ಟಹಾಸ ಮುಂದುವರಿಯುತ್ತಲೇ ಇದೆ. ಇನ್ನೇನು ಒಂದೆರಡು ದಿನದಲ್ಲಿ ಸೋಂಕಿತರ ಸಂಖ್ಯೆ 20 ಸಾವಿರದ ಗಡಿಯನ್ನ ದಾಟೋ ಸಾಧ್ಯತೆಯಿದೆ. ಆದ್ರೆ ಸೋಂಕಿನ ಪ್ರಮಾಣ ಇಳಿಕೆಯಾಗುವ ಯಾವ ಲಕ್ಷಣಗಳೂ ಕಾಣಿಸ್ತಿಲ್ಲ. ಸಾಮಾನ್ಯ ನಗರಗಳಿಗಿಂತ ದೇಶದ ದೊಡ್ಡ ಮಹಾನಗರಗಳಲ್ಲಿ ಸೋಂಕಿತರ ಪ್ರಮಾಣ ಗಣನೀಯವಾಗಿ ಏರಿಕೆಯಾಗ್ತಿರೋದು ತುಂಬಾನೇ ಆತಂಕಕ್ಕೆ ಕಾರಣವಾಗಿದೆ.
ಕೇಂದ್ರ ಆರೋಗ್ಯ ಇಲಾಖೆ ರಾಜ್ಯಗಳಿಂದ ಬರ್ತಿರೋ ಕೊರೊನಾ ವಿಷವ್ಯೂಹದ ಮಾಹಿತಿಯಲ್ಲಿ ಇಂಥಾದ್ದೊಂದು ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ಕೊರೊನಾ ಪೀಡಿತ ಮಹಾನಗರಗಳಿಗೆ ಕೇಂದ್ರದ ವಿಶೇಷ ತಂಡಗಳನ್ನ ಕಳುಹಿಸೋಕೆ ಚಿಂತನೆ ನಡೆಸಲಾಗಿದೆ. ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡ್ರೂ ಸೋಂಕು ಕಡಿಮೆಯಾಗದ ಹಿನ್ನೆಲೆಯಲ್ಲಿ ಈ ಬಗ್ಗೆ ಕೇಂದ್ರ ಅಧಿಕಾರಿಗಳ ತಂಡ ರಾಜ್ಯಗಳಿಗೆ ಭೇಟಿ ಕೊಟ್ಟು ಅಧ್ಯಯನ ನಡೆಸಲಿದೆ. ಈ ತಂಡದಲ್ಲಿ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು, ಐಸಿಎಂಆರ್ ಸದಸ್ಯರು, ಗೃಹ ಇಲಾಖೆ ಪ್ರತಿನಿಧಿಗಳು ಒಳಗೊಂಡಿರುತ್ತಾರೆ.
ಎಲ್ಲೆಲ್ಲಿ ಆಪರೇಷನ್ ಕೊರೊನಾ? ಕೇಂದ್ರದ ವಿಶೇಷ ಅಧಿಕಾರಿಗಳ ತಂಡ ದೇಶದ ಮಹಾನಗರಗಳಿಗೆ ಭೇಟಿ ಕೊಟ್ಟು ಅಲ್ಲಿನ ಕೊರೊನಾ ಅಟ್ಟಹಾಸದ ಸ್ಥಿತಿ ಬಗ್ಗೆ ಅಧ್ಯಯನ ನಡೆಸಲಿದೆ. ಮಹಾರಾಷ್ಟ್ರ, ಪುಣೆ, ಚೆನ್ನೈ, ಕೋಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳದ ಇನ್ನೂ ಕೆಲವು ನಗರಗಳಿಗೂ ಭೇಟಿ ಕೊಡಲಿದೆ. ಜೊತೆಗೆ ಇಂದೋರ್, ಜೈಪುರ, ಹಾಗೂ ಉತ್ತರಪ್ರದೇಶದ ಗೌತಮ್ ಬುದ್ಧ ನಗರ, ದೆಹಲಿಯಲ್ಲೂ ಅಧಿಕಾರಿಗಳ ಟೀಂ ಭೇಟಿ ನೀಡಲಿದೆ ಎನ್ನಲಾಗ್ತಿದೆ.
ಇದಿಷ್ಟೇ ಅಲ್ಲ ಕೇಂದ್ರದ ಈ ಅಧ್ಯಯನ ತಂಡ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಕಡಿಮೆ ಎನ್ನಲಾಗ್ತಿದೆ. ಒಂದ್ವೇಳೆ ರಾಜಧಾನಿಯಲ್ಲಿ ಸೋಂಕು ಹೆಚ್ಚಾದ್ರೆ ರಾಜಧಾನಿಗೂ ಭೇಟಿ ನೀಡಬಹುದು. ಆದ್ರೆ ಬೆಂಗಳೂರು ಹೊರತುಪಡಿಸಿ ದೇಶದ ಹಲವು ಮಹಾನಗರಗಳಿಗೆ ಕೊರೊನಾ ಬೆಂಬಿಡದೆ ಕಾಡ್ತಿದ್ದು ಇದಕ್ಕೆ ಮುಲಾಮು ಹುಡುಕುವ ಪ್ರಯತ್ನಕ್ಕೆ ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿದೆ.
Published On - 7:14 am, Tue, 21 April 20