ತುಮಕೂರು: 2 ಕಾರುಗಳ ಮಧ್ಯೆ ಡಿಕ್ಕಿ, 12 ಜನರ ದುರ್ಮರಣ
ತುಮಕೂರು: ಕುಣಿಗಲ್ ತಾಲೂಕಿನ ಬ್ಯಾಲದಕೆರೆ ಬಳಿ ಸರಣಿ ಕಾರು ಅಪಘಾತವಾಗಿ 12ಜನ ಮೃತಪಟ್ಟಿರುವ ಘಟನೆ ನಡೆದಿದೆ. ಧರ್ಮಸ್ಥಳದಿಂದ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. 4ಜನ ಇದ್ದ ಕಾರು ಡಿವೈಡರ್ಗೆ ಡಿಕ್ಕಿಯಾಗಿದೆ ಇದೇ ವೇಳೆ ಮತ್ತೊಂದು ಟವೇರಾ ಕಾರು ಹಿಂದಿನಿಂದ ವೇಗವಾಗಿ ಬಂದು ಡಿಕ್ಕಿಯಾಗಿದೆ. ಈ ಪರಿಣಾಮ 12 ಜನರ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದವರು ಬೆಂಗಳೂರಿನ ನಿವಾಸಿಗಳಾಗಿದ್ದು, ಲಕ್ಷ್ಮೀಕಾಂತ್(24) ಸಂದೀಪ್(36), ಮಧು(28) ಮೃತಪಟ್ಟಿದ್ದಾರೆ. ಮತ್ತೊಬ್ಬನಿಗೆ ಗಾಯಗಳಾಗಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಧರ್ಮಸ್ಥಳದಿಂದ ವಾಪಸಾಗುತ್ತಿದ್ದ ಟವೇರಾ ಕಾರಿನಲ್ಲಿದ್ದ […]
ತುಮಕೂರು: ಕುಣಿಗಲ್ ತಾಲೂಕಿನ ಬ್ಯಾಲದಕೆರೆ ಬಳಿ ಸರಣಿ ಕಾರು ಅಪಘಾತವಾಗಿ 12ಜನ ಮೃತಪಟ್ಟಿರುವ ಘಟನೆ ನಡೆದಿದೆ. ಧರ್ಮಸ್ಥಳದಿಂದ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. 4ಜನ ಇದ್ದ ಕಾರು ಡಿವೈಡರ್ಗೆ ಡಿಕ್ಕಿಯಾಗಿದೆ ಇದೇ ವೇಳೆ ಮತ್ತೊಂದು ಟವೇರಾ ಕಾರು ಹಿಂದಿನಿಂದ ವೇಗವಾಗಿ ಬಂದು ಡಿಕ್ಕಿಯಾಗಿದೆ. ಈ ಪರಿಣಾಮ 12 ಜನರ ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದವರು ಬೆಂಗಳೂರಿನ ನಿವಾಸಿಗಳಾಗಿದ್ದು, ಲಕ್ಷ್ಮೀಕಾಂತ್(24) ಸಂದೀಪ್(36), ಮಧು(28) ಮೃತಪಟ್ಟಿದ್ದಾರೆ. ಮತ್ತೊಬ್ಬನಿಗೆ ಗಾಯಗಳಾಗಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಧರ್ಮಸ್ಥಳದಿಂದ ವಾಪಸಾಗುತ್ತಿದ್ದ ಟವೇರಾ ಕಾರಿನಲ್ಲಿದ್ದ ತಮಿಳುನಾಡು ಮೂಲದವರಾದ ಮಂಜುನಾಥ್(35)ಗೌರಮ್ಮ(60), ರತ್ನಮ್ಮ(52), ಸೌಂದರರಾಜ್(48) ಸರಳಾ(32), ರಾಜೇಂದ್ರ(27) ತನುಜಾ(25), ಪ್ರಶನ್ಯಾ(14) ಒಂದು ವರ್ಷದ ಹೆಣ್ಣು ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶ್ವೇತಾ(32), ಹರ್ಪಿತಾ(12) ಗಂಗೋತ್ರಿ(14), ಮಾಲಾಶ್ರೀ(4)ಗೆ ಗಂಭೀರ ಗಾಯಗಳಾಗಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ನಾಲ್ವರು ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಮೃತೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.